ನಾನು ಹುಡುಗಿಯಾಗಬೇಕು: ಮೇಕಪ್ ಮಾಡಿಸಿಕೊಂಡ ಅರ್ಯವರ್ಧನ್ ಗುರೂಜಿ ಕಾಲೆಳೆದ ನೆಟ್ಟಿಗರು
ಮೂರು ಮೂರು ದಿನಕ್ಕೂ ಲುಕ್ ಬದಲಾಯಿಸಿಕೊಂಡು ಆರ್ಯವರ್ಧನ ಗುರೂಜಿ. ನೆಟ್ಟಿಗರ ಕಾಮೆಂಟ್ ನೋಡಿದ್ರಾ?
ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಕಾಲ್ ಮೂಲಕ ಜನರ ಅಸಲಿ ಕಥೆಗಳನ್ನು ಬಿಚ್ಚಿಡುತ್ತಿದ್ದ ಅರ್ಯವರ್ಧನ ಗುರುಜಿ ಬಿಗ್ ಬಾಸ್ ಓಟಿಟಿಗೆ ಕಾಲಿಟ್ಟಿದ್ದಾರೆ.
ಸದಾ ನಗುತ್ತಾ ಇನ್ನಿತ್ತರ ಸ್ಪರ್ಧಿಗಳನ್ನು ನಗಿಸುತ್ತಿರುವ ಅರ್ಯವರ್ಧನ್ ಗುರೂಜಿ ಕೇಲವ 1 ವಾರದಲ್ಲಿ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಗಳಿಸಿದ್ದಾರೆ.
ಬೆಂಗಳೂರಿನಲ್ಲಿ ಸ್ಕಿನ್ ಮತ್ತು ಹೇರ್ ಕ್ಲಿನಿಕ್ ಹೊಂದಿರುವ ಜಯಶ್ರೀ ಆರಾಧ್ಯರ ಬಳಿ ತಮ್ಮಗಿರುವ ಒಂದೇ ಒಂದು ಆಸೆಯನ್ನು ಹೇಳಿಕೊಂಡಿದ್ದಾರೆ. ಆ ಆಸೆಯನ್ನು ಜಯಶ್ರೀ ನನಸು ಮಾಡಿದ್ದಾರೆ.
ಹೌದು! ಆರ್ಯವರ್ಧನ್ ಗುರೂಜಿ ಅವರಿಗೆ ತಾನು ಹುಡುಗಿಯಾದರೆ ಯಾವ ರೀತಿ ಕಾಣಿಸಬಹುದು ಎನ್ನುವ ಕುತೂಹಲವಿದೆ ಹೀಗಾಗಿ ಹುಡುಗಿಯರ ರೀತಿ ಮೇಕಪ್ ಮಾಡಿಸಿಕೊಂಡಿದ್ದಾರೆ.
ಮೇಕಪ್ ಮಾಡಿಸಿಕೊಳ್ಳುವಾಗ ಆರ್ಯವರ್ಧನ್ ಗುರೂಜಿ ನಿದ್ರೆಗೆ ಜಾರುತ್ತಾರೆ. ಇಡೀ ಮನೆ ಗುರೂಜಿ ಲುಕ್ ನೋಡಿ ಶಾಕ್ ಆಗುತ್ತಾರೆ.
ಏನ್ ಗುರೂಜೀ ನೀವು ಜನರು ಹೆದರಿಕೊಳ್ಳುತ್ತಾರೆ ಅಂದುಕೊಂಡರೆ ನೀವು ಈ ರೀತಿ ಮಾಡೋದಾ? ಕಾಮಿಡಿ ಮಾಡಿ ನೀವೇ ಕಾಮಿಡಿ ಆಗಬೇಡಿ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.