ಮೂರು ಸಲವೂ ಬಿಗ್ ಬಾಸ್ ಟ್ರೋಫಿ-ಹಣ ಹಿಡಿದ ಶೆಟ್ರು: ಕಿರುತೆರೆಯಲ್ಲಿ ಏನಿದು ಶೆಟ್ರು ಪ್ರಭಾವ?
ಕನ್ನಡ ಕಿರುತೆರೆ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ 9 ಸೀಸನ್‌ಗಳನ್ನು ಮುಗಿಸಿದೆ. ಯಾವ ವರ್ಷ ಟ್ರೋಫಿ ಯಾರ ಕೈಯಲ್ಲಿತ್ತು?
ಬಿಗ್ ಬಾಸ್ ಸೀಸನ್ 1 ರಿಯಾಲಿಟಿ ಶೋನ ಗೆದ್ದವರು ವಿಜಯ್ ರಾಘವೇಂದ್ರ (Vijay Raghavendra) ಹಾಗೂ ಎರಡನೇ ಸ್ಥಾನ ಪಡೆದುಕೊಂಡವರು ಅರುಣ್ ಸಾಗರ್.
ಬಿಗ್ ಬಾಸ್ ಸೀಸನ್ 2 ರಿಯಾಲಿಟಿ ಶೋನ ವಿನ್ನರ್ ಅಕುಲ್ ಬಾಲಾಜಿ ಮತ್ತು ಎರಡನೇ ಸ್ಥಾನವನ್ನು ಪಡೆದುಕೊಂಡವರು ಸೃಜನ್ ಲೋಕೇಶ್.
ಬಿಗ್ ಬಾಸ್ ಸೀಸನ್ 3 ರಿಯಾಲಿಟಿ ಶೋನ ವಿನ್ನರ್ ಶ್ರುತಿ ಕೃಷ್ಣ ಹಾಗೂ ಎರಡನೇ ಸ್ಥಾನವನ್ನು ಪಡೆದವರು ಚಂದನ್ ಕುಮಾರ್. ಇದೇ ಮೊದಲ ಮಹಿಳೆ ವಿನ್ನರ್ ಟ್ರೋಫಿ ಪಡೆದಿರುವುದು.
ಬಿಗ್ ಬಾಸ್ ಸೀಸನ್ 4 ರಿಯಾಲಿಟಿ ಶೋನ ವಿನ್ನರ್ ಒಳ್ಳೆ ಹುಡುಗ ಪ್ರಥಮ್ ಪಡೆದರೆ ಎರಡನೇ ಸ್ಥಾನವನ್ನು ಕಿರಿಕ್ ಕೀರ್ತಿ ಗೆದ್ದರು.
ಬಿಗ್ ಬಾಸ್ ಸೀಸನ್ 5 ರಿಯಾಲಿಟಿ ಶೋನ ಗೆದ್ದವರು ಚಂದನ್ ಶೆಟ್ಟಿ ಮತ್ತು ಎರಡನೇ ಸ್ಥಾನವನ್ನು ಪಡೆದವರು ದಿವಾಕರ್. ಈ ಸೀಸನ್‌ನಿಂದ ಚಂದನ್ ಮತ್ತು ನಿವೇದಿತಾ ಸ್ನೇಹಿತರಾಗಿ ಪ್ರೀತಿಸಿ ಆನಂತರ ಮದುವೆಯಾದರು.
ಬಿಗ್ ಬಾಸ್ ಸೀಸನ್ 6 ರಿಯಾಲಿಟಿ ಶೋನ ವಿನ್ನರ್ ಟ್ರೋಫಿ ಪಡೆದವರು ರೈತ ಶಶಿ ಕುಮಾರ್ ಹಾಗೂ ಎರಡನೇ ಸ್ಥಾನವನ್ನು ಪಡೆದುಕೊಂಡವರು ಗಾಯಕ ನವೀನ ಸಜ್ಜು.
ಬಿಗ್ ಬಾಸ್ ಸೀಸನ್ 7 ರಿಯಾಲಿಟಿ ಶೋನ ವಿನ್ನರ್ ಶೈನ್ ಶೆಟ್ಟಿ (Shine Shetty) ಹಾಗೂ ಎರಡನೇ ಸ್ಥಾನವನ್ನು ಪಡೆದುಕೊಂಡವರು ಹಾಸ್ಯ ನಟ ಕುರಿ ಪ್ರತಾಪ್.
ಬಿಗ್ ಬಾಸ್ ಸೀಸನ್ 8 ರಿಯಾಲಿಟಿ ಶೋನ ವಿನ್ನರ್ ಕಿರುತೆರೆ ಹಾಸ್ಯ ನಟ ಮಂಜು ಪಾವಗಡ ಹಾಗೂ ಎರಡನೇ ಸ್ಥಾನ ಪಡೆದದ್ದು ಬೈಕರ್ ಅರವಿಂದ ಕೆಪಿ.
ಬಿಗ್ ಬಾಸ್ ಸೀಸನ್ 9 ರಿಯಾಲಿಟಿ ಶೋನ ವಿಜೇತ ತುಳು ನಟ ರೂಪೇಶ್ ಶೆಟ್ಟಿ ಹಾಗೂ ಎರಡನೇ ಸ್ಥಾನವನ್ನು ಪಡೆದವರು ರ್ಯಾಪರ್ ರಾಕೇಶ್ ಅಡಿಗ.