MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • ಅದು ಕತ್ತಲೆಯ ಅನುಭವ...! ನಟನೆ ತೊರೆಯುದಾಗಿ ಘೋಷಿಸಿದ ಖ್ಯಾತ ನಟಿ, ಬಿಗ್‌ಬಾಸ್‌ ಸ್ಪರ್ಧಿ!

ಅದು ಕತ್ತಲೆಯ ಅನುಭವ...! ನಟನೆ ತೊರೆಯುದಾಗಿ ಘೋಷಿಸಿದ ಖ್ಯಾತ ನಟಿ, ಬಿಗ್‌ಬಾಸ್‌ ಸ್ಪರ್ಧಿ!

ನಟಿ ಸೋನಿಯಾ ಬನ್ಸಾಲ್ ಚಿತ್ರರಂಗ ತೊರೆಯುವ ನಿರ್ಧಾರ ಪ್ರಕಟಿಸಿದ್ದಾರೆ. ವೈಯಕ್ತಿಕ ಶಾಂತಿ ಮತ್ತು ಉದ್ದೇಶಪೂರ್ಣ ಜೀವನಕ್ಕಾಗಿ ಈ ನಿರ್ಧಾರ ಕೈಗೊಂಡಿದ್ದು, ಲೈಫ್ ಕೋಚ್ ಆಗಿ ಮುಂದುವರಿಯುವ ಇಂಗಿತ ವ್ಯಕ್ತಪಡಿಸಿದ್ದಾರೆ.

2 Min read
Gowthami K
Published : May 06 2025, 06:32 PM IST
Share this Photo Gallery
  • FB
  • TW
  • Linkdin
  • Whatsapp
16

ನಟಿ ಮತ್ತು ರಿಯಾಲಿಟಿ ಸ್ಟಾರ್ ಸೋನಿಯಾ ಬನ್ಸಾಲ್ ಅವರು ಮನರಂಜನಾ ಉದ್ಯಮವನ್ನು ತೊರೆಯುತ್ತಿರುವುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ . ಇದು ಅವರ ಅಭಿಮಾನಿಗಳಲ್ಲಿ ಮತ್ತು ಉದ್ಯಮದಲ್ಲಿ ಚರ್ಚೆಗೆ ಕಾರಣವಾಗಿದೆ. ಅವರು ತಮ್ಮ ವೈಯಕ್ತಿಕ ಶಾಂತಿ ಮತ್ತು ಉದ್ದೇಶಪೂರ್ಣ ಜೀವನದತ್ತ ಗಮನ ಹರಿಸಲು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಐದು ಸಿನಿಮಾಗಳಲ್ಲಿ ಅಭಿನಯಿಸಿದ ನಂತರ ನಟನೆ ಕ್ಷೇತ್ರದಿಂದ ಹಿಂದೆ ಸರಿಯಲು ನಿರ್ಧಾರ ಮಾಡಿದ್ದಾರೆ. ಅವರು ನಟನೆಯ ಜಗತ್ತಿನಲ್ಲಿ ಹೆಸರು ಮಾಡಿದ್ದರೂ, ತಮ್ಮ ಜೀವನದಲ್ಲಿ ಶಾಂತಿಯ ಕೊರತೆ ಅನುಭವಿಸುತ್ತಿದ್ದರು ಎಂದು ತಿಳಿಸಿದ್ದಾರೆ.

26

ತಮ್ಮ ಆಘಾತಕಾರಿ ನಿರ್ಧಾರದ ಬಗ್ಗೆ ಮಾತನಾಡಿ ಸೋನಿಯಾ ಕೆಲಸ ಮತ್ತು ಹಣ ಇದ್ದರೂ, ತನ್ನ ಜೀವನದಲ್ಲಿ ಶಾಂತಿಯ ಕೊರತೆ ಇತ್ತು.  ಈಗ ನಾನು ಜೀವನ ತರಬೇತುದಾರಳಾಗಲು ಮತ್ತು ಜನರಿಗೆ ಮಾರ್ಗದರ್ಶನ ನೀಡಲು ಬಯಸುತ್ತೇನೆ ಎಂದಿದ್ದಾರೆ. ನಾವು ಬಹುಶಃ ಇತರರಿಗಾಗಿಯೇ ಎಲ್ಲವನ್ನೂ ಮಾಡುತ್ತೇವೆ, ಆದರೆ ಅದರಲ್ಲಿ ನಮ್ಮನ್ನು ನಾವು ಮರೆತು ಬಿಡುತ್ತೇವೆ.

Related Articles

Related image1
ಅಣ್ಣ ಜಿಂಕೆ ತಂಗಿ ಜಿಂಕೆ, ಭಾವ ಜಿಂಕೆ ಎಲ್ಲಿ? ತ್ರಿವಿಕ್ರಮ ಮಿಸ್ ಮಾಡಿಕೊಳ್ತಿದ್ದಾರೆ ಫ್ಯಾನ್ಸ್
Related image2
RCB ಗೆಲ್ಲದಿದ್ರೆ ನೀವು ದರಿದ್ರ ಮುಖಗಳು ಎಂದ ನೆಟ್ಟಿಗ; ಎದೆ ಗಟ್ಟಿ ಹಿಡ್ಕೊಂಡು ಮ್ಯಾಚ್‌ ಗೆಲ್ಲಿಸಿದ ಹನುಮಂತ, ಧನರಾಜ್
36

ನಾನು ನನ್ನ ನಿಜವಾದ ಉದ್ದೇಶವೇನು ಎಂಬುದನ್ನು ಅರಿಯದಂತೆ ಆಗಿದೆ. ಹೆಚ್ಚು ಸಂಪಾದನೆ, ಯಶಸ್ಸು, ಖ್ಯಾತಿಯ ಹಿಂದೆ ಓಡುತ್ತಾ ನಾನು ನನ್ನನ್ನು ಕಳೆದುಕೊಂಡೆ.ನನ್ನ ಬಳಿ ಹಣವಿತ್ತು, ಜನಪ್ರಿಯತೆಯೂ ಇತ್ತು. ಆದರೆ ಶಾಂತಿಯಂತಹ ಅತೀ ಮುಖ್ಯವಾದ ಅಂಶವಿತ್ತು ಎಂಬ ಭರವಸೆಯೇ ಇರಲಿಲ್ಲ. ನೀವು ಶಾಂತಿಯಿಂದ ಇರದಿದ್ದರೆ, ಬಾಕಿ  ಎಲ್ಲ ಇದ್ದರೂ ಏನು ಉಪಯೋಗ? ಬಾಹ್ಯವಾಗಿ ಎಲ್ಲವೂ ಇದ್ದರೂ, ಒಳಗಿನಿಂದ ಖಾಲಿಯಾಗಿ ಹೋದರೆ ಅದು ತುಂಬಾ ಕತ್ತಲೆಯ ಅನುಭವ.

46

ಸೋನಿಯಾ ಬನ್ಸಾಲ್ ಅವರು ತಮ್ಮ ವೃತ್ತಿಜೀವನವನ್ನು ಬಿಟ್ಟು ಆಧ್ಯಾತ್ಮಿಕ ಪಥವನ್ನು ಅನುಸರಿಸಲು ನಿರ್ಧರಿಸಿದ್ದು, ಇದು ಅವರ ವ್ಯಕ್ತಿತ್ವದಲ್ಲಿ ಮತ್ತು ಆದ್ಯತೆಗಳಲ್ಲಿ ಮಹತ್ವಪೂರ್ಣ ಬದಲಾವಣೆಯನ್ನು ಸೂಚಿಸುತ್ತದೆ ಇದು ಅನೇಕರನ್ನು ಪ್ರೇರೇಪಿಸಿದೆ. ಈ ಮನರಂಜನಾ ಕ್ಷೇತ್ರವು ನನಗೆ ಗುರುತನ್ನು ನೀಡಿತ್ತಾದರೂ, ಅದು ನನಗೆ ಸ್ಥಿರತೆ ಅಥವಾ ಒಳಗಿನ ಸಂತೋಷವನ್ನು ನೀಡಲಿಲ್ಲ. ನಾನು ಇನ್ನು ಮುಂದೆ ನಟನೆಯತ್ತ ಬಯಸುವುದಿಲ್ಲ. ಈಗ ನಾನು ಜೀವನ ತರಬೇತುದಾರ (ಲೈಫ್ ಕೋಚ್) ಆಗಿ ಕೆಲಸಮಾಡಲು ಮತ್ತು ಆಧ್ಯಾತ್ಮಿಕ ಚಿಕಿತ್ಸೆ ನೀಡಲು ಬಯಸುತ್ತೇನೆ." ಎಂದಿದ್ದಾರೆ. 

56

ನಮ್ಮ ಜೀವನ ಯಾವಾಗ ಬದಲಾಗುತ್ತದೆ ಎಂದು ಯಾರಿಗೂ ಗೊತ್ತಿಲ್ಲ. ಸಾವು ಯಾವಾಗ ಬರುತ್ತದೆ ಎಂಬುದೂ ಗೊತ್ತಿಲ್ಲ. ಆದ್ದರಿಂದ ನಾವು ನಮ್ಮ ಜೀವಿತವನ್ನು ಸತ್ಯವಾಗಿ, ತೃಪ್ತಿಯಿಂದ ಬದುಕದೇ ಇದ್ದರೆ, ಈ ಇಡೀ ಪ್ರಯಾಣಕ್ಕೆ ಅರ್ಥವೇನು? ಸೋನಿಯಾ ಬನ್ಸಾಲ್ ಅವರು ತಮ್ಮ ವೃತ್ತಿಜೀವನವನ್ನು ತ್ಯಜಿಸಿ, ಆಧ್ಯಾತ್ಮಿಕ ಪಥವನ್ನು ಅನುಸರಿಸಲು ನಿರ್ಧರಿಸಿರುವುದು, ಅವರ ವ್ಯಕ್ತಿತ್ವದ ಬದಲಾವಣೆಯ ಪ್ರತಿಫಲವಾಗಿದೆ. ಅವರು ತಮ್ಮ ಜೀವನದಲ್ಲಿ ನಿಜವಾದ ಶಾಂತಿ ಮತ್ತು ಉದ್ದೇಶವನ್ನು ಹುಡುಕಲು ಈ ಪಥವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅವರ ಈ ನಿರ್ಧಾರವು ಅನೇಕರಿಗೆ ಪ್ರೇರಣೆಯಾಗಿ ಕಾರ್ಯನಿರ್ವಹಿಸುತ್ತಿದೆ.

66

ಸೋನಿಯಾ ಬನ್ಸಾಲ್ ಬಿಗ್ ಬಾಸ್ 17 ಶೋದಿಂದ ಮೊದಲಿಗರಾಗಿ ಎಲಿಮಿನೇಟ್ ಆಗಿದ್ದರು. ಅವರು ತೆಲುಗು ಮತ್ತು ಹಿಂದಿ ನಟಿಯಾಗಿದ್ದಾರೆ. 2019 ರಲ್ಲಿ 'ನಾಟಿ ಗ್ಯಾಂಗ್' ಎಂಬ ಚಿತ್ರದಿಂದ ತಮ್ಮ ಸಿನಿ ಬದುಕಿಗೆ ಆರಂಭ ನೀಡಿದ ಅವರು, 'ಡಬ್ಕಿ', 'ಗೇಮ್ 100 ಕೋಟಿ ಕಾ', 'ಶೂರ್ವೀರ್', 'ಧೀರಾ' ಎಂಬ ಚಿತ್ರಗಳಲ್ಲಿ ಅಭಿನಯಿಸಿದ್ದರು. ವರದಿಗಳ ಪ್ರಕಾರ, ಅವರು ಪ್ರಸ್ತುತ 'ಯೆಸ್ ಬಾಸ್' ಎಂಬ ಚಿತ್ರದಲ್ಲಿ ಚಿತ್ರೀಕರಣದಲ್ಲಿದ್ದಾರೆ. ಈ ಚಿತ್ರವು ಅವರ ಕೊನೆಯ ಚಿತ್ರವಾಗಿದ್ದು, ಅವರು ಚಿತ್ರರಂಗದಿಂದ ವಿದಾಯ ಪಡೆಯುತ್ತಿದ್ದಾರೆ.

About the Author

GK
Gowthami K
ಒನ್ ಇಂಡಿಯಾ, ಡೈಲಿಹಂಟ್‌, ವಿಜಯ ಕರ್ನಾಟಕ ವೆಬ್‌, ಈಗ ಏಷ್ಯಾನೆಟ್ ಕನ್ನಡ ಸೇರಿ 10 ವರ್ಷಗಳಿಂದಲೂ ಡಿಜಿಟಲ್ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂನಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ಸುಳ್ಯ ತಾಲೂಕಿನ ಕುಕ್ಕುಜಡ್ಕದವಳು. ಉದ್ಯೋಗ, ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ, ಸಿನೆಮಾವೆಂದರೆ ಹೆಚ್ಚು ಆಸಕ್ತಿ. ಹಿನ್ನೆಲೆ ಧ್ವನಿ ನೀಡುವುದು ಹವ್ಯಾಸ.
ಬಿಗ್ ಬಾಸ್
ಮನರಂಜನಾ ಸುದ್ದಿ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved