ದುಬೈ ಆಯ್ತು ಈಗ ಮುಂಬೈ; ನಟಿ ದೀಪಿಕಾ ದಾಸ್ ಮೋಜು ಮಸ್ತಿಯ ಫೋಟೋ ವೈರಲ್
ಕನ್ನಡದ ನಟಿ, ಬಿಗ್ ಬಾಸ್ ಖ್ಯಾತಿಯ ದೀಪಿಕಾ ದಾಸ್ ಸದ್ಯ ಪ್ರವಾಸದಲ್ಲಿ ಬ್ಯುಸಿಯಾಗಿದ್ದಾರೆ. ಬಿಗ್ ಬಾಸ್ ದೇಶ-ವಿದೇಶ ಅಂಥ ಸುತ್ತಾಡುತ್ತಿರುವ ದೀಪಿಕಾ ಸದ್ಯ ಮುಂಬೈನಲ್ಲಿದ್ದಾರೆ.
ಕನ್ನಡದ ನಟಿ, ಬಿಗ್ ಬಾಸ್ ಖ್ಯಾತಿಯ ದೀಪಿಕಾ ದಾಸ್ ಸದ್ಯ ಪ್ರವಾಸದಲ್ಲಿ ಬ್ಯುಸಿಯಾಗಿದ್ದಾರೆ. ಬಿಗ್ ಬಾಸ್ ದೇಶ-ವಿದೇಶ ಅಂಥ ದೀಪಿಕಾ ಸುತ್ತಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್ ಆಗಿರುವ ನಟಿ ದೀಪಿಕಾ ಪ್ರವಾಸದ ಫೋಟೋಗಳನ್ನು ಶೇರ್ ಮಾಡುತ್ತಿದ್ದಾರೆ.
ದೀಪಿಕಾ ಸದ್ಯ ಮುಂಬೈನಲ್ಲಿದ್ದಾರೆ. ಇತ್ತೀಚೆಗಷ್ಟೆ ದುಬೈಗೆ ಹಾರಿದ್ದ ದೀಪಿಕಾ ಭಾರತಕ್ಕೆ ವಾಪಾಸ್ ಆಗಿದ್ದು ಇದೀಗ ಮುಂಬೈನಲ್ಲಿ ಕಾಲಕಳೆಯುತ್ತಿದ್ದಾರೆ. ಮುಂಬೈ ಪ್ರವಾಸದ ಒಂದಿಷ್ಟು ಫೋಟೋಗಳನ್ನು ಶೇರ್ ಮಾಡಿದ್ದಾರೆ.
ಮುಂಬೈನ ಮರೈನ್ ಡ್ರೈವ್ನಲ್ಲಿ ಕಾಫಿ ಹೀರುತ್ತಾ ಕ್ಯಾಮರಾಗೆ ಪೋಸ್ ನೀಡಿರುವ ಫೋಟೋವನ್ನು ಶೇರ್ ಮಾಡಿದ್ದಾರೆ. ಬಿಳಿ ಬಣ್ಣದ ಉಡುಗೆಯಲ್ಲಿ ದೀಪಿಕಾ ಮಸ್ತ್ ಪೋಸ್ ನೀಡಿದ್ದಾರೆ.
ಮುಂಬೈನ ಸುಂದರ ಫೋಟೋಗಳನ್ನು ಶೇರ್ ಮಾಡಿ ಬಾಂಬೆಯ ಸಂಜೆ ಎಂದು ಕ್ಯಾಪ್ಷನ್ ನೀಡಿದ್ದಾರೆ. ಬಿಗ್ ಬಾಸ್ ಮುಗಿಯುತ್ತಿದ್ದಂತೆ ದೀಪಿಕಾ ದಾಸ್ ಟ್ರಿಪ್‌ನಲ್ಲೇ ಹೆಚ್ಚಾಗಿ ಕಾಲಕಳೆಯುತ್ತಿದ್ದಾರೆ.
ದುಬೈಗೆ ತೆರಳಿದ್ದ ದೀಪಿಕಾ ಕ್ರಿಕೆಟರ್ ಕ್ರಿಸ್ ಗೇಲ್ ಅವರನ್ನು ಭೇಟಿಯಾಗಿ ಅಚ್ಚರಿ ಮೂಡಿಸಿದ್ದರು. ನಟಿ ದುಬೈನಲ್ಲಿ ಊಟ ಮಾಡುತ್ತಿದ್ದ ಅದೇ ರೆಸ್ಟೋರೆಂಟ್ನಲ್ಲಿ ತನ್ನ ನೆಚ್ಚಿನ ಕ್ರಿಕೆಟಿಗನನ್ನು ಭೇಟಿಯಾಗುವ ಅದೃಷ್ಟ ಪಡೆದುಕೊಂಡಿದ್ದರು ಎನ್ನಲಾಗಿದೆ.
ಕ್ರಿಸ್ ಗೇಲ್ ಜೊತೆ ಫೋಟೋ ಶೇರ್ ಮಾಡಿ ದೀಪಿಕಾ, 'ಇದು ಗೇಲ್ ಕ್ಷಣ...ಅತ್ಯಂತ ಅನಿರೀಕ್ಷಿತ ಭೇಟಿ, ನಮ್ಮ ಆರ್ಸಿಬಿ ಡೇಸ್ ಅನ್ನು ನೆನಪಿಸಿತು' ಎಂದು ಬರೆದುಕೊಂಡಿದ್ದರು. ಆ ಫೋಟೋ ಕೂಡ ಸಿಕ್ಕಾಪಟ್ಟೆ ವೈರಲ್ ಆಗಿತ್ತು.