MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ಅಪ್ಪನಿಗೆ ಒಳ್ಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವುದಕ್ಕಾಗಿಯೇ ಸೀರಿಯಲ್‌ಗಳಲ್ಲಿ ನಟನೆ ಶುರು ಮಾಡಿದೆ

ಅಪ್ಪನಿಗೆ ಒಳ್ಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವುದಕ್ಕಾಗಿಯೇ ಸೀರಿಯಲ್‌ಗಳಲ್ಲಿ ನಟನೆ ಶುರು ಮಾಡಿದೆ

ಹಿಂದಿ ಕಿರುತೆರೆ ಲೋಕದಲ್ಲಿ ಇಂದು ಅಚ್ಚಳಿಯದ ಹೆಸರು ನಟಿ ರೂಪಾಲಿ ಗಂಗೂಲಿ ಅವರದ್ದು, ಆದರೆ ಸಿರೀಯಲ್ ಲೋಕದಲ್ಲಿ ತನ್ನ ಆರಂಭದ ಪಯಣ ಹೇಗಿತ್ತು ಎಂಬುದರ ಬಗ್ಗೆ ನಟಿ ಈಗ ಮಾತನಾಡಿದ್ದಾರೆ.

2 Min read
Author : Anusha Kb
| Updated : Apr 02 2024, 04:38 PM IST
Share this Photo Gallery
  • FB
  • TW
  • Linkdin
  • Whatsapp
110

ರೂಪಾಲಿ ಬಗ್ಗೆ ತಿಳಿಯದೇ ಇರುವವರ ಅರಿವಿಗಾಗಿ ಹೇಳುವುದಾದರೆ ರೂಪಾಲಿ ಅವರು 1998ರಲ್ಲಿ ಸುಕನ್ಯಾ ಎಂಬ ಟಿವಿ ಸಿರೀಯಲ್ ಮೂಲಕ ತಮ್ಮ ಚೊಚ್ಚಲ ಟಿವಿ ವೃತ್ತಿ ಜೀವನ ಆರಂಭಿಸಿದ್ದರು.

210

ಇದಾದ ನಂತರ 2004ರಲ್ಲಿ ಸಾರಭಾಯ್ ವರ್ಸಸ್ ಸಾರಭಾಯ್ ಸೀರಿಯಲ್‌ನಲ್ಲಿ ಅವರು ಮಾಡಿದ ಮೋನಿಷಾ ಸಾರಭಾಯ್ ಪಾತ್ರವೂ ಮನೆ ಮಾತಾಗಿತ್ತು. 

310

 ಆದರೆ ಒಂದು  ಮಗುವಿನ ನಂತರ 7 ವರ್ಷಗಳ ಕಾಲ ಬ್ರೇಕ್ ತೆಗೆದುಕೊಂಡು ಮತ್ತೆ ಸೀರಿಯಲ್ ಲೋಕಕ್ಕೆ ಕಾಲಿರಿಸಿದ ರೂಪಾಲಿ ಇಂದು ಕಿರುತೆರೆ ಲೋಕದಲ್ಲಿ ಅತ್ಯಧಿಕ ವೇತನ ಪಡೆಯುವ ನಟಿಯರಲ್ಲಿ ಒಬ್ಬರೆನಿಸಿದ್ದಾರೆ. ಅನುಪಮ ಸೀರಿಯಲ್ ಮೂಲಕ ಮರಳಿ ಬಂದ ಅವರು ಈಗ ತಮ್ಮ ಆರಂಭಿಕ ದಿನಗಳ ಬಗ್ಗೆ ಮಾತನಾಡಿದ್ದಾರೆ. 

410

ಸಿಎನ್‌ಬಿಸಿಗೆ ನೀಡಿದ ಸಂದರ್ಶನದಲ್ಲಿ ರೂಪಾಲಿ ಮನಬಿಚ್ಚಿ ಮಾತನಾಡಿದ್ದು, ತಾವು ಸೀರಿಯಲ್‌ನಲ್ಲಿ ನಟಿಸಲು ಶುರು ಮಾಡಿದ ಆರಂಭಿಕ ದಿನಗಳಲ್ಲಿ ತನ್ನನ್ನು ಬೆಂಗಾಲಿ ಸಮುದಾಯದಲ್ಲಿ ಬಹಿಷ್ಕರಿಸಲ್ಪಟ್ಟವರಂತೆ ನಡೆಸಿಕೊಳ್ಳಲಾಗುತ್ತಿತ್ತು. 

510

ಕೆಲವರು ನಾನು ಸೀರಿಯಲ್‌ನಲ್ಲಿ ನಟಿಸುತ್ತಿದ್ದೇನೆ ಎಂಬ ಕಾರಣಕ್ಕೆ ತುಂಬಾ ತುಚ್ಛವಾಗಿ ಕಾಣುತ್ತಿದ್ದರು. ಆದರೆ ಕುಟುಂಬವನ್ನು ಸಲಹುವ ಜವಾಬ್ದಾರಿ ನನ್ನ ಮೇಲಿದ್ದಿದ್ದರಿಂದ ನಾನು ಇದ್ಯಾವುದರ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ ಎಂದು ರೂಪಾಲಿ ಹೇಳಿಕೊಂಡಿದ್ದಾರೆ.

610

ವ್ಯವಸ್ಥೆಗಳೇ ಸರಿ ಇಲ್ಲದ ಸರ್ಕಾರಿ ಆಸ್ಪತ್ರೆಯಲ್ಲಿ ನನ್ನ ತಂದೆಗೆ ಚಿಕಿತ್ಸೆ ನೀಡುವುದು ನನಗೆ ಇಷ್ಟವಿರಲಿಲ್ಲ, ನಾನು ನನ್ನ ತಂದೆಗೆ ಲೀಲಾವತಿಯಂತಹ ಉತ್ತಮವಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ಬಯಸಿದ್ದೆ. ಇದೇ ಕಾರಣಕ್ಕೆ  ನಾನು ಆರಂಭದಲ್ಲಿ ಸೀರಿಯಲ್‌ಗಳಲ್ಲಿ ನಟನೆಗೆ ಒಪ್ಪಿಕೊಂಡಿದೆ. 

710

ತಂದೆಯನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂಬುದರ ಹೊರತಾಗಿ ಬೇರೆ ಕನಸು ಆಸೆ ನನ್ನ ಮುಂದಿರಲಿಲ್ಲ, ಜೊತೆಗೆ ತಾನು ಆ ಸಂದರ್ಭದಲ್ಲಿ ಆಯ್ಕೆ ಮಾಡಿದ ಸಣ್ಣ ಸಣ್ಣ ಪಾತ್ರಗಳ ಬಗ್ಗೆ ನನಗೆ ಬೇಸರವಿಲ್ಲ ಎಂದು ಹೇಳಿದ್ದಾರೆ. 

810

ಬಂದ ಸಣ್ಣ ಮೊತ್ತದಲ್ಲೇ  ನಮಗೆ ಎಷ್ಟು ಸಾಧ್ಯವೋ ಅಷ್ಟು ಮಾಡುತ್ತಿದ್ದೆವು. ನನ್ನ ಪಾಲಿಗೆ ನನ್ನ ತಂದೆ ದೇವರು, ಅವರು ನನ್ನ ಸ್ಪೂರ್ತಿ, ಅವರಿಗಾಗಿ ನಾನು ಏನು ಮಾಡುವುದಕ್ಕೂ ಸಿದ್ಧವಿದ್ದೆ. ತನ್ನ ತಂದೆ ಅನಿಲ್ ಗಂಗೂಲಿ ಅವರನ್ನು ಒಳ್ಳೆಯ ಆಸ್ಪತ್ರೆಗೆ ಸೇರಿಸುವುದಕ್ಕಾಗಿ  ನಾನು ಸ್ಯಾಲರಿ ಸೇರಿದಂತೆ ಯಾವುದರ ಬಗ್ಗೆಯೂ ಮಾತುಕತೆ ನಡೆಸದೇ ನೇರವಾಗಿ ಟಿವಿ ಸೀರಿಯಲ್ ಪಾತ್ರಗಳಿಗೆ ಒಪ್ಪಿಕೊಂಡಿದ್ದೇನೆ  ಎಂದು ರೂಪಾಲಿ ಹೇಳಿದ್ದಾರೆ. 

910

ಟಿವಿ ಸೀರಿಯಲ್ ಲೋಕ ತನಗೆ ನೀಡಿದ ಈ ಅದ್ಭುತವಾದ ಪ್ರಯಾಣದ ಬಗ್ಗೆ ಕೃತಜ್ಞತೆ ಸಲ್ಲಿಸಿದ ರೂಪಾಲಿ,  ತನ್ನ ತಂದೆ ಪ್ರಸಿದ್ದ ಸಿನಿಮಾ ನಿರ್ಮಾಪಕರಾಗಿದ್ದರೂ, ತನ್ನ ಆರಂಭಿಕ ದಿನಗಳಲ್ಲಿ ಅವರು ತಮಗಿದ್ದ ಪ್ರಭಾವ ಬಳಸಿಕೊಂಡು ಯಾವುದೇ ಸಹಾಯ ಮಾಡಲು ಬಯಸಲಿಲ್ಲ ಎಂದು ರೂಪಾಲಿ ಹೇಳಿದ್ದಾರೆ. 

1010

ಇನ್ನು ರೂಪಾಲಿ ವೈಯಕ್ತಿಕ ಬದುಕಿನ ಬಗ್ಗೆ ಹೇಳುವುದಾದರೆ ಅಶ್ವಿನ್ ಕೆ ವರ್ಮಾ ಅವರನ್ನು ವಿವಾಹವಾಗಿರುವ ರೂಪಾಲಿ ಗಂಗೂಲಿ ಅವರಿಗೆ ರುದ್ರಾಂಶ್ ಎಂಬ ಪುತ್ರನಿದ್ದಾನೆ. ವಿವಾಹ ಹಾಗೂ ಮಗನ ಜನನದ ನಂತರ ಆರೂವರೆ ವರ್ಷಗಳ ಕಾಲ ನಟನೆಯಿಂದ ಬ್ರೇಕ್ ತೆಗೆದುಕೊಂಡಿದ್ದ ಅನುಪಮಾ ಆ ಆರು ವರ್ಷಗಳನ್ನು ಸಂಪೂರ್ಣ ತಮ್ಮ ಕುಟುಂಬ ಪತಿ ಮಗನಿಗಾಗಿ ಮೀಸಲಿಟ್ಟಿದ್ದರು. ಚಿತ್ರ ನಿರ್ದೇಶಕ ಅನಿಲ್‌ ಗಂಗೂಲಿ ಪುತ್ರಿಯಾಗಿರುವ ರೂಪಾಲಿ ಇವರು ಬಾಲನಟಿಯಾಗಿ ವೃತ್ತಿಗೆ ಪಾದಾರ್ಪಣೆ ಮಾಡಿದ್ದರು. ಈ ಹಿಂದೆ ನಟ ಸಲ್ಮಾನ್‌ ಖಾನ್‌ ಹಿಂದಿ ಬಿಗ್‌ ಬಾಸ್‌ ಸೀಸನ್‌ 16ಕ್ಕೆ 1,000 ಕೋಟಿ ರು. ಸಂಭಾವನೆ ಪಡೆದಿದ್ದರು ಎನ್ನಲಾಗಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

AK
Anusha Kb
Anusha KB ಸುದ್ದಿಲೋಕದಲ್ಲಿ 13 ವರ್ಷಗಳ ಅನುಭವ, ರಾಜಕೀಯ, ಸಿನಿಮಾ, ದೇಶ, ವಿದೇಶ ಸುದ್ದಿಗಳಲ್ಲಿ ಆಸಕ್ತಿ. ಸುವರ್ಣ ಡಿಜಿಟಲ್‌ನಲ್ಲೀಗ ಸೀನಿಯರ್ ಸಬ್ ಎಡಿಟರ್.

Latest Videos
Recommended Stories
Recommended image1
Bhagyalakshmi ರೋಚಕ ಸಂಚಿಕೆ: ಹುಣ್ಣಿಮೆಗೆ ತಾಳಿ ಭಾಗ್ಯ- ಆ ದಿನ ಕಟ್ಟುವವರು ಯಾರು?
Recommended image2
ಸೀರಿಯಲ್‌ನಲ್ಲಿ ದೂರ ಆದ್ರೂ, ರಿಯಲ್‌ ಆಗಿ ಎಂಗೇಜ್‌ ಆದ Amruthadhaare ರಾಣವ್‌ ಗೌಡ, ರಾಧಾ ಭಗವತಿ!
Recommended image3
ಶೂಟಿಂಗ್‌ ವೇಳೆ ವಿದ್ಯಾಗೆ ನಿಜಕ್ಕೂ ತಾಳಿ ಕಟ್ಟಲು ಹೋಗೋದಾ ಭದ್ರ? Muddu Sose ಶಾಕ್‌! ವಿಡಿಯೋ ವೈರಲ್‌
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved