- Home
- Entertainment
- TV Talk
- Amruthadhare Serial: ಮಲ್ಲಿಗಾಗ್ತಿದ್ದ ಅವಮಾನಕ್ಕೆ ಬೆಂಕಿಯಾದ ಭೂಮಿ... ಶಕುಂತಲಾಗೆ ನಡುಕ ಶುರು
Amruthadhare Serial: ಮಲ್ಲಿಗಾಗ್ತಿದ್ದ ಅವಮಾನಕ್ಕೆ ಬೆಂಕಿಯಾದ ಭೂಮಿ... ಶಕುಂತಲಾಗೆ ನಡುಕ ಶುರು
ಅಮೃತಧಾರೆ ಧಾರಾವಾಹಿಯಲ್ಲಿ ಮಲ್ಲಿಯನ್ನು ಅವಮಾನಿಸಿದ ಶಕುಂತಲಾ ಸ್ನೇಹಿತರಿಗೆ ಭೂಮಿ ಸರಿಯಾಗಿ ಪಾಠ ಮಾಡಿದ್ದು, ಇದೀಗ ಶಕುಂತಲಾಗೆ ನಡುಕ ಶುರುವಾಗಿದೆ.

ಅಮೃತಧಾರೆ ಧಾರಾವಾಹಿಯಲ್ಲಿ (Amruthadhare serial)ಭೂಮಿ ಗೌತಮ್ ಮಗುವಿನ ನಾಮಕರಣ ಕಾರ್ಯಕ್ರಮ ಏನೋ ಅದ್ಧೂರಿಯಾಗಿ ನಡೆದಿದೆ. ಈ ಕಾರ್ಯಕ್ರಮದಲ್ಲಿ ಭೂಮಿ ಮನೆಯವರು ಅಲ್ಲದೇ ಶಾಕುಂತಲಾ ಸ್ನೇಹಿತರೂ ಆಗಮಿಸಿ, ಮನೆಕೆಡಿಸುವ ಮಾತನಾಡಿದ್ದಾರೆ.
ನಾಮಕರಣಕ್ಕೆ ಬಂದ ಶಾಕುಂತಲಾ ಸ್ನೇಹಿತರು ಆಕೆಯ ಮಾತಿನಂತೆ ಮಲ್ಲಿ ಕುರಿತು ಕೊಂಕು ಮಾತು ಆಡೋದಕ್ಕೆ ಶುರುಮಾಡುತ್ತಾರೆ. ನಿನಗಿದೊಂದು ಮಿಕ್ಸ್ಡ್ ಫೀಲಿಂಗ್ ಅಲ್ವಾ? ಒಂದು ಕಡೆ ಖುಷಿ, ಮತ್ತೊಂದು ಕಡೆ ಬೇಸರ. ಯಾಕಂದ್ರೆ ನಿಮ್ಮ ದೊಡ್ಡ ಸೊಸೆಗೆ ವಯಸ್ಸಾಗಿದೆ ಮಗು ಆಗಲ್ಲ ಅಂದುಕೊಂಡಿದ್ವಿ ಆದ್ರೆ ಅದು ಆಗಿದೆ, ಅದು ಸಂತೋಷದ ವಿಷ್ಯ.
ಆದರೆ ಎರಡನೇ ಸೊಸೆ ಮಲ್ಲಿ ಕಥೆ ಏನು? ಆ ಕಡೆ ಮಗು ಕೂಡ ಇಲ್ಲ. ಇನ್ನೊಂದು ಕಡೆ ಗಂಡ ಕೂಡ ಇಲ್ಲ. ನಮ್ ಕಡೆ ಮಾತಿಗೆ ಗಂಡ ಕುಡುಕನೋ, ಕೆಟ್ಟವನೋ ಆಗಿರಲಿ, ಆದರೆ ಗಂಡ ಜೊತೆಗೆ ಇರಬೇಕು ಎಂದು. ಆದರೆ ಇವರಿಗೆ ಯಾರೂ ಇಲ್ಲ.
ಕಟ್ಟಿಕ್ಕೊಂಡ ಗಂಡಾನೆ ಇಲ್ಲ ಅಂದ ಮೇಲೆ ಏನು ಇದ್ದು ಏನು ಪ್ರಯೋಜನ. ಚಿನ್ನ ಬೆಳ್ಳಿ ತಟ್ಟೆಯಲ್ಲಿ ತಿಂದ್ರೂನು, ತಿನ್ನೋದು ಅನ್ನ ಸಾಂಬಾರ್ ತಾನೆ? ಸಾಂಸಾರಾನೆ ನೆಟ್ಟಗಿಲ್ಲದ ಮೇಲೆ ಏನಿದ್ದು ಏನು ಪ್ರಯೋಜನ ಹೇಳು ಅಂತಾರೆ.
ಇದನ್ನು ಕೇಳಿ ಕೆಂಡಾಮಂಡಲವಾಗುವ ಭೂಮಿ, ನೇರವಾಗಿ ಅವರ ಬಳಿ ಬಂದು ಪ್ರಶ್ನೆ ಮೇಲೆ ಪ್ರಶ್ನೆ ಕೇಳಿ ತಿರುಗೇಟು ನೀಡುತ್ತಾಳೆ. ಮನುಷ್ಯತ್ವಾನೇ ಮರೆತು ಮಾತಾಡ್ತಿದ್ದೀರಾ? ಏನು ಮಾತಾಡ್ತಿದ್ದೀರಿ ಎನ್ನುವ ಪ್ರಜ್ಞೆ ಇದೆಯಾ ನಿಮಗೆ ಎನ್ನುತ್ತಾಳೆ.
ಒಂದು ಹೆಣ್ಣಾಗಿ ಇನ್ನೊಂದು ಹೆಣ್ಣಿನ ಬಗ್ಗೆ ಹೀಗೆಲ್ಲಾ ಮಾತನಾಡೋಕೆ ಹೇಗೆ ಸಾಧ್ಯ? ಅಲ್ಲ ಅವಳ ಜೀವನದಲ್ಲಿ ನಡೆದಿರುವ ಕೆಟ್ಟ ಘಟನೆಗಳಲ್ಲಿ ಒಂದಾದರು ನಿಮ್ಮ ಜೀವನದಲ್ಲಿ ನಡೆದಿದೆಯಾ? ನಿಮ್ಮ ಮಗು ಸತ್ತೋಯ್ತಾ? ಅಥವಾ ನಿಮ್ಮ ಗಂಡ ನಿಮ್ಮನ್ನು ಬಿಟ್ಟೋದ್ರಾ? ನಿಮ್ಮಂತ ವೀಕ್ ಮೈಂಡ್ ಗೆ ಅದನ್ನೆಲ್ಲಾ ಸಹಿಸೋ ಶಕ್ತಿ ಇಲ್ಲ ಎನ್ನುತ್ತಾಳೆ ಭೂಮಿಕಾ.
ಭೂಮಿಕಾ ಮಾತು ಕೇಳಿ ಶಾಕುಂತಲಾಗೆ ಕೋಪ ಬರುತ್ತೆ. ಯಾಕಂದ್ರೆ ಜೈನ ಮತ್ತೆ ಮನೆಗೆ ಕರೆಸೋದಕ್ಕೆ ಇದೆಲ್ಲಾ ಶಾಕುಂತಲಾ ಮಾಡಿದ ಪ್ಲ್ಯಾನ್ ಆಗಿತ್ತು. ಆದರೆ ಭೂಮಿಕಾ ಮಾತಿನಿಂದ ಎಲ್ಲಾ ಪ್ಲ್ಯಾನ್ ಉಲ್ಟಾ ಹೊಡೆಯಿತು. ಮುಂದೆ ಶಾಕುಂತಲಾಗೂ ಕ್ಲಾಸ್ ತೆಗೆದುಕೊಳ್ಳುತ್ತಾಳೆ ಭೂಮಿಕಾ. ಕಾದು ನೋಡೋಣ ಏನಾಗುತ್ತೆ ಎಂದು.