ಮದುವೆಯಾದ ಒಂದೇ ದಿನಕ್ಕೆ ಬಂತು ಆಂಕರ್ ಅನುಶ್ರೀ ವಿಡಿಯೋ!
ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ಅವರ ವಿವಾಹ ಕನಕಪುರದಲ್ಲಿ ಅದ್ದೂರಿಯಾಗಿ ನೆರವೇರಿದೆ. ಹಳದಿ ಶಾಸ್ತ್ರದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕುಟುಂಬಸ್ಥರು ಮತ್ತು ಆಪ್ತರೊಂದಿಗೆ ಸಂಭ್ರಮದಿಂದ ಕುಣಿದಾಡಿದ್ದಾರೆ.

ಕನ್ನಡದ ಪ್ರಖ್ಯಾತ ನಿರೂಪಕಿ ಅನುಶ್ರೀ ಅವರ ವಿವಾಹ ಭರ್ಜರಿಯಾಗಿ ನೆರವೇರಿದೆ. ಕನಕಪುರದ ಖಾಸಗಿ ರೆಸಾರ್ಟ್‌ನಲ್ಲಿ ನಡೆದ ಸಮಾರಂಭದಲ್ಲಿ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಇದರ ಬೆನ್ನಲ್ಲಿಯೇ ಅನುಶ್ರೀ ಮದುವೆಯ ಫೋಟೋ ಹಾಗೂ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲು ಮುಂದಾಗಿದ್ದಾರೆ. ಎರಡು ದಿನಗಳ ಕಾಲ ನಡೆದ ಸಮಾರಂಭದಲ್ಲಿ ಅನುಶ್ರೀ ಕುಟುಂಬದ ಆಪ್ತರೊಂದಿಗೆ ಭರ್ಜರಿಯಾಗಿ ಕುಣಿದಾಡಿದ್ದಾರೆ.
ಹಳದಿ ಶಾಸ್ತ್ರದ ಒಂದೂವರೆ ನಿಮಿಷದ ವಿಡಿಯೋವನ್ನು ಅವರು ಪೋಸ್ಟ್ ಮಾಡಿದ್ದು, ಹಳದಿ ಬಣ್ಣದ ಡ್ರೆಸ್‌ನಲ್ಲಿ ಸಖತ್ ಆಗಿ ಮಿಂಚಿದಿದ್ದಾರೆ. ಇನ್ನು ಅವರ ಪತಿ ರೋಷನ್ ರಾಮಮೂರ್ತಿ ಹಳದಿ ಬಣ್ಣದ ಕುರ್ತಾದಲ್ಲಿ ಮಿಂಚಿದ್ದಾರೆ.
ಕನಕಪುರದ ಬಳಿಯ ಸಂಭ್ರಮ ಬೈ ಸ್ವಾನ್‌ಲೈನ್ಸ್‌ನಲ್ಲಿ ಕಾರ್ಯಕ್ರಮ ನೆರವೇರಿದ್ದು, ಇಡೀ ಸಮಾರಂಭವನ್ನು ಹಳದಿ ಥೀಮ್‌ನಲ್ಲಿ ಸಂಯೋಜಿಸಲಾಗಿತ್ತು. ಹಳದಿ ಶಾಸ್ತ್ರಕ್ಕೆ ಬಳಸಿದ ಹೆಚ್ಚಿನ ಹೂವುಗಳು ಕೂಡ ಹಳದಿ ಬಣ್ಣದಲ್ಲೇ ಇದ್ದಿದ್ದು ವಿಶೇಷ.
ತಮ್ಮ ಮುದ್ದಿನ ನಾಯಿಮರಿಯೊಂದಿಗೆ ಕಾರ್ಯಕ್ರಮದಲ್ಲಿ ಬರುವ ಅನುಶ್ರೀ ಅವರ ಮುಖದಲ್ಲಿ ಮದುಮಗಳ ಲಕ್ಷಣ ಎದ್ದು ಕಂಡಿದೆ.
ಇದರ ಬೆನ್ನಲ್ಲಿಯೇ ಹುಡುಗನ ಮೇಕಪ್ ರೂಮ್‌ಗೆ ಹೊಕ್ಕುವ ಅನುಶ್ರೀ, 'ಹುಡುಗ ಬಂದು ಹುಡುಗೀನ ಕರ್ಕೊಂಡು ಹೋಗ್ಬೇಕು. ಆದ್ರೆ ಇಲ್ಲಿ ಹುಡುಗೀನೇ ಬಂದು ಹುಡುಗನ ಕರ್ಕೊಂಡು ಹೋಗ್ತಿದ್ದಾಳೆ. ಬಾ ಬೇಗ' ಎಂದು ಅನುಶ್ರೀ ಹೇಳಿದರೆ, ಅದಕ್ಕೆ ಪ್ರತಿಯಾಗಿ ರೋಶನ್, ಸ್ವಲ್ಪ ತಡಿ ಬರ್ತಿನಿ ಎಂದು ಹೇಳಿರುವುದು ದಾಖಲಾಗಿದೆ.
ಆ ಬಳಿಕ ಕೆಲವೊಂದು ಫೋಟೋಶೂಟ್‌ಗೆ ಪೋಸ್ ನೀಡಿರುವ ಅನುಶ್ರೀ, ಸಂಬಂಧಿಗಳ ಜೊತೆ ಮ್ಯೂಸಿಕ್‌ಗೆ ಹೆಜ್ಜೆ ಹಾಕಿದ್ದಾರೆ.
ಸಂಜೆಯಿಂದ ಆರಂಭವಾದ ಕಾರ್ಯಕ್ರಮ ರಾತ್ರಿಯವರೆಗೂ ನೆರವೇರಿದೆ. ಈ ವೇಳೆ ಸು ಫ್ರಂ ಸೋ ಸಿನಿಮಾದ ಬಂದರೋ.. ಬಂದರೋ ಭಾವ ಬಂದರೋ.. ಎನ್ನುವ ಹಾಡಿನ ಹುಕ್ ಸ್ಟೆಪ್‌ಅನ್ನೂ ಅನುಶ್ರೀ ಹಾಗೂ ರೋಶನ್ ಮಾಡಿದ್ದಾರೆ.
ಹಳದಿ ಕಾರ್ಯಕ್ರಮದ ವೇಳೆ ಮದುಮಕ್ಕಳ ಮೈಮೇಲೆ ಮೊಸರು ಸುರಿದ ಆತ್ಮೀಯರು, ಮುಖವೆಲ್ಲಾ ಅರಿಶಿನ ಮಾಡಿರುವುದು ಹಳದಿ ಶಾಸ್ತ್ರದ ವಿಡಿಯೋದಲ್ಲಿ ಕಾಣಿಸಿದೆ.
ಕೊನೆಯೆಲ್ಲಿ ಇಡೀ ಕಾರ್ಯಕ್ರಮದ ಫೋಟೋಗ್ರಫಿ ಮಾಡಿದ ವಿಎಸ್ ಫೋಟೋಗ್ರಫಿ, ಔಟ್‌ಫಿಟ್ ನೀಡಿದ ಅಂಜಲಿ ರಾಜ್, ಮೇಕಪ್ ಮಾಡಿದ ನಾಗೇಶ್ ಮೇಕ್‌ಓವರ್, ಹೇರ್ ಸ್ಟೈಲ್ ಮಾಡಿದ ಪರಮೇಶ್ ಹೇರ್‌ಸ್ಟೈಲಿಸ್ಟ್‌ಗೆ ಧನ್ಯವಾದ ಹೇಳಿದ್ದಾರೆ.