ಬಕೆಟ್‌ಗಾಗಿ ಜಗಳ, ಗಿಲ್ಲಿ ಮೇಲಾಯ್ತು ಹಲ್ಲೆ; ಮನೆಯಿಂದ ಹೊರಗೆ ಬರ್ತಾರಾ ಮಹಿಳಾ ಸ್ಪರ್ಧಿ?
Gilli Nata and Risha Gowda conflict: ಬಕೆಟ್ ವಿಚಾರಕ್ಕೆ ಶುರುವಾದ ಜಗಳ ತಾರಕಕ್ಕೇರಿದೆ. ಗಿಲ್ಲಿ ನಟ ಮಾಡಿದ ಕೆಲಸಕ್ಕೆ ಕೋಪಗೊಂಡ ರಿಷಾ ಗೌಡ, ಅವರ ಮೇಲೆ ದೈಹಿಕ ಹಲ್ಲೆ ನಡೆಸಿದ್ದಾರೆ. ಈ ನಿಯಮ ಉಲ್ಲಂಘನೆಗಾಗಿ ರಿಷಾ ಮನೆಯಿಂದ ಹೊರಬರಬೇಕೆಂಬ ಕೂಗು ವೀಕ್ಷಕರಿಂದ ಕೇಳಿಬರುತ್ತಿದೆ.

ರಿಷಾ ಗೌಡ ಹಲ್ಲೆ
ಬಿಗ್‌ಬಾಸ್ ಮನೆಯಲ್ಲಿರುವ ಸ್ಪರ್ಧಿಗಳು ಯಾರ ಮೇಲೆಯೂ ಹಲ್ಲೆ ನಡೆಸುವಂತಿಲ್ಲ ಎಂಬ ಕಟ್ಟುನಿಟ್ಟಿನ ನಿಯಮವಿದೆ. ಇಂದು ಬಿಡುಗಡೆಯಾಗಿರುವ ಪ್ರೋಮೋದಲ್ಲಿ ಗಿಲ್ಲಿ ನಟ ಅವರ ಮೇಲೆ ರಿಷಾ ಗೌಡ ಹಲ್ಲೆ ಮಾಡಿರೋದನ್ನು ತೋರಿಸಲಾಗಿದೆ. ನಿಯಮದ ಪ್ರಕಾರ, ರಿಷಾ ಗೌಡ ಹೊರಗೆ ಬರಬೇಕು ಎಂದು ವೀಕ್ಷಕರು ಪ್ರೋಮೋಗೆ ಕಮೆಂಟ್ ಮಾಡಿದ್ದಾರೆ.
ಬಕೆಟ್ ಕೊಡಲ್ಲವಾ?
ಬಾತ್‌ರೂಮ್ ಏರಿಯಾದಲ್ಲಿ ಕುಳಿತಿರುವ ಗಿಲ್ಲಿ ನಟ ಬಕೆಟ್ ನೀಡುವಂತೆ ಕೇಳುತ್ತಾರೆ. ನೀವು ಬಕೆಟ್ ಕೊಡಲ್ಲವಾ ಎಂದು ಗಿಲ್ಲಿ ನಟ ಕೋಪಗೊಳ್ಳುತ್ತಾರೆ. ನೇರವಾಗಿ ಬೆಡ್‌ರೂಮ್‌ಗೆ ಹೋಗಿ ರಿಷಾ ಅವರ ಬಟ್ಟೆಗಳನ್ನು ತೆಗೆದುಕೊಂಡು ಬಂದು ಬಾತ್‌ರೂಮ್ ನೆಲದ ಮೇಲೆ ಇರಿಸುತ್ತಾರೆ. ಸ್ನಾನ ಮಾಡಿಕೊಂಡು ಬಂದ ರಿಷಾ, ನೆಲದ ಮೇಲೆ ಬಟ್ಟೆಗಳನ್ನು ನೋಡಿ ಕೋಪಗೊಂಡು ಜೋರಾಗಿ ಗಿಲ್ಲಿ ಎಂದು ಕೂಗುತ್ತಾರೆ.
ಬಟ್ಟೆಗಳೆಲ್ಲ ಚೆಲ್ಲಾಪಿಲ್ಲಿ
ಕೋಪದಲ್ಲಿದ್ದ ರಿಷಾ ಗೌಡ ಅವರು, ಗಿಲ್ಲಿ ನಟ ಬರುತ್ತಿದ್ದಂತೆ ಅವರ ಮೇಲೆ ಹಲ್ಲೆ ನಡೆಸುತ್ತಾರೆ. ಇಷ್ಟಕ್ಕೆ ಸುಮ್ಮನಾಗದ ರಿಷಾ, ಬೆಡ್‌ರೂಮ್ ಗಿಲ್ಲಿಗೆ ಸೇರಿದ ಬಟ್ಟೆಗಳೆಲ್ಲವನ್ನು ಚೆಲ್ಲಾಪಿಲ್ಲಿ ಮಾಡುತ್ತಾರೆ. ಅವನು ಮಾಡಿದ್ದಕ್ಕೆ ನೀನು ಸಹ ಹಾಗೆ ಮಾಡಬೇಡ ಎಂದು ರಿಷಾ ಗೌಡ ಅವರನ್ನು ತಡೆಯಲು ಅಶ್ವಿನಿ ಗೌಡ ತಡೆಯಲು ಪ್ರಯತ್ನಿಸುತ್ತಾರೆ.
ರಿಷಾ ಗೌಡ ವಾಗ್ದಾಳಿ
ಈ ವೇಳೆಗೆ ಗಿಲ್ಲಿ ನಟ ಮತ್ತು ರಿಷಾ ಗೌಡ ಜಗಳ ಬೆಡ್‌ರೂಮ್‌ಗೆ ಶಿಫ್ಟ್ ಆಗಿರುತ್ತದೆ. ಇಲ್ಲಿಯೂ ಗಿಲ್ಲಿ ಮೈ ಮೇಲೆ ಹೋಗುವ ರಿಷಾ ಗೌಡ ವಾಗ್ದಾಳಿ ನಡೆಸುತ್ತಾರೆ. ನ ನಂತರ ಗಿಲ್ಲಿ ಅವರನ್ನು ದೂಡುತ್ತಾರೆ. ಇವರಿಬ್ಬರ ಮಧ್ಯೆ ಬಂದ ರಕ್ಷಿತಾ ಶೆಟ್ಟಿ, ದೈಹಿಕ ಹಲ್ಲೆಗೆ ಹೋಗಬೇಡಿ ಅಂತ ಹೇಳ್ತಾರೆ.
ಇದನ್ನೂ ಓದಿ: ಅಚ್ಚರಿ ಒಗಟಿನ ಮೂಲಕ ಬಿಗ್‌ಬಾಸ್ ಆಟಕ್ಕೆ ಮಲ್ಲಮ್ಮ ವಿದಾಯ; ಹೃದಯ ಗೆದ್ದ ಮಾಳು ನಿಪನಾಳ
ರಜತ್
ಮತ್ತೊಂದೆಡೆ ಇನ್ನುಳಿದ ಸ್ಪರ್ಧಿಗಳು ಗಿಲ್ಲಿ ಮೇಲೆ ಹಲ್ಲೆ ಆಯ್ತು ಎಂದು ಮಾತನಾಡಿಕೊಳ್ಳುತ್ತಿರೋದನ್ನು ಪ್ರೋಮೋದಲ್ಲಿ ತೋರಿಸಲಾಗಿದೆ. ಈ ಹಿಂದಿನ ಸೀಸನ್‌ನಲ್ಲಿ ವಕೀಲ ಜಗದೀಶ್ ಅವರನ್ನು ತಳ್ಳಿದ್ದಕ್ಕೆ ರಜತ್ ಅವರನ್ನು ಮನೆಯಿಂದ ಹೊರಗೆ ಹಾಕಲಾಗಿತ್ತು ಎಂಬ ವಿಷಯವನ್ನು ವೀಕ್ಷಕರು ಮೆಲಕು ಹಾಕಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ನೂರೆಂಟು ಕ್ಯಾಮೆರಾಗಳಿದ್ರೂ ರಹಸ್ಯವಾಗಿ ಹೊರಗಿನಿಂದ ಮೆಸೇಜ್ ಪಡೆಯುತ್ತಿದ್ದ ಸ್ಪರ್ಧಿಗಳಿಗೆ ಸುದೀಪ್ ಕ್ಲಾಸ್