- Home
- Entertainment
- TV Talk
- Bigg Boss Kannada 12 ಮನೆಗೆ ಓಡೋಡಿ ಬಂದ ಜನರು; ಯಾರಿಗೂ ಗೊತ್ತಿಲ್ಲದ ಸತ್ಯ ಹೇಳಿದ ಮಾಳು ನಿಪನಾಳ
Bigg Boss Kannada 12 ಮನೆಗೆ ಓಡೋಡಿ ಬಂದ ಜನರು; ಯಾರಿಗೂ ಗೊತ್ತಿಲ್ಲದ ಸತ್ಯ ಹೇಳಿದ ಮಾಳು ನಿಪನಾಳ
Bigg Boss Kannada Season 12 Show: ಬಿಗ್ ಬಾಸ್‌ನಲ್ಲಿ ಈ ಬಾರಿ ಕ್ಯಾಪ್ಟನ್ ಟಾಸ್ಕ್ ನಡೆಯುತ್ತಿದೆ. ನಿಮ್ಮನ್ನು ಪ್ರೀತಿಸುವ ವೀಕ್ಷಕರು ಬಂದಿದ್ದಾರೆ. ವೀಕ್ಷಕರ ಮನಸ್ಸನ್ನು ಗೆಲ್ಲುವ ಅಭ್ಯರ್ಥಿಯೊಬ್ಬರು ಮುಂದಿನ ವಾರದ ಕ್ಯಾಪ್ಟನ್ ಆಗ್ತಾರೆ ಎಂದು ಬಿಗ್ ಬಾಸ್ ಹೇಳಿದ್ದರು.

ಕ್ಯಾಪ್ಟನ್ ಆಯ್ಕೆ
ಒಂದಿಷ್ಟು ಅಭಿಮಾನಿಗಳು ಬಂದಿದ್ದಾರೆ. ಅವರು ಯಾರು ಕ್ಯಾಪ್ಟನ್ ಆಗಬೇಕು ಎಂದು ಮತ ಹಾಕಿದ್ದಾರೆ. ವೀಕ್ಷಕರ ಎದುರು ಕ್ಯಾಪ್ಟನ್ ಆಗಲು ಅರ್ಹತೆ ಇರುವ ಸ್ಪರ್ಧಿಗಳು ಮಾತನಾಡಿದ್ದಾರೆ.
ಮಾಳು ನಿಪನಾಳ ಹೇಳಿದ್ದೇನು?
“ನಾನು ಇಲ್ಲಿ ಬಂದಾಗಿನಿಂದ ಸ್ಟ್ಯಾಂಡ್ ತಗೊಳಲ್ಲ ಅಂತ ಹೇಳ್ತಾರೆ. ಇಲ್ಲಿ ಯಾಕೆ ಜಗಳ ಆಡ್ತಿದೀವಿ ಅಂತ ಅವರಿಗೆ ಗೊತ್ತೇ ಇರೋದಿಲ್ಲ. ಜಗಳದಲ್ಲಿ ಸ್ಟ್ಯಾಂಡ್ ತಗೊಳೋಕೆ ಹೋದೋರು ಹುಚ್ಚರಾಗ್ತಾರೆ. ಹಳ್ಳಿ ಹುಡುಗ ಗತ್ತು ಏನು ಅಂತ ತೋರಸ್ತೀನಿ, ಕ್ಯಾಪ್ಟನ್ ಆಗ್ತೀನಿ, ಹೊಡಿ ಶಾವಿಗೆಯೊಳಗೆ ಮಜ್ಜಿಗೆ” ಎಂದು ಮಾಳು ನಿಪನಾಳ ಹೇಳಿದ್ದಾರೆ.
ಹಿಂದಿಯಲ್ಲೂ ಹೀಗೆ ಆಗಿತ್ತು
ಈ ಹಿಂದೆ ಹಿಂದಿಯ ಬಿಗ್ ಬಾಸ್ 13 ಶೋನಲ್ಲಿ ವೀಕ್ಷಕರು ಬಂದಿದ್ದರು. ಫಿನಾಲೆ ವೇಳೆಗೆ ಫೈನಲಿಸ್ಟ್ ಸ್ಪರ್ಧಿಗಳ ವಿಶೇಷ ವಿಡಿಯೋ ಪ್ಲೇ ಆಗಿತ್ತು. ಇದಕ್ಕೂ ಮುನ್ನ ವೀಕ್ಷಕರು ಕೂಡ ಇದ್ದರು. ಅವರ ಮಧ್ಯೆ ಸ್ಪರ್ಧಿಗಳು ಇನ್ನೋರ್ವ ಸ್ಪರ್ಧಿಗಳ ಬಗ್ಗೆ ಅಥವಾ ಬೇರೆ ಸ್ಪರ್ಧಿಗಳ ಬಗ್ಗೆ ಕೂಡ ಮಾತನಾಡಿದ್ದರು.
ಮುಂದೆ ಏನಾಗಬಹುದು?
ಈಗ ವೀಕ್ಷಕರು ಬಂದಿದ್ದಾರೆ. ವೀಕ್ಷಕರು ಸ್ಪರ್ಧಿಗಳ ಜೊತೆ ಮಾತನಾಡುತ್ತಾರಾ? ಇಲ್ಲವಾ ಎಂದು ಕಾದು ನೋಡಬೇಕಿದೆ. ಇನ್ನೊಂದು ಕಡೆ ವೀಕ್ಷಕರನ್ನು ನೋಡಿ ಸ್ಪರ್ಧಿಗಳ ಆಟದ ಸ್ಪೀಡ್ ಶುರುವಾಗಬಹುದು, ಇನ್ನೂ ಕೆಲವರು ಆಟ ಶುರು ಮಾಡಿದರೂ ಕೂಡ ಆಶ್ಚರ್ಯವಿಲ್ಲ.
ಮಾಳು ಕ್ಯಾಪ್ಟನ್ ಆಗುತ್ತಾರೆ?
ಈ ಮನೆಗೆ ಬಂದಾಗಿನಿಂದ ಮಾಳು ನಿಪನಾಳ ಅವರು ಅಷ್ಟು ಕಾಣಿಸಿಕೊಂಡಿಲ್ಲ ಎಂದು ಅಲ್ಲಿರುವ ಸ್ಪರ್ಧಿಗಳೇ ಆರೋಪ ಮಾಡುತ್ತಾರೆ. ಇನ್ನೊಂದು ಕಡೆ ಮಾಳು ನಿಪನಾಳ ಅವರು ಮನೆಗೆ ಹೋಗಬೇಕು ಎಂದು ಕೂಡ ಹೇಳಿದ್ದರು. ಇನ್ನು ಎಷ್ಟು ದಿನ ಅವರು ಅಲ್ಲಿ ಇರ್ತಾರೆ ಎಂದು ಕಾದು ನೋಡಬೇಕಿದೆ.