ಬಿಳಿ ಸೀರೆ, ಕೈಯಲ್ಲಿ ಹೂವು… ಅಭಿಮಾನಿಗಳ ಎದೆಗೆ ನಗುವಿನ ಬಾಣ ಬಿಟ್ಟ ಚೆಲುವೆ ಅನುಪಮಾ ಗೌಡ
ನಟಿ, ನಿರೂಪಕಿ ಅನುಪಮಾ ಗೌಡ, ಬಿಳಿ ಸೀರೆಯುಟ್ಟು, ಕೈಯಲ್ಲಿ ಹೂವುಗಳನ್ನು ಹಿಡಿದು ತುಂಬಾನೆ ಮುದ್ದಾಗಿ ಕಾಣಿಸುತ್ತಿದ್ದಾರೆ. ಇವರ ನಗುವಿಗೆ ಅಭಿಮಾನಿಗಳು ಮನ ಸೋತಿದ್ದಾರೆ.
ಕನ್ನಡ ಕಿರುತೆರೆಯ ಜನಪ್ರಿಯ ನಟಿ ಹಾಗೂ ನಿರೂಪಕಿ ಅನುಪಮಾ ಗೌಡ (Anupama Gowda), ಸದ್ಯ ಯಾವುದೇ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿಲ್ಲ. ಆದ್ರೆ ಈವಾಗಂತೂ ಶೂಟಿಂಗ್ ಬಿಟ್ಟು ತಮ್ಮ ಲೈಫ್ ಸ್ಟೈಲ್ ಹಾಗೂ ಫಿಟ್ನೆಸ್ ಬಗ್ಗೆ ಗಮನ ಕೊಡ್ತಾ ಇದ್ದಾರೆ.
ಹೌದು, ಅನುಪಮಾ ಗೌಡ, ಮೊದಲಿನಿಂದಲೂ ತಮ್ಮ ಫಿಟ್ನೆಸ್ ಬಗ್ಗೆ ಗಮನ ಕೊಡುತ್ತಿದ್ದಾರೆ. ಇತ್ತೀಚೆಗಂತೂ ಆ ಬಗ್ಗೆ ಮತ್ತಷ್ಟು ಕಾಳಜಿ ವಹಿಸುತ್ತಿದ್ದು, ಕಠಿಣವಾದ ಪ್ರಾಕ್ಟೀಜ್ ಗಳನ್ನು ಮಾಡುತ್ತಾ, ತಮ್ಮ ಮೈ ಕೈ ದಂಡಿಸುತ್ತಿದ್ದಾರೆ. ಜಿಮ್ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿರುತ್ತಾರೆ.
ಸದ್ಯಕ್ಕಂತೂ ನಟಿ 30 ದಿನಗಳ ವರ್ಕ್ ಔಟ್ ಚಾಲೆಂಜ್ ತೆಗೆದುಕೊಂಡಿದ್ದು, ಅದಕ್ಕೆ ಬೇಕಾದಂತೆ, ವಿವಿಧ ರೀತಿಯ ಕಸರತ್ತುಗಳನ್ನು ಮಾಡುತ್ತಿದ್ದಾರೆ. ಅನುಪಮಾ ಕಸರತ್ತಿನ ವಿಡಿಯೋಗಳನ್ನು ನೋಡಿ , ಕಠಿಣ ಪರಿಶ್ರಮ ನೋಡಿ ಅಭಿಮಾನಿಗಳು ಶಾಕ್ ಆಗಿದ್ದು, ಮೆಚ್ಚುಗೆ ಸೂಚಿಸಿದ್ದಾರೆ.
ಇದೆಲ್ಲದ ಮಧ್ಯೆ ನಟಿ ಒಂದು ಮುದ್ದಾದ ವಿಡಿಯೋ ಒಂದನ್ನು ಸೋಶಿಯಲ್ ಮೀಡಿಯಾದಲ್ಲಿ (Social Media) ಶೇರ್ ಮಾಡಿದ್ರು, ಬಿಳಿ ಸೀರೆಯುಟ್ಟು, ಹೂವಿನಂಗಡಿಯಿಂದ ಹೂವು ಖರೀದಿಸುತ್ತಾ, ರಸ್ತೆಯಲ್ಲಿ ಓಡಾಡುತ್ತಿರುವ ವಿಡಿಯೋ ಇದಾಗಿದ್ದು, ಹಿನ್ನೆಲೆಯಲ್ಲಿ ನಿನ್ನ ಸ್ನೇಹದಿಂದ ಎಲ್ಲಾ ಚೆಂದ ಚೆಂದ ಎನ್ನುವ ಹಾಡು ಕೂಡ ಕೇಳಿ ಬರುತ್ತಿದ್ದು ತುಂಬಾನೆ ಸುಂದರವಾಗಿತ್ತು ವಿಡೀಯೋ.
ಇದೀಗ ನಟಿ ಮತ್ತೆ ಒಂದಷ್ಟು ಫೋಟೊಗಳನ್ನು ಶೇರ್ ಮಾಡಿದ್ದಾರೆ. ಅದೇ ಕಪ್ಪು ಹಾರ್ಟ್ ಚಿಹ್ನೆಗಳಿರುವ ಬಿಳಿಯ ಸೀರೆ, ಅದರ ಜೊತೆಗೆ ತುಂಬಾನೆ ಸುಂದರವಾದ ಸ್ಲೀವ್ ಲೆಸ್ ಬ್ಲೌಸ್, ಅಷ್ಟೇ ಅಲ್ಲ ಕೈಯಲ್ಲಿ ಹಳದಿ ಮತ್ತು ಬಿಳಿ ಬಣ್ಣಸ ಸುಂದರ ಹೂವುಗಳು.
ಎಲ್ಲದಕ್ಕಿಂತ ಸುಂದರವಾಗಿ ಕಾಣಿಸ್ತಿರೋದು ಏನಂದ್ರೆ ಅನುಪಮಾ ಗೌಡ ನಗು. ಅನುಪಮಾ ಅವರದ್ದು 100 ವೋಲ್ಟೇಜ್ ನಗು ಅಂತಾನೆ ಹೇಳಬಹುದು. ಆ ನಗುವಿಗೆ ಅಭಿಮಾನಿಗಳು ಫಿದಾ ಆಗಿದ್ದು, ಅನು ನಿಮ್ಮ ನಗು ಚೆನ್ನಾಗಿದೆ, ಅದ್ಭುತವಾದ ನಗು ನಿಮ್ಮದು, ತುಂಬಾನೆ ಸುಂದರವಾಗಿ ಕಾಣಿಸ್ತಿದ್ದೀರಿ, ದೃಷ್ಟಿ ತೆಗೆಸಿಕೊಳ್ಳೋದನ್ನ ಮರಿಬೇಡಿ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ.
ಕರಿಯರ್ ಬಗ್ಗೆ ಹೇಳೋದಾದ್ರೆ ಅನುಪಮಾ ಗೌಡ ಕೊನೆಯದಾಗಿ ರಾಜಾ ರಾಣಿ ರೀಲೋಡೆಡ್ (Raja Rani relaoded)ನಿರೂಪಣೆ ಮಾಡಿದ್ದರು. ಕಾರ್ಯಕ್ರಮ ಮುಗಿದ ತಕ್ಷಣ ತಮ್ಮ ಗೃಹಪ್ರವೇಶವನ್ನು ಅದ್ಧೂರಿಯಾಗಿ ಮಾಡಿಸಿದ್ದರು ಅನುಪಮಾ. ಸದ್ಯ ಫಿಟ್ನೆಸ್ ಬಗ್ಗೆ ಗಮನ ಕೊಡುತ್ತಿದ್ದಾರೆ.