Bigg Boss Kannada: ಅಶ್ವಿನಿ ಪರ ವೋಟ್ ಕೇಳಿ, ಜನತೆಗೆ ಬುದ್ಧಿವಾದ ಹೇಳಿದ ಜಾಹ್ನವಿ
Bigg Boss Kannada : ಬಿಗ್ ಬಾಸ್ ಸ್ಪರ್ಧಿ ಅಶ್ವಿನಿ ಗೌಡ ಪರ ಜಾಹ್ನವಿ ಮತ ಯಾಚನೆ ಮಾಡಿದ್ದಾರೆ. ಅಶ್ವಿನಿ, ಉತ್ತಮವಾಗಿ ಆಟ ಆಡಿದ್ದು, ಅವರಿಗೆ ನಿಮ್ಮ ವೋಟ್ ಹಾಕಿ ಎಂದ ಜಾಹ್ನವಿ, ರಿಯಾಲಿಟಿ ಶೋವನ್ನು ಇಷ್ಟೊಂದು ಗಂಭೀರವಾಗಿ ತೆಗೆದುಕೊಂಡ ಜನತೆಗೆ ಬುದ್ಧಿವಾದ ಕೂಡ ಹೇಳಿದ್ದಾರೆ.

ಮತಯಾಚನೆ ಜೋರು
ಬಿಗ್ ಬಾಸ್ ನ ಆರು ಸ್ಪರ್ಧಿಗಳು ಫಿನಾಲೆ ತಲುಪಾಗಿದೆ. ಧನುಷ್, ಅಶ್ವಿನಿ, ರಕ್ಷಿತಾ, ಗಿಲ್ಲಿ, ಕಾವ್ಯಾ ಹಾಗೂ ರಘು ಮಧ್ಯೆ ಬಿಗ್ ಫೈಟ್ ಇದೆ. ಕುಟುಂಬಸ್ಥರು, ಸ್ನೇಹಿತರು, ಅಭಿಮಾನಿಗಳು ತಮ್ಮಿಷ್ಟದ ಸ್ಪರ್ಧಿಗೆ ವೋಟ್ ಹಾಕುವಂತೆ ಪ್ರಚಾರ ಜೋರು ಮಾಡಿದ್ದಾರೆ.
ಅಶ್ವಿನಿ ಪರ ಮತ ಯಾಚಿಸಿದ ಜಾಹ್ನವಿ
ನಟಿ ಹಾಗೂ ಆಂಕರ್ ಜಾಹ್ನವಿ ತಮ್ಮ ಸ್ನೇಹಿತೆ ಅಶ್ವಿನಿ ಗೌಡ ಪರ ಮತ ಯಾಚನೆ ಮಾಡಿದ್ದಾರೆ. ಆತ್ಮೀಯ ಗೆಳತಿ ಅಶ್ವಿನಿ ಫಿನಾಲೆಗೆ ಬಂದಿದ್ದಾರೆ. ತುಂಬಾ ಚೆನ್ನಾಗಿ ಅಶ್ವಿನಿ ಆಟವನ್ನು ಆಡಿದ್ದಾರೆ. ನಾನು ಈಗಾಗಲೇ ವೋಟ್ ಮಾಡಿದ್ದೇನೆ. ನೀವೂ ಅಶ್ವಿನಿಯವರಿಗೆ ಮತ ನೀಡಿ ಅಂತ ಜಾಹ್ನವಿ, ವೀಕ್ಷಕರಲ್ಲಿ ಮನವಿ ಮಾಡಿದ್ದಾರೆ.
ಜಾಹ್ನವಿ – ಅಶ್ವಿನಿ ಸ್ನೇಹ
ಬಿಗ್ ಬಾಸ್ ಮನೆಗೆ ಬಂದ ಆರಂಭದಲ್ಲಿ ಅಶ್ವಿನಿ ಹಾಗೂ ಜಾಹ್ನವಿ ದೂರವಿದ್ರೂ ಎರಡೇ ವಾರದಲ್ಲಿ ಹತ್ತಿರವಾಗಿದ್ದರು. ಜಾಹ್ನವಿ ವೈಯಕ್ತಿಕ ಬದುಕಿನ ಕಥೆ ಅಶ್ವಿನಿಯವರನ್ನು ಹತ್ತಿರ ಮಾಡಿತ್ತು. ಬಿಗ್ ಬಾಸ್ ಮನೆಯಲ್ಲಿ ಒಂದು ಟೀಮಿನಂತೆ ಇವರಿಬ್ಬರು ಆಟ ಆಡಿದ್ದರು. ತಮಾಷೆ ಇರಲಿ ಜಗಳ ಇರಲಿ ಒಬ್ಬರಿಗೊಬ್ಬರು ಬಿಟ್ಟುಕೊಡ್ತಿರಲಿಲ್ಲ. ಜಾಹ್ನವಿ ಮನೆಯಿಂದ ಹೊರಗೆ ಬಂದ್ಮೇಲೂ ಅಶ್ವಿನಿ ಅವರನ್ನು ಹೊಗಳಿದ್ದಾರೆ. ಅಶ್ವಿನಿ ಕೂಡ, ಆಗಾಗ ಜಾಹ್ನವಿ ನೆನಪಿಸಿಕೊಂಡಿದ್ದಾರೆ. ಈ ಮನೆಯಲ್ಲಿ ಯಾರ ಜೊತೆ ಬಂಧ ಬೆಳೆದಿದೆ ಎಂದಾಗ ಕೂಡ ಅಶ್ವಿನಿ ಜಾಹ್ನವಿ ಹೆಸರನ್ನು ಹೇಳಿದ್ದರು. ಜಾಹ್ನವಿ ಮನೆಯಿಂದ ಬಂದ್ಮೇಲೆ ಅವರನ್ನು ಮಿಸ್ ಮಾಡ್ಕೊಂಡಿದ್ದ ಅಶ್ವಿನಿ ಈಗ ಫಿನಾಲೆ ತಲುಪಿದ್ದಾರೆ.
ಫ್ಯಾನ್ಸ್ ಮಧ್ಯೆ ಕಚ್ಚಾಟ
ಬಿಗ್ ಬಾಸ್ ಫಿನಾಲೆಗೆ ಬರ್ತಿದ್ದಂತೆ ಅಭಿಮಾನಿಗಳ ಅಭಿಮಾನ ಹೆಚ್ಚಾಗಿದೆ. ಬಿಗ್ ಬಾಸ್ ನಲ್ಲಿ ಅತಿ ಹೆಚ್ಚು ಮತ ಪಡೆದವರು ವಿನ್ ಆಗ್ತಾರೆ. ಯಾರಿಗೆ ಎಷ್ಟು ವೋಟ್ ಬಿದ್ದಿದೆ ಎಂಬುದನ್ನು ಕಿಚ್ಚ ಸುದೀಪ್ ಫಿನಾಲೆಯಲ್ಲಿ ಅನೌನ್ಸ್ ಕೂಡ ಮಾಡ್ತಾರೆ. ಆದ್ರೆ ಇದನ್ನು ನಂಬಲು, ಒಪ್ಪಲು ಸ್ಪರ್ಧಿಗಳ ಫ್ಯಾನ್ಸ್ ಸಿದ್ಧ ಇಲ್ಲ. ಒಬ್ಬರು ಗಿಲ್ಲಿ ಗೆದ್ದೇ ಗೆಲ್ಬೇಕು ಅಂದ್ರೆ ಇನ್ನೊಬ್ಬರು ಅಶ್ವಿನಿ ಹೆಸರು ಹೇಳ್ತಿದ್ದಾರೆ. ಮತ್ತೊಬ್ಬರು ರಕ್ಷಿತಾ ಹೆಸರು ಹೇಳ್ತಿದ್ದಾರೆ. ಈ ಗುದ್ದಾಟ ಬರೀ ಹೆಸರಿಗೆ ಸೀಮಿತವಾಗಿದ್ರೆ ತೊಂದ್ರೆ ಇರಲಿಲ್ಲ. ಕಲರ್ಸ್ ಕನ್ನಡಕ್ಕೆ ಧಮಕಿ ಕೂಡ ಹಾಕಲಾಗ್ತಿದೆ. ಎಚ್ಚರಿಕೆ ನೀಡಲಾಗ್ತಿದೆ.
ಜಾಹ್ನವಿ ಬುದ್ಧಿಮಾತು
ಅಶ್ವಿನಿ ಪರ ವೋಟ್ ಕೇಳಿದ ಜಾಹ್ನವಿ, ಜನರಿಗೆ ಬುದ್ಧಿ ಹೇಳಿದ್ದಾರೆ. ಬಿಗ್ ಬಾಸ್ ಗೆಲುವಿನ ವಿಷ್ಯದಲ್ಲಿ ಗಲಾಟೆ ಏಕೆ ಎಂಬುದನ್ನು ಅವರು ಕೇಳಿದ್ದಾರೆ. ಕೆಲವೊಂದು ಸ್ಪರ್ಧಿಗಳ ಅಭಿಮಾನಿಗಳು, ಗೆಲ್ಸಿಲ್ಲ ಅಂದ್ರೆ ಅದನ್ನು ಮಾಡ್ತೇವೆ, ಸುಟ್ಟು ಹಾಕ್ತೇವೆ ಅಂತ ಹೆದರಿಸ್ತಿದ್ದಾರೆ. ಇದು ಯಾವುದೂ ವರ್ಕ್ ಆಗೋದಿಲ್ಲ. ಇದು ಅಭ್ಯರ್ಥಿಗೆ ಪಾಸಿಟಿವ್ ಆಗೋದಿಲ್ಲ. ನೆಗೆಟಿವ್ ಆಗುತ್ತೆ ಹುಷಾರಾಗಿರಿ ಎಂದಿದ್ದಾರೆ.
ಚುನಾವಣೆಯಲ್ಲೂ ಇಷ್ಟೇ ಆಸಕ್ತಿವಹಿಸಿ
ಬಿಗ್ ಬಾಸ್ ಒಂದು ರಿಯಾಲಿಟಿ ಶೋ. ಅದನ್ನು ಮನರಂಜನೆಗೆ ನೋಡಿ. ಅದನ್ನು ಪರ್ಸನಲ್ ಆಗಿ ತೆಗೆದುಕೊಳ್ಬೇಡಿ. ರಿಯಾಲಿಟಿ ಶೋಗೆ ಕೊಡುವ ಆಸಕ್ತಿ, ಆವೇಶವನ್ನು ಐದು ವರ್ಷಕ್ಕೊಮ್ಮೆ ಬರುವ ಚುನಾವಣೆಯಲ್ಲಿ ತೋರಿಸಿ. ಇದ್ರ ಶೇಕಡಾ 10ರಷ್ಟು ಆಸಕ್ತಿಯನ್ನು ಅಲ್ಲಿ ತೋರಿಸಿದ್ರೆ ನಮ್ಮ ನಾಡು, ದೇಶ ಉದ್ದಾರ ಆಗ್ತಿತ್ತು. ಜನಪ್ರತಿನಿಧಿಗಳ ಆಯ್ಕೆಯಲ್ಲೂ ಆಸಕ್ತಿ ತೋರಿಸಿ, ಹೇಳಬೇಕು ಅನ್ನಿಸ್ತು ಹೇಳಿದೆ ಅಂತ ಜಾಹ್ನವಿ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

