- Home
- Entertainment
- TV Talk
- Bigg Boss ಸ್ಪರ್ಧಿ ಸಾವು; ಆತ್ಮದ ಜೊತೆ ಮಾತನಾಡೋಕೆ ಹೋದ ತಂಡಕ್ಕೆ ಬೆವರಿಳಿಸಿದ ಆ ಶಕ್ತಿ..! ಯಪ್ಪಾ..!
Bigg Boss ಸ್ಪರ್ಧಿ ಸಾವು; ಆತ್ಮದ ಜೊತೆ ಮಾತನಾಡೋಕೆ ಹೋದ ತಂಡಕ್ಕೆ ಬೆವರಿಳಿಸಿದ ಆ ಶಕ್ತಿ..! ಯಪ್ಪಾ..!
Actress Shefali Jariwala Death: ವೈಜ್ಞಾನಿಕತೆ ಎಷ್ಟೇ ಮುಂದುವರೆದರೂ ದೆವ್ವ, ಮಾಟ-ಮಂತ್ರದ ಬಗ್ಗೆ ಆಗಾಗ ಒಂದಿಷ್ಟು ವಿಷಯಗಳು ಕೇಳಿ ಬರುವುದು. ಸೆಲೆಬ್ರಿಟಿಗಳ ಮೇಲೂ ಮಾಟ ಮಂತ್ರ ನಡೆಯುವುದಂತೆ. ಮಹಾರಾಷ್ಟ್ರದ ಭಯಾನಕ ಕಾಡಿಗೆ ಒಂದು ತನಿಖಾ ತಂಡ ಭೇಟಿ ನೀಡಿತು. ಅಲ್ಲಿ ಒಂದಿಷ್ಟು ವಿಷಯ ಬಯಲಾಗಿದೆ.

ನಿಗೂಢ ತಾಣದ ಹುಡುಕಾಟ
ಮಹಾರಾಷ್ಟ್ರದ ಒಂದು ಪ್ರದೇಶದಲ್ಲಿ ಅತಿ ಹೆಚ್ಚು ಮಾಟ-ಮಂತ್ರ ನಡೆಯವುದು. ಅಲ್ಲಿ ಪೂಜಾ ಸಾಮಗ್ರಿಗಳು, ಸುಗಂಧ ದ್ರವ್, ಬಾಟಲಿಗಳು, ಪ್ಲಾಸ್ಟಿಕ್ ಕವರ್‌ಗಳು ಕಂಡುಬಂದವು. ಬಾಲಿವುಡ್ ನಟಿ, ಬಿಗ್ ಬಾಸ್ ಸ್ಪರ್ಧಿ ಶಫಾಲಿ ಜರಿವಾಲಾ ಅವರು ಹೃದಯಾಘಾತದಿಂದ ನಿಧನರಾದರು ಎನ್ನಲಾಗಿದೆ. ಆದರೆ ಅವರ ಮೇಲೂ ಮಾಟ ಮಂತ್ರ ನಡೆದಿದೆ ಎನ್ನಲಾಗಿದೆ. ಈಗ 'ಸ್ಪಿರಿಟ್ ಕಮ್ಯುನಿಕೇಶನ್' ಅವರ ಆತ್ಮದೊಂದಿಗೆ ಸಂಭಾಷಣೆ ಮಾಡಿದೆಯಂತೆ.
ಆತ್ಮದ ಜೊತೆ ಮಾತಾಡುವಾಗ ಏನಾಯ್ತು?
ಈ ತನಿಖೆ ಆಗುವಾಗ ಕಾಡಿನ ಮಧ್ಯೆ ಯಾವುದೋ ಕುಟುಂಬ ಇದ್ದಂತೆ, ಯಾರೋ ಒಬ್ಬಂಟಿಯಾಗಿ ದಾರಿಯಲ್ಲಿ ಹೋಗುವಂತೆ ಕಂಡಿದೆ. ಆ ತಂಡದಲ್ಲಿದ್ದ ಮುಖ್ಯಸ್ಥರಿಗೆ ಇದ್ದಕ್ಕಿದ್ದಂತೆ ಗಂಟಲು ಭಾರವಾದ ಅನುಭವ ಆಗಿದೆ, ಅತಿಯಾದ ಚಳಿಯಾಗಿದೆ. ಇದನ್ನು ಅವರು ಅಲ್ಲಿನ 'ನೆಗೆಟಿವ್ ಎನರ್ಜಿ' ಎಂದು ಹೇಳುತ್ತಾರೆ. ತನಿಖೆಗೆ ಬಳಸುತ್ತಿದ್ದ ಕ್ಯಾಮೆರಾಗಳು ಇದ್ದಕ್ಕಿದ್ದಂತೆ ಆಫ್ ಆದವು, ಮೋಷನ್ ಸೆನ್ಸರ್ ಲೈಟ್‌ಗಳು ಅಸಹಜವಾಗಿ ವರ್ತಿಸಿದವು.
ಯಾವುದೋ ಶಕ್ತಿ ಇತ್ತು
ಶಫಾಲಿ ಜರಿವಾಲಾ ಬಗ್ಗೆ ಪ್ರಶ್ನೆಗಳನ್ನು ಕೇಳಿದಾಗ, ಅಲ್ಲಿನ ವಾತಾವರಣದಲ್ಲಿ ಒಂದಿಷ್ಟು ವಿಚಿತ್ರ ಬದಲಾವಣೆ ಆಗಿವೆ. ಗಾಳಿ ಇಲ್ಲದಿದ್ದರೂ ಮರದ ಒಂದು ಕೊಂಬೆ ಮಾತ್ರ ಜೋರಾಗಿ ಅಲುಗಾಡಿದೆ, ನೀರಿನ ಮೂಲ ಇಲ್ಲದಿದ್ರೂ, ಒಂದಿಷ್ಟು ಜಾಗ ಹಸಿ ಆಗಿತ್ತು. "ನಾವು ಇಲ್ಲಿಂದ ಹೋಗಬೇಕೆಂದು ನೀವು ಬಯಸುತ್ತೀರಾ?" ಎಂದು ಕೇಳಿದಾಗ, ಮೋಷನ್ ಸೆನ್ಸರ್ ಲೈಟ್ ಬೆಳಗಿದ್ದು, ಅಲ್ಲಿ ಯಾವುದೋ ಶಕ್ತಿ ಇದೆ ಎಂದು ಗೊತ್ತಾಗಿದೆ.
ಮಾಟ ಮಂತ್ರ ಆಗಿದೆ!
ಈ ಬಗ್ಗೆ ತನಿಖಾಧಿಕಾರಿ ( Paranormal Investigation ) Saurabh Poonia ಅವರು ಪಾಡ್‌ಕಾಸ್ಟ್‌ವೊಂದರಲ್ಲಿ ಮಾತನಾಡಿದ್ದು, “ಶೆಫಾಲಿ ಪತಿ ಕೂಡ ಮಾಟ ಮಂತ್ರ ಆದಂತೆ ಅನಿಸುತ್ತಿದೆ, ನನಗೆ ಇದರ ಅನುಭವ ಆಗಿದೆ ಎಂದು ಹೇಳಿದ್ದರು. ನಾವು ತನಿಖೆ ಮಾಡಿದಾಗ ಮಾಟ ಮಂತ್ರ ಆದಂತೆ ಅನಿಸಿತು, ಆದರೆ ಯಾರು ಮಾಡಿದ್ದಾರೆ ಎನ್ನೋದು ಗೊತ್ತಾಗಿಲ್ಲ” ಎಂದು ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

