- Home
- Entertainment
- TV Talk
- ಬಿಗ್ ಬಾಸ್ ಮನೆಗೆ ಪವರ್ ಕಟ್, ಕಗ್ಗಲತ್ತಲ್ಲಿ ಕಂಟೆಸ್ಟೆಂಟ್‌ಗಳು; BESCOM ಕಿತಾಪತಿ ಇರಬಹುದೇ?
ಬಿಗ್ ಬಾಸ್ ಮನೆಗೆ ಪವರ್ ಕಟ್, ಕಗ್ಗಲತ್ತಲ್ಲಿ ಕಂಟೆಸ್ಟೆಂಟ್‌ಗಳು; BESCOM ಕಿತಾಪತಿ ಇರಬಹುದೇ?
ಬಿಗ್ ಬಾಸ್ ಕನ್ನಡ ಸೀಸನ್ 12 ರಲ್ಲಿ ವಿಲನ್ ಟಾಸ್ಕ್‌ನ ಭಾಗವಾಗಿ ಇಡೀ ಮನೆ ಕಗ್ಗತ್ತಲಲ್ಲಿ ಮುಳುಗಿದೆ. ಇದರ ನಡುವೆ, ಗಿಲ್ಲಿ ನಟನಿಗೆ ನೀಡಲಾದ ಸೀಕ್ರೆಟ್ ಟಾಸ್ಕ್‌ನಂತೆ 'ಕಿಚ್ಚನ ಚಪ್ಪಾಳೆ' ಫೋಟೋಗಳನ್ನು ಕದಿಯಲಾಗಿದ್ದು, ಮನೆಯ ಸದಸ್ಯರು ಆತಂಕಕ್ಕೊಳಗಾಗಿದ್ದಾರೆ.

ಕಗ್ಗತ್ತಲಲ್ಲಿ ಮುಳುಗಿದ ಬಿಗ್ ಬಾಸ್ ಮನೆ
ಕನ್ನಡ ಬಿಗ್ ಬಾಸ್ ಸೀಸನ್ 12 (Bigg Boss Kannada season 12) ಎಕ್ಸ್‌ಪೆಕ್ಟೆಡ್ ಟು ಅನ್‌ಎಕ್ಸ್‌ಪೆಕ್ಟೆಡ್ (Expected to Unexpected) ಎಂಬ ಥೀಮ್‌ನಲ್ಲಿ ಮೂಡಿಬರುತ್ತಿದೆ. ಈ ಸೀಸನ್‌ನ ರಿಯಾಲಿಟಿ ಶೋಗೆ ರಾಜ್ಯ ಸರ್ಕಾರವೇ ಆರಂಭದಲ್ಲಿ ಅನ್‌ಎಕ್ಸ್‌ಪೆಕ್ಟೆಡ್ ಎನ್ನುವಂತೆ ಶಾಕ್ ಕೊಟ್ಟಿತ್ತು. ಆದರೆ, ಇದೀಗ ಬಿಗ್ ಬಾಸ್ ಮನೆಗೆ ವಿಲನ್ ಎಂಟ್ರಿ ಕೊಟ್ಟ ಬೆನ್ನಲ್ಲಿಯೇ ಮತ್ತೊಂದು ಎಡವಟ್ಟು ಸಂಭವಿಸಿದೆ. ಇಡೀ ಮನೆಯಲ್ಲಿ ಲೈಟ್‌ಗಳು ಬೆಳಗದೇ ಕಂಟೆಸ್ಟೆಂಟ್‌ಗಳು ಕಗ್ಗತ್ತಲ್ಲಿ ಪರದಾಡುವಂತಾಗಿದೆ.
ಬೆಸ್ಕಾಂ ಇಲಾಖೆ ತಪ್ಪೇನಿಲ್ಲ
ಬಿಗ್ ಬಾಸ್ ಮನೆಯಲ್ಲಿ ಕರೆಂಟ್ ಇದ್ದರೂ ಬೆಳಕು ಮಾತ್ರ ಇಲ್ಲ. ಪ್ರತಿ ಹೆಜ್ಜೆಗೊಂದು ಲೈಟ್ ಅಳವಡಿಸಿ, ಜಿಗಿಜಿಗಿ ಮಿಂಚುವಂತೆ ಮನೆಯನ್ನು ರೆಡಿ ಮಾಡಿದ್ದರೂ ಬಲ್ಪ್ ಮಾತ್ರ ಆನ್ ಆಗುತ್ತಿಲ್ಲ. ಇದಕ್ಕೆ ಕಾರಣ ಬೆಸ್ಕಾಂ ಮಾತ್ರ ಅಲ್ಲವೇ ಇಲ್ಲ. ಅಸಲಿಯಾಗಿ ಬಿಗ್ ಬಾಸ್ ಮನೆಯಲ್ಲಿ ಈ ವಾರ ನಡೆಯುತ್ತಿರುವ ವಿಲನ್ ಟಾಸ್ಕ್‌ನಲ್ಲಿನ ಒಂದು ಟಾಸ್ಕ್ ಆಗಿದೆ. ಇದೀಗ ವಿಲನ್ ಎಲ್ಲ ಕಂಟೆಸ್ಟೆಂಟ್‌ಗಳ ಬೆವರಿಳಿಸಲು ಮುಂದಾಗಿದ್ದಾರೆ. ಅದರಂತೆ ಇಡೀ ಮನೆಯ ಬೆಳಕನ್ನು ತೆಗೆದು ಕತ್ತಲು ಮಾಡಿದ್ದಾರೆ.
ಬಿಗ್ ಬಾಸ್ ಸ್ಪರ್ಧಿಗಳು ಬೆವರಿಳಿಸಿದರೆ ಮಾತ್ರ ಬೆಳಕು
ಇನ್ನು ಕಂಟೆಸ್ಟೆಂಟ್‌ಗಳಿಗೆ ಬೆಳಕು ಬೇಕಾದಲ್ಲಿ ಅವರು ಸೈಕಲ್ ತುಳಿದು ಬೆವರಿಳಿಸಿದರೆ ಮಾತ್ರ ಬೆಳಕು ಬರುತ್ತದೆ. ಸೈಕಲ್ ಹೊಡೆಯುವುದನ್ನು ನಿಲ್ಲಿಸಿದರೆ ಕತ್ತಲಾಗುತ್ತದೆ. ಈ ಟಾಸ್ಕ್‌ನಿಂದ ಮನೆ ಮಂದಿಯೆಲ್ಲಾ ಹೈರಾಣಾಗಿದ್ದಾರೆ. ಆದರೆ, ಬಿಗ್ ಬಾಸ್ ವಿಲನ್ ಮುಂದೆ ಏನೇ ಮಾಡಿದರೂ ಬೆಳಕು ಬರುವುದಿಲ್ಲ, ಬೆಳಕು ಬೇಕೆಂದರೆ ಸೈಕಲ್ ಹೊಡೆಯುವುದು ಅನಿವಾರ್ಯವಾಗಿದೆ.
ಅಶ್ವಿನಿ ಗೌಡ, ಗಿಲ್ಲಿ ನಟ ಸೇಫ್
ವಿಲನ್ ಅವರು ಅಶ್ವಿನಿ ಗೌಡ ಮತ್ತು ಗಿಲ್ಲಿ ನಟನಿಗೆ ಒಂದು ಟಾಸ್ಕ್ ನೀಡಿದ್ದು ಅವರು ಅಡುಗೆ ಮಾಡುವ ಟಾಸ್ಕ್‌ಗೆ ಸೀಮಿತವಾಗಿದ್ದಾರೆ. ಆದ್ದರಿಂದ ಗಿಲ್ಲಿ ಹಾಗೂ ಅಶ್ವಿನಿ ಅವರು ಸೈಕಲ್ ತುಳಿಯುವುದರಿಂದ ಸ್ವಲ್ಪ ರಿಲ್ಯಾಕ್ಸ್ ಪಡೆಯಲಿದ್ದಾರೆ. ಆದರೆ, ಉಳಿದ ಎಲ್ಲ ಸ್ಪರ್ಧಿಗಳಿಗೂ ಸೈಕಲ್ ತುಳಿದು ಬೆವರಿಳಿಸುವುದು ಕಡ್ಡಾಯವಾಗಿದೆ.
ಫೋಟೋ ಎತ್ತಿಡುವ ಟಾಸ್ಕ್‌ಗೂ ನೆರವಾದ ಕತ್ತಲು
ಈ ವಾರದ ಟಾಸ್ಕ್‌ನಲ್ಲಿ ಗಿಲ್ಲಿ ನಟ ಹಾಗೂ ಅಶ್ವಿನಿ ಗೌಡ ಅವರಿಗೆ ಮತ್ತೊಂದು ಸೀಕ್ರೆಟ್ ಟಾಸ್ಕ್ ನೀಡಿದ್ದಾರೆ. ಅದರಲ್ಲಿ ಕಾವ್ಯಾಳನ್ನು ಅಳಿಸುವುದು ಹಾಗೂ ಕಿಚ್ಚನ ಚಪ್ಪಾಳೆಯ ಮೂವರ ಫೋಟೋಗಳನ್ನು ಅಲ್ಲಿಂದ ತೆಗೆಯುವುದು ಸವಾಲಾಗಿದೆ. ಇನ್ನು ಕತ್ತಲು ಬೆಳಕಿನ ಈ ಆಟದಲ್ಲಿ ಕತ್ತಲಾದಾಗ ಗಿಲ್ಲಿಗೆ ಕಿಚ್ಚನ ಚಪ್ಪಾಳೆ ಫೋಟೋಗಳನ್ನು ಎತ್ತಿ ಇಡುವುದಕ್ಕೆ ಅವಕಾಶ ಸಿಕ್ಕಂತಾಗಿದೆ.
ಮನೆ ಮೂಲೆಗಳಲ್ಲಿ ಫೋಟೋಗಳಿಗೆ ಹುಡುಕಾಟ
ಗೋಡೆ ಮೇಲೆ ಕಿಚ್ಚನ ಚಪ್ಪಾಳೆಯ ಫೋಟೋಗಳನ್ನು ಗಿಲ್ಲಿ ಹುಷಾರಾಗಿ ಎತ್ತಿಟ್ಟಿದ್ದಾನೆ. ಮನೆಯ ಎಲ್ಲ ಸಹ ಸ್ಪರ್ಧಿಗಳು ಕಿಚ್ಚನ ಚಪ್ಪಾಳೆ ಫೋಟೋಗಳು ಯಾಕೆ ಕಾಣಿಸುತ್ತಿಲ್ಲವೆಂದು ಗಾಬರಿಯಾಗಿದ್ದಾರೆ. ಎಲ್ಲರೂ ಸೇರಿಕೊಂಡು ಮನೆಯ ಮೂಲೆ ಮೂಲೆಗಳಲ್ಲಿ ಫೋಟೋಗಳನ್ನು ಹುಡುಕಲು ಮುಂದಾಗಿದ್ದಾರೆ.
ರಕ್ಷಿತಾಳ ಒಂದು ಫೋಟೊ ಮಾತ್ರ ಇದೆ
ಕಿಚ್ಚನ ಚಪ್ಪಾಳೆ ಫೋಟೋಗಳನ್ನು ಅಳವಡಿಕೆ ಮಾಡಿದ್ದ ಗೋಡೆಯಲ್ಲಿ ರಕ್ಷಿತಾಳ ಒಂದೇ ಒಂದು ಫೋಟೋ ಇದ್ದು, ಉಳಿದ ಮೂವರ ಫೋಟೋ ನಾಪತ್ತೆಯಾಗಿದೆ. ಗಿಲ್ಲಿಯೇ ಈ ಫೋಟೋಗಳನ್ನು ಎತ್ತಿಕೊಂಡು ಹೋಗಿದ್ದಾರೆ ಎಂಬ ಅನುಮಾನ ಬಂದಿದೆ. ಆದ್ದರಿಂದ ಎಲ್ಲ ಮೂಲೆಗಳಲ್ಲಿಯೂ ಫೋಟೋಗಾಗಿ ಉಳಿದ ಸದಸ್ಯರು ಶೋಧ ಕಾರ್ಯ ಮುಂದುವರೆಸಿದ್ದಾರೆ.
ಸೀಕ್ರೇಟ್ ಟಾಸ್ಕ್ ರಿವೀಲ್ ಆಗುವ ಭಯ
ಕಿಚ್ಚನ ಚಪ್ಪಾಳೆಯ ಫೋಟೋಗಳು ನಾಪತ್ತೆ ಆಗಿರುವುದಕ್ಕೆ ಗಿಲ್ಲಿ ನಟನೇ ಕಾರಣವೆಂದು ಮನೆ ಮಂದಿಯೆಲ್ಲಾ ಅನುಮಾನ ವ್ಯಕ್ತಪಡಿಸಿದ್ದಾರೆ. ಇವರು ನಮ್ಮ ನಿದ್ದೆ ಹಾಳು ಮಾಡಬೇಕೆಂದು ತೀರ್ಮಾನಿಸಿದ್ದಾರೆ. ಈ ವೇಳೆ ರಜತ್ ಅವರು ಗಿಲ್ಲಿಯನ್ನು ದೇವರ ಮುಂದೆ ಕರೆದುಕೊಂಡು ಹೋಗಿ ನಿಲ್ಲಿಸಿ 'ನನಗೂ ಇದಕ್ಕೂ ಸಂಬಂಧವಿಲ್ಲ, ನನಗೇನೂ ಗೊತ್ತಿಲ್ಲ' ಎಂದು ಪ್ರಮಾಣ ಮಾಡುವಂತೆ ಹೇಳಿದ್ದಾನೆ.
ಗಿಲ್ಲಿಯ ಕಿತಾಪತಿಗೆ ನೆಮ್ಮದಿ ಕಳೆದುಕೊಂಡ ಮನೆಮಂದಿ
ಆದರೆ, ಅಲ್ಲಿಂದ ಗಿಲ್ಲಿ ತಪ್ಪಿಸಿಕೊಂಡು ಹೋಗಿದ್ದಾರೆ. ಜೊತೆಗೆ, ಚೈತ್ರಾ ಕುಂದಾಪುರ ಅವರು ಕಿಚ್ಚಿನ ಚಪ್ಪಾಳೆ ಫೋಟೋ ಹೋದರೂ ಆರಾಮವಾಗಿದ್ದೀರಿ ಎಂದರೆ ನಿಮ್ಮಿಂದಲೇ ಏನೋ ನಡೆದಿದೆ ಎಂದು ಗಿಲ್ಲಿಯೇ ತಪ್ಪಿತಸ್ಥ ಎಂದು ಬಿಂಬಿಸಲು ಮುಂದಾಗಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

