- Home
- Entertainment
- TV Talk
- ಅಶ್ವಿನಿ ಗೌಡ ಪ್ಲಾನ್‌ಗಳನ್ನು ಫೇಲ್ ಮಾಡಿದ್ದೇಗೆ ರಕ್ಷಿತಾ ಶೆಟ್ಟಿ? ತುಳು ಬೆಡಗಿ ಆಟಕ್ಕೆ ಫ್ಯಾನ್ಸ್ ಫಿದಾ
ಅಶ್ವಿನಿ ಗೌಡ ಪ್ಲಾನ್‌ಗಳನ್ನು ಫೇಲ್ ಮಾಡಿದ್ದೇಗೆ ರಕ್ಷಿತಾ ಶೆಟ್ಟಿ? ತುಳು ಬೆಡಗಿ ಆಟಕ್ಕೆ ಫ್ಯಾನ್ಸ್ ಫಿದಾ
Rakshitha Shetty Bigg Boss strategy: ಅಶ್ವಿನಿ ಗೌಡರ ಪ್ಲಾನ್‌ಗಳನ್ನು ವಿಫಲಗೊಳಿಸಿ, ರಘು ನಾಮಿನೇಷನ್‌ಗೆ ಕಾರಣ ವಿವರಿಸುವ ಮೂಲಕ ರಕ್ಷಿತಾ ತಮ್ಮ ಸ್ಮಾರ್ಟ್ ಆಟದಿಂದ ಎಲ್ಲರ ಲೆಕ್ಕಾಚಾರವನ್ನು ತಲೆಕೆಳಗು ಮಾಡಿದ್ದಾರೆ ಎಂದು ಚರ್ಚೆಯಾಗುತ್ತಿದೆ.

ರಕ್ಷಿತಾ ಶೆಟ್ಟಿ ನಿರ್ಧಾರ
ಈ ವಾರದಲ್ಲಿ ರಕ್ಷಿತಾ ಶೆಟ್ಟಿಯ ಆಟ ಮತ್ತು ತೆಗೆದುಕೊಂಡ ನಿರ್ಧಾರಗಳು ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗುತ್ತಿದೆ. ನಾಮಿನೇಟೆಡ್ ತಂಡದಲ್ಲಿರುವ ರಕ್ಷಿತಾ ಶೆಟ್ಟಿ ತಾನು ತೆಗೆದುಕೊಳ್ಳುವ ನಿರ್ಧಾರಕ್ಕೆ ಎಲ್ಲರೂ ಒಪ್ಪುವಂತೆ ಮಾಡಿದ್ದರು. ರಕ್ಷಿತಾ ಶೆಟ್ಟಿ ಇಚ್ಛೆಯಂತೆಯೇ ಸುಧಿ ಸೇಫ್ ಆದ್ರೆ, ರಘು ನಾಮಿನೇಟ್ ಆಗಿದ್ದರು.
ಪ್ಲಾನ್ 'ಎ' ಉಲ್ಟಾ ಮಾಡಿದ ರಕ್ಷಿತಾ ಶೆಟ್ಟಿ?
ಟಾಸ್ಕ್‌ನಲ್ಲಿ ರಕ್ಷಿತಾ ಶೆಟ್ಟಿಯನ್ನು ಹೊರಗಿಟ್ಟ ಅಶ್ಚಿನಿ ಗೌಡ, ಅಭಿಯನ್ನು ತಮ್ಮ ತಂಡಕ್ಕೆ ಕರೆದುಕೊಂಡು ರಾಶಿಕಾ ಅವರನ್ನು ಸೇವ್ ಮಾಡೋದು ಪ್ಲಾನ್ ಆಗಿತ್ತು. ಫಿಸಿಕಲ್ ಟಾಸ್ಕ್ ಬಂದ್ರೆ ಅಭಿಷೇಕ್ ತಮ್ಮ ತಂಡಕ್ಕೆ ಸಹಾಯವಾಗಬಹುದು ಅಥವಾ ತಮಗಿಂತ ವೀಕ್ ಆಗಿರೋ ಸ್ಪರ್ಧಿ ನಾಮಿನೇಟ್ ಆದ್ರೆ ತಾವು ಸೇಫ್ ಆಗಬಹುದು ಎಂಬುವುದು ನಾಮಿನೇಟ್ ಟೀಂ ಪ್ಲಾನ್ ಅಗಿತ್ತು. ಆದ್ರೆ ಈ ಎಲ್ಲಾ ಲೆಕ್ಕಾಚಾರವನ್ನ ರಕ್ಷಿತಾ ಶೆಟ್ಟಿ ಉಲ್ಟಾ ಮಾಡಿದ್ದರು.
ರಕ್ಷಿತಾ ಶೆಟ್ಟಿ ಅಭಿಮಾನಿಗಳ ಮಾತೇನು?
ರಕ್ಷಿತಾ ಶೆಟ್ಟಿ ಅವರದ್ದು ಸ್ಮಾರ್ಟ್ ಪ್ಲಾನ್ ಎಂಬ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ಕೇಳಿ ಬರುತ್ತಿವೆ. ತನ್ನ ಸ್ಮಾರ್ಟ್‌ನೆಸ್‌ನಿಂದ ಅಭಿಷೇಕ್ ಅವರನ್ನು ಉಳಿಸೋದರ ಜೊತೆಯಲ್ಲಿ ಅಶ್ವಿನಿ ಗೌಡ ಪ್ಲಾನ್ ಉಲ್ಟಾ ಮಾಡಿದರು ಎಂದು ರಕ್ಷಿತಾ ಶೆಟ್ಟಿ ಅಭಿಮಾನಿಗಳು ಪೋಸ್ಟ್ ಮಾಡಿಕೊಳ್ಳುತ್ತಿದ್ದಾರೆ. ಸೇಫ್ ತಂಡದಲ್ಲಿರುವ ಸೂರಜ್ ಈಗಾಗಲೇ ಅಶ್ವಿನಿ ಗೌಡಗೆ ಹತ್ತಿರವಾಗಿದ್ದಾರೆ. ರಘು ನಿಷ್ಠಾವಂತ ಸ್ಪರ್ಧಿಯಾಗಿದ್ದು, ಅಶ್ವಿನಿ ಗೌಡ ಆಂಡ್ ಟೀಂ ಅವರ ಮಾತುಗಳಿಗೆ ಮರಳಾಗಲ್ಲ ಎಂದು ರಕ್ಷಿತಾ ನಂಬಿದ್ದರು.
ಪ್ಲಾನ್ 'ಬಿ' ಉಲ್ಟಾ ಮಾಡಿದ ರಕ್ಷಿತಾ ಶೆಟ್ಟಿ?
ರಘು ಅವರನ್ನು ನಾಮಿನೇಟ್ ಮಾಡಲು ರಕ್ಷಿತಾ ಶೆಟ್ಟಿಯೇ ಕಾರಣ ಎಂದು ಅಶ್ವಿನಿ ಗೌಡ ಸ್ಪಷ್ಟವಾಗಿ ಹೇಳಿದ್ದರು. ಇದು ರಘು ಮತ್ತು ರಕ್ಷಿತಾ ನಡುವೆ ಬಿರುಕು ಮೂಡಬಹುದು ಅಂತ ಅಶ್ವಿನಿ ಗೌಡ ಸೇರಿದಂತೆ ಎಲ್ಲರೂ ಲೆಕ್ಕಾಚಾರ ಮಾಡಿದ್ದರು. ಆದರೆ ತಾನೇಕೆ ರಘು ಅವರನ್ನು ನಾಮಿನೇಟ್ ಮಾಡಿದೆ ಎಂದು ಸ್ಪಷ್ಟಪಡಿಸುವಲ್ಲಿ ರಕ್ಷಿತಾ ಯಶಸ್ವಿಯಾಗಿದ್ದರು. ಇದರಿಂದಾಗಿ ನಾಮಿನೇಟ್ ತಂಡದಲ್ಲಿನ ಸದಸ್ಯರ ಪ್ಲಾನ್ ಫೇಲ್ ಆಗಿತ್ತು.
ಇದನ್ನೂ ಓದಿ: Bigg Boss Kannada: ರಕ್ಷಿತಾ ಶೆಟ್ಟಿ ಕಾಲ್ಗುಣ ಸರಿಯಿಲ್ವ? ಹತ್ತಿರ ಆದವರೆಲ್ಲ ಮನೆಯಿಂದ ಔಟ್
ರಾಶಿಕಾ
ಮುಂದಿನ ಟಾಸ್ಕ್‌ನಲ್ಲಿ ನಾಮಿನೇಟ್ ತಂಡ ಗೆದ್ದಿತ್ತು. ಈ ವೇಳೆ ತನ್ನ ತಪ್ಪು ತಿದ್ದಿಕೊಳ್ಳಲು ರಾಶಿಕಾ ಅವರನ್ನು ಸೇಫ್ ಮಾಡಲು ರಕ್ಷಿತಾ ಮುಂದಾದರು. ಆದ್ರೆ ರಾಶಿಕಾ ತಂಡದ ಯಾವ ತೀರ್ಮಾನಕ್ಕೂ ಒಪ್ಪಿಗೆ ಸೂಚಿಸಲಿಲ್ಲ. ಹಾಗೆಯೇ ಜಾನ್ವಿ ಸಹ ಯಾವ ನಿರ್ಣಯಕ್ಕೂ ಸಮ್ಮತಿ ಸೂಚಿಸಲಿಲ್ಲ. ಇದರಿಂದಾಗಿ ಮತ್ತೆ ಇಲ್ಲಿಯೂ ರಕ್ಷಿತಾ ಪ್ಲಾನ್ ವರ್ಕ್ ಆಯ್ತು ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ.
(ಈ ಮೇಲಿನ ಎಲ್ಲಾ ಅಭಿಪ್ರಾಯಗಳು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿವೆ. ಇದು ಏಷ್ಯಾನೆಟ್ ಸುವರ್ಣನ್ಯೂಸ್ ಅಭಿಪ್ರಾಯಗಳಲ್ಲ.)
ಇದನ್ನೂ ಓದಿ: Bigg Boss Kannada 12: ಬಿಗ್ ಬಾಸ್ ಮನೆಯಲ್ಲಿ ಮೊದಲ ಬಾರಿಗೆ ಗಿಲ್ಲಿ ನಟ ರೋಸ್ಟ್