ಕೃಷಿ ತಾಪಂಡಾ ತಮ್ಮನ ಮದುವೆಯಲ್ಲಿ ಕುಣಿದು ಕುಪ್ಪಳಿಸಿದ ಅನುಪಮಾ ಗೌಡ; ನೋಡಿದ್ರಾ?
ಕೊಡವ ಸ್ಟೈಲ್‌ನಲ್ಲಿ ಮಿಂಚಿದ ಕಿರುತೆರೆ ಚೆಲುವೆಯರು. ಯಾವ ಮದುವೆ ನೆಕ್ಸಟ್ ಎಂದು ಕಾಲೆಳೆದ ನೆಟ್ಟಿಗರು....
ಕನ್ನಡ ಕಿರುತೆರೆ ಹಾಗೂ ಬೆಳ್ಳಿ ತೆರೆಯಲ್ಲಿ ಗುರುತಿಸಿಕೊಂಡಿರುವ ನಟಿ ಕೃಷಿ ತಾಪಂಡಾ ತಮ್ಮನ ಮದುವೆ ಕೊಡಗಿನಲ್ಲಿ ಅದ್ಧೂರಿಯಾಗಿ ನಡೆದಿದೆ.
ಕೃಷಿ ತಾಪಂಡಾ ತಮ್ಮನ ಮದುವೆಯಲ್ಲಿ ಅನುಪಮಾ ಗೌಡ, ಇಶಿತಾ ವರ್ಷ ಹಾಗೂ ಜನಪ್ರಿಯ ವಸ್ತ್ರ ವಿನ್ಯಾಸಕಿ ತೇಜು ಭಾಗಿಯಾಗಿದ್ದರು.
ಈ ನಾಲ್ಕು ಸುಂದರಿಯರು ಕೊಡಗು ಶೈಲಿಯಲ್ಲಿ ಸೀರೆ ಧರಿಸಿ ಮಿಂಚುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಕೊಡವ ಸಂಪ್ರದಾಯದಲ್ಲಿ ನಡೆದ ಈ ಮದುವೆಯಲ್ಲಿ ಬಿಗ್ ಹೈಲೈಟ್ ಅವರ ಡ್ಯಾನ್ಸ್. ಅಲ್ಲಿನ ಮ್ಯೂಸಿಕ್ ಬೀಟ್‌ಗೆ ಅನುಪಮಾ ಗೌಡ ಕುಣಿದು ಕುಪ್ಪಳಿಸಿದ್ದಾರೆ.
ತಮ್ಮನ ಮದುವೆ ಹೇಗಿತ್ತು ಎಂದು ಸಣ್ಣ ವಿಡಿಯೋ ಅಪ್ಲೋಡ್ ಮಾಡಿರುವ ಕೃಷಿ, ಭಾವುಕ ಪೋಸ್ಟ್ ಬರೆದು ನಾದಿನಿಯನ್ನು ಮನೆಗೆ ಬರ ಮಾಡಿಕೊಂಡಿದ್ದಾರೆ.
ಇಶಿತಾ ವರ್ಷ ಮದುವೆ ಆಗಿದ್ದಾರೆ. ಹೀಗಾಗಿ ಕೃಷಿ ತಾಪಂಡಾ ಮತ್ತು ಅನುಪಮಾ ಗೌಡ ನಿಮ್ಮಲ್ಲಿ ನೆಕ್ಸಟ್ ಮದುವೆ ಆಗುವುದು ಯಾರು ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.