ಹೊಸ ಬ್ಯುಸಿಸೆನ್ ಆರಂಭಿಸಿದ ದಿವ್ಯಾ ಉರುಡುಗ- ಅರವಿಂದ್; ಗ್ರ್ಯಾಂಡ್ ಓಪನಿಂಗ್ ಫೋಟೋ ವೈರಲ್!
ನಟನೆ ರೇಸಿಂಗ್ ಮಾತ್ರವಲ್ಲ ಬ್ಯುಸಿನೆಸ್ ಲೋಕದಲ್ಲೂ ಸೈ ಎನಿಸಿಕೊಂಡ ಬಿಗ್ ಬಾಸ್ ಜೋಡಿ ಅರ್ವಿಯಾ.

ಕನ್ನಡ ಕಿರುತೆರೆ ಹಾಗೂ ಬೆಳ್ಳಿ ತೆರೆ ಜನಪ್ರಿಯ ನಟಿ ದಿವ್ಯಾ ಉರುಡುಗ ಮತ್ತು ಬೈಕ್ ರೇಸರ್ ಅರವಿಂದ್ ಕೆಪಿ ಹೊಸ ಉದ್ಯಮ ಆರಂಭಿಸಿದ್ದಾರೆ.

ಬಿಗ್ ಬಾಸ್ ಸೀಸನ್ 8ರಲ್ಲಿ ಪರಿಚಯವಾದ ದಿವ್ಯಾ ಮತ್ತು ಅರವಿಂದ್ ಸಿಕ್ಕಾಪಟ್ಟೆ ಕ್ಲೋಸ್ ಆಗಿದ್ದಾರೆ. ಅರ್ವಿಯಾ ಎಂದು ಹೆಸರು ಕೊಟ್ಟಿದ್ದಾರೆ ಫ್ಯಾನ್ಸ್.
ಬಿಗ್ ಬಾಸ್ ಮುಗಿದ ಮೇಲೆ ಇಬ್ಬರೂ ಸೇರಿಕೊಂಡು ಅರ್ಧಂಬರ್ದ ಪ್ರೇಮ ಕಥೆ ಸಿನಿಮಾದಲ್ಲಿ ನಟಿಸಿದ್ದಾರೆ. ಶೀಘ್ರದಲ್ಲಿ ಸಿನಿಮಾ ರಿಲೀಸ್ ಆಗಲಿದೆ.
ಇನ್ನು ಸಿನಿಮಾದಲ್ಲಿ ಬ್ಯುಸಿಯಾಗಿರುವ ಈ ಜೋಡಿ ಈಗ ಹೊಸ ಉದ್ಯಮ ಆರಂಭಿಸಿದ್ದಾರೆ. Posh nails and Lashes ಸ್ಟುಡಿಯೋ ಆರಂಭಿಸಿದ್ದಾರೆ.
ಸಖತ್ ರಿಚ್ ಲುಕ್ ಕೊಡುವ ಡಿಸೈನರ್ ನೇಲ್ ಆರ್ಟ್‌ಗಳನ್ನು ಇಲ್ಲಿ ಮಾಡಲಾಗುತ್ತದೆ. ಜೊತೆ ನಕಲಿ ಕಣ್ಣು ರೆಪ್ಪೆಗಳನ್ನು ನಿಜವಾದ ರೆಪ್ಪೆ ರೀತಿ ಎಕ್ಸಪರ್ಟ್‌ಗಳ ಸಹಾಯದಿಂದ ಹಾಕುತ್ತಾರೆ.
ಓಪನಿಂಗ್ ಕಾರ್ಯಕ್ರಮಕ್ಕೆ ಕನ್ನಡ ಕಿರುತೆರೆ ಜನಪ್ರಿಯಾ ಸೆಲೆಬ್ರಿಟಿಗಳು ಹಾಗೂ ಸೋಷಿಯಲ್ ಮೀಡಿಯಾ ಸ್ಟಾರ್‌ಗಳು ಭಾಗಿಯಾಗಿ ವಿಶ್ ಮಾಡಿದ್ದರು.