- Home
- Entertainment
- TV Talk
- ಎಲ್ಲೇ ಹೋದ್ರೂ ಶಕುನಿ ಆಟ ಬಿಡಲ್ವಾ ಮಂಜಣ್ಣನ ಈ ಗೆಳತಿ?; ಹಿಗ್ಗಾಮುಗ್ಗಾ ಟ್ರೋಲ್ ಮಾಡಿದ ನೆಟ್ಟಿಗರು
ಎಲ್ಲೇ ಹೋದ್ರೂ ಶಕುನಿ ಆಟ ಬಿಡಲ್ವಾ ಮಂಜಣ್ಣನ ಈ ಗೆಳತಿ?; ಹಿಗ್ಗಾಮುಗ್ಗಾ ಟ್ರೋಲ್ ಮಾಡಿದ ನೆಟ್ಟಿಗರು
ದಿನದಿಂದ ದಿನಕ್ಕೆ ಹೆಚ್ಚಾಯ್ತು ಟ್ರೋಲ್...ಸುದೀಪ್ ವಾರ್ನಿಂಗ್ ಕೊಟ್ಟರೂ ಬುದ್ಧಿ ಕಲಿತಿಲ್ಲ ಎಂದು ನೆಟ್ಟಿಗರಲ್ಲಿ ಬೇಸರ.....

ಜೀ ಕನ್ನಡ ವಾಹಿನಿಯಲ್ಲಿ ಹಿಸ್ಟರ್ ಆಂಡ್ ರೆಕಾರ್ಡ್ ಬ್ರೇಕ್ ಮಾಡಿದ ಸತ್ಯ ಧಾರಾವಾಹಿ ಮೂಲಕ ಬಣ್ಣದ ಪ್ರಪಂಚಕ್ಕೆ ಪಾದಾರ್ಪಣೆ ಮಾಡಿದ ಚೆಲುವೆ ಗೌತಮಿ ಜಾದವ್.
ಸುಮಾರು ಎರಡು ಮೂರು ವರ್ಷಗಳ ಕಾಲ ಕನ್ನಡ ಕಿರುತೆರೆ ವೀಕ್ಷಕರ ಮನಸ್ಸಿಗೆ ಹತ್ತಿರವಾಗಿದ್ದ ಗೌತಮಿ ರಿಸ್ಕ್ ತೆಗೆದುಕೊಂಡು ಮೊದಲ ಸಲ ರಿಯಾಲಿಟಿ ಶೋ, ಬಿಗ್ ಬಾಸ್‌ಗೆ ಕಾಲಿಟ್ಟಿದ್ದಾರೆ.
ಯಾವ ಕಾರಣ ಬಿಗ್ ಬಾಸ್ ಆಯ್ಕೆ ಮಾಡಿದ್ದಾರೆ? ಬಿಗ್ ಬಾಸ್ ನಂತರ ತಮ್ಮ ಮುಂದಿನ ನಡೆ ಏನು? ಬಿಗ್ ಬಾಸ್‌ನಿಂದ ನೀವು ಪಡೆಯುತ್ತಿರುವ ಲಾಭ ಏನು ಎಂಬುದನ್ನು ಇದುವರೆಗೂ ಗೌತಮಿ ಶೋನಲ್ಲಿ ಹಂಚಿಕೊಂಡಿಲ್ಲ.
ಸಿಕ್ಕಾಪಟ್ಟೆ ಕೂಲ್ ಆಗಿ ಎಂಟ್ರಿ ಕೊಟ್ಟ ಗೌತಮಿ ಸಂಘ ಸೇರಿದ್ದು ಉಗ್ರಂ ಮಂಜು ಮತ್ತು ಪಾರು ಧಾರಾವಾಹಿ ಖ್ಯಾತಿಯ ಮೋಕ್ಷಿತಾ ಪೈ ಜೊತೆ. ಮೂವರು ಒಟ್ಟಿ ಇದ್ದ ಕಾರಣ ಜನರಿಗೆ ಅದೊಂದು ಟೀಂ ಆಗಿ ಕಾಣಿಸಿದೆ.
ಮನಸ್ಥಾಪಗಳಿಂದ ಮೋಕ್ಷಿತಾ ಪೈ ಸಂಘದಿಂದ ಹೊರ ಬಂದರೂ ಗೌತಮಿ ಜಾದವ್ ಮಾತ್ರ ಉಗ್ರಂ ಮಂಜು ಜೊತೆಗಿನ ಸ್ನೇಹ ಕೈ ಬಿಟ್ಟಿಲ್ಲ. ಬದಲಿಗೆ ಗೆಳೆಯ ಗೆಳೆಯ ಎಂದುಕೊಂಡು ಓಡಾಡುತ್ತಿದ್ದಾರೆ.
ಉಗ್ರಂ ಮಂಜು ಮತ್ತು ಗೌತಮಿ ಜಾದವ್ ಒಟ್ಟಿಗೆ ಸೇರಿ ಮಾಡುತ್ತಿರುವ ತಪ್ಪುಗಳನ್ನು ಮನೆಯಲ್ಲಿ ಇನ್ನಿತರ ಸದಸ್ಯರು, ಕಿಚ್ಚ ಸುದೀಪ್ ಮತ್ತು ವೀಕ್ಷಕರು ಎತ್ತಿ ಹೇಳುತ್ತಿದ್ದರೂ ಸರಿ ಮಾಡಿಕೊಳ್ಳದ ಕಾರಣ ಬೇಸರ ಆಗಿದೆ.
ಬಿಗ್ ಬಾಸ್ ಮನೆಗೆ ಕಾಲಿಡುತ್ತಿದ್ದಂತೆ ಶಕುನಿ ಪಟ್ಟವನ್ನು ಉಗ್ರಂ ಮಂಜುಗೆ ನೀಡಲಾಗಿತ್ತು, ಆದರೆ ಈಗ ಆ ಪಟ್ಟವನ್ನು ಗೌತಮಿ ಜಾದವ್‌ಗೆ ಶಿಫ್ಟ್ ಮಾಡಿದ್ದಾರೆ ವೀಕ್ಷಕರು.
ಇತ್ತೀಚಿನ ದಿನಗಳಲ್ಲಿ ಗೌತಮಿ ಜಾದವ್ ಹಿಗ್ಗಾಮುಗ್ಗಾ ಟ್ರೋಲ್ ಆಗುತ್ತಿದ್ದಾರೆ. ಈಗ ಮಂಜು ಸಹವಾಸ ಬಿಟ್ಟು ಹೊರ ಬಂದಿಲ್ಲ ಅಂದ್ರೆ ಕಪ್ಪು ಹಿಡಿಯುವ ಕನಸು ಬಿಡಬೇಕು ಎಂದು ನೆಗೆಟಿವ್ ಟ್ರೋಲ್ ಮಾಡುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.