ಜಿಮ್ – ಯೋಗ ಅಂದ್ರೆ ದೂರ ಓಡ್ತಾರೆ ಕಾವ್ಯ, ನಟಿಯ ಫೆವರೆಟ್ ಲೀಸ್ಟ್ ರಿವೀಲ್
ಬಿಗ್ ಬಾಸ್ ಖ್ಯಾತಿಯ ಕಾವ್ಯ ಶೈವ ಚಿತ್ತಾರ ಸ್ಟಾರ್ ಅವಾರ್ಡ್ಸ್ ನಲ್ಲಿ ಮಿಂಚಿದ್ದಾರೆ. ಕಪ್ಪು ಸೀರೆಯಲ್ಲಿ ಅಪ್ಸರೆಯಂತೆ ಕಾಣ್ತಿದ್ದ ಕಾವ್ಯ ನೋಡಿ ಫ್ಯಾನ್ಸ್ ಕಳೆದು ಹೋಗಿದ್ದಾರೆ. ರೆಡ್ ಕಾರ್ಪೆಟ್ ವೇಳೆ ಕಾವ್ಯ ತಮ್ಮ ಇಷ್ಟಗಳನ್ನು ಎಲ್ಲರ ಮುಂದಿಟ್ಟಿದ್ದಾರೆ.

ಸೀರೆಯಲ್ಲಿ ಕಾವು
ನಟಿ ಹಾಗೂ ಬಿಗ್ಬಾಸ್ 12ರ ಸ್ಪರ್ಧಿ ಕಾವ್ಯ ಶೈವ, ಚಿತ್ತಾರ ಸ್ಟಾರ್ ಅವಾರ್ಡ್ ನಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ. ಸಾಂಪ್ರದಾಯಿಕ ಉಡುಗೆಯಲ್ಲಿ ಬಂದ ಕಾವ್ಯ ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ. ಆಂಕರ್ ಜೊತೆ ಮಾತನಾಡಿದ ಕಾವ್ಯ, ತಮ್ಮಿಷ್ಟದ ಉಡುಪು, ತಿಂಡಿಯನ್ನು ರಿವೀಲ್ ಮಾಡಿದ್ದಾರೆ.
ಸಾಂಪ್ರದಾಯಿ ಉಡುಗೆ
ಬಿಗ್ ಬಾಸ್ ಮನೆಯಲ್ಲೂ ಕಾವ್ಯ ಹೆಚ್ಚು ಟ್ರೆಡಿಷನಲ್ ಡ್ರೆಸ್ ನಲ್ಲಿ ಕಾಣಿಸಿಕೊಂಡಿದ್ದರು. ಸೀರೆ ಅವರ ಫೆವರೆಟ್ ಅನ್ನೋದು ಬಹುತೇಕರಿಗೆ ಗೊತ್ತು. ಯಾವುದೇ ಕಾರ್ಯಕ್ರಮವಿದ್ರೂ ಸೀರೆ ಧರಿಸಿ ಬರುವ ಕಾವ್ಯ ಇದೇ ಕಾರಣಕ್ಕೆ ಅನೇಕರ ಅಚ್ಚುಮೆಚ್ಚು. ಅವಾರ್ಡ್ಸ್ ಫಂಕ್ಷನ್ ನಲ್ಲೂ ಕಾವ್ಯ ಇದನ್ನು ಒಪ್ಪಿಕೊಂಡಿದ್ದಾರೆ. ಮಾಡರ್ನ್ ಡ್ರೆಸ್ ಗಿಂತ ಟ್ರೆಡಿಷನಲ್ ಡ್ರೆಸ್ ಇಷ್ಟ ಎಂದಿದ್ದಾರೆ.
ರಾಗಿ ಮದ್ದೆ ವರ್ಸಸ್ ಫಿಜ್ಜಾ
ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿಯ ಫೆವರೆಟ್ ಕಾವುಗೆ ಫಿಜ್ಜಾ ಹಾಗೂ ರಾಗಿ ಮುದ್ದೆ ಎರಡೂ ಇಷ್ಟ. ಆದ್ರೆ ರಾಗಿ ಮುಂದೆ ಜಾಸ್ತಿ ಇಷ್ಟವಂತೆ. ಹಾಗೆ ಕಾವ್ಯ ಲಾಂಗ್ ಡ್ರೈವ್ ಇಷ್ಟಪಡ್ತಾರೆ.
ಜಿಮ್ – ಯೋಗ ದೂರ ದೂರ
ಸ್ಲಿಮ್ ಆಗಿರುವ ಕಾವ್ಯ ಫಿಟ್ನೆಸ್ ಬಗ್ಗೆ ಇನ್ನೂ ಗಮನ ಹರಿಸಿಲ್ಲ. ತಿಂದುಂಡು ಆರಾಮಾಗಿದ್ದಂತೆ ಕಾಣ್ತಿದೆ. ಜಿಮ್ ಹಾಗೂ ಎರಡರಿಂದ್ಲೂ ಕಾವ್ಯ ಸದ್ಯ ದೂರ ಇದ್ದಾರೆ. ಎರಡೂ ಅಷ್ಟಕಷ್ಟೆ, ಇನ್ಮುಂದೆ ನೋಡೋಣ ಎಂದಿದ್ದಾರೆ ಕಾವ್ಯ.
ಆನ್ಲೈನ್ ಶಾಪಿಂಗ್ ಫೆವರೆಟ್
ಆನ್ಲೈನ್ ಶಾಪಿಂಗ್ ಕಾವ್ಯಗೆ ಇಷ್ಟ. ಸಿರೀಸ್ ಗಿಂತ ಸಿನಿಮಾಗೆ ಹೆಚ್ಚು ಆದ್ಯತೆ ನೀಡುವ ನಟಿ ಶೀಘ್ರದಲ್ಲೇ ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಗಿಲ್ಲಿ ನಟನ ಹೊಸ ಸಿನಿಮಾ ಅನೌನ್ಸ್ ಆಗಿದೆ. ಇದೇ ಜೂನ್ 21 ರಂದು ಚಿತ್ರದ ಮುಹೂರ್ತ ನಡೆಯಲಿದೆ. ಚಿತ್ರಕ್ಕೆ ಕಾವ್ಯ ಹಿರೋಯಿನ್ ಎನ್ನುವ ಊಹಾಪೋಹ ಇದ್ದು, ಕಾದು ನೋಡ್ಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

