ಅನುಬಂಧ ಅವಾರ್ಡ್ಸ್ : ಜನ ಮೆಚ್ಚಿದ ನಾಯಕ, ನಾಯಕಿ ಆಗೋರು ಯಾರು?
ಕಲರ್ಸ್ ಕನ್ನಡ ವಾಹಿನಿಯ ಅನುಬಂಧ ಅವಾರ್ಡ್ಸ್ ಕಾರ್ಯಕ್ರಮ ಅದ್ಧೂರಿಯಾಗಿ ಆರಂಭವಾಗಿದ್ದು, ಮೂರು ದಿನದ ಈ ಹಬ್ಬದ ಮೊದಲ ದಿನ ಯಾರ್ಯಾರು ಪ್ರಶಸ್ತಿ ಗೆದ್ದಿದ್ದಾರೆ ನೋಡೋಣ.
ಮನೆ ಮೆಚ್ಚಿದ ಮಗಳು :
ಮನೆಮೆಚ್ಚಿದ ಮಗಳು ಪ್ರಶಸ್ತಿಯನ್ನು ಗೃಹಪ್ರವೇಶ ಸೀರಿಯಲ್ ನಾಯಕಿ ಪಲ್ಲವಿ ಪಡೆದುಕೊಂಡಿದ್ದಾರೆ. ಅಪ್ಪನನ್ನು ಹುಡುಕಿಕೊಂಡು ಗ್ರಾಮದಿಂದ ಬೆಂಗಳೂರಿಗೆ ಬಂದು ಅಪ್ಪನ ಮನೆಯಲ್ಲಿಯೇ ಮನೆ ಕೆಲಸಕ್ಕೆ ಸೇರುವ ಪಲ್ಲವಿ ಪಾತ್ರದಲ್ಲಿ ಸ್ಪಂದನಾ ಸೋಮಣ್ಣ ನಟಿಸಿದ್ದಾರೆ.
ಮನೆ ಮೆಚ್ಚಿದ ವಿಧೂಷಕ
ಮನೆಯಲ್ಲಿ ಸೀರಿಯಸ್ ವಾತಾವರಣ ಇದ್ದರೂ ತನ್ನ ಪೆದ್ದು ಪೆದ್ದು ಮಾತಿನಿಂದ ಎಲ್ಲರನ್ನೂ ನಗಿಸುವ ಬ್ಲೂಟೂಟ್ ಪ್ರಿಯೆ ಲಕ್ಷ್ಮೀ ಬಾರಮ್ಮ ಸೀರಿಯಲ್ ನ ಗಂಗಾ ಪಾತ್ರಧಾರಿ ಹರ್ಷಿತಾ ಮನೆ ಮೆಚ್ಚಿದ ವಿಧೂಷಕ ಪ್ರಶಸ್ತಿ ಗೆದ್ದಿದ್ದಾರೆ.
ಮನೆ ಮೆಚ್ಚಿದ ಅಮ್ಮ
ಮನೆ ಮೆಚ್ಚಿದ ಅಮ್ಮ ಪ್ರಶಸ್ತಿಯನ್ನು ಅಂತರಪಟ ಸೀರಿಯಲ್ ಅಮ್ಮ ರೇವತಿ ಪಡೆದುಕೊಂಡಿದ್ದಾರೆ. ಗಂಡ ಸತ್ತ ಮೇಲೆ ಮಗಳಿಗೆ ತಂದೆಯ ಪ್ರೀತಿ ಸಿಗಲಿ ಎಂದು ಎರಡನೆ ಮದುವೆಯಾಗಿ, ಗಂಡ ಮತ್ತು ಮಗಳ ನಡುವಿನ ಸಂಬಂಧದ ನಡುವೆ ಸಿಕ್ಕಿ ಬಿದ್ದಿರುವ ಪಾತ್ರ ಇದಾಗಿದೆ. ರೇವತಿ ಪಾತ್ರದಲ್ಲಿ ಜ್ಯೋತಿ ಕಿರಣ್ ನಟಿಸಿದ್ದಾರೆ.
ಜನ ಮೆಚ್ಚಿದ ಡಿಜಿಟಲ್ ಜೋಡಿ
ಜನ ಮೆಚ್ಚಿದ ಡಿಜಿಟಲ್ ಜೋಡಿಯಾಗಿ ರಾಮ್ ಜೀ ಯವರ ಗೀತಾ ಸೀರಿಯಲ್ ಜೋಡಿಗಳಾದ ಗೀತಾ ಮತ್ತು ವಿಜಯ್ ಪಾತ್ರದಲ್ಲಿ ಮಿಂಚುತ್ತಿರುವ ಧನುಷ್ ಗೌಡ ಮತ್ತು ಭವ್ಯಾ ಗೌಡ ಜೋಡಿ ಗೆದ್ದಿದ್ದಾರೆ.
ಜನ ಮೆಚ್ಚಿದ ಮಂಥರೆ
ತನ್ನ ದುಷ್ಟ ತನದಿಂದಲೇ ಮಗ ಮತ್ತು ಸೊಸೆಯನ್ನು ಕೊಲ್ಲಿಸುವ ಮಟ್ಟಕ್ಕೂ ಪ್ಲ್ಯಾನ್ ಮಾಡುತ್ತಾ, ಸತತ ಸೋಲು ಅನುಭವಿಸಿದರೂ ತನ್ನ ಕೆಟ್ಟತನ ಬಿಡದೇ ಮುಂದುವರೆಯುತ್ತಿರುವ ಗೀತಾ ಸೀರಿಯಲ್ ಭಾನುಮತಿಗೆ ಜನ ಮೆಚ್ಚಿದ ಮಂಥರೆ ಪ್ರಶಸ್ತಿ ಲಭಿಸಿದೆ. ಭಾನುಮತಿ ಪಾತ್ರದಲ್ಲಿ ಶರ್ಮಿತಾ ಗೌಡ ನಟಿಸುತ್ತಿದ್ದಾರೆ.
ಜನ ಮೆಚ್ಚಿದ ಯೂತ್ ಐಕಾನ್
ತಾನು ಪ್ರೀತಿಸಿದ್ದು ಒಬ್ಬಳನ್ನು ಆದರೂ ಸಂದರ್ಭಕ್ಕೆ ಕಟ್ಟುಬಿದ್ದು, ಇನ್ನೊಬ್ಬಳನ್ನು ಮದುವೆಯಾದರೂ ಆಕೆಗೆ ಯಾವುದೇ ನೋವನ್ನುಂಟು ಮಾಡದೇ, ಉತ್ತಮ ರೀತಿಯಲ್ಲಿ ಜೀವನ ರೂಪಿಸಿಕೊಂಡು ಸಾಗುತ್ತಿರುವ ಲಕ್ಷ್ಮೀ ಬಾರಮ್ಮ ಸೀರಿಯಲ್ ವೈಷ್ಣವ್ ಕಾವೇರಿ ಕಷ್ಯಪ್ ಅಂದ್ರೆ ಶಮಂತ್ ಗೌಡ ಜನ ಮೆಚ್ಚಿದ ಯೂತ್ ಐಕಾನ್ ಪ್ರಶಸ್ತಿ ಪಡೆದಿದ್ದಾರೆ.
ಉತ್ತಮ ಕತೆ, ಚಿತ್ರಕಥೆ
ಕಲರ್ಸ್ ಕನ್ನಡದಲ್ಲಿ ಎಲ್ಲವೂ ಒಂದಕ್ಕಿಂತ ಒಂದು ವಿಭಿನ್ನವಾದ ಕಥೆಯನ್ನು ಹೊಂದಿರುವ ಸೀರಿಯಲ್ ಗಳು ಪ್ರಸಾರವಾಗುತ್ತಿದ್ದು, ಉತ್ತಮ ಕತೆ, ಚಿತ್ರಕಥೆಗಾಗಿ ರಾಮಾಚಾರಿ ಸೀರಿಯಲ್ ನಿರ್ದೇಶಕ ರಾಮ್ ಜೀ ಅವರಿಗೆ ಈ ಪ್ರಶಸ್ತಿ ಬಂದಿದೆ.
ಮನೆ ಮೆಚ್ಚಿದ ಅಪ್ಪ
ಅನುಬಂಧ ಅವಾರ್ಡ್ಸ್ ನಲ್ಲಿ ಮನೆ ಮೆಚ್ಚಿದ ಅಪ್ಪ ಪ್ರಶಸ್ತಿಯನ್ನು ರಾಮಾಚಾರಿ ಸೀರಿಯಲ್ ನ ಖಡಕ್ ತಂದೆ ನಾರಾಯಣಾಚಾರ್ಯರ ಪಾತ್ರದಲ್ಲಿ ನಟಿಸುತ್ತಿರುವ ಶಂಕರ್ ಅಶ್ವಥ್ ಪಡೆದುಕೊಂಡಿದ್ದಾರೆ. ಜನರು ಮಾತ್ರ ಈ ಪ್ರಶಸ್ತಿಗೆ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಮನೆ ಮೆಚ್ಚಿದ ಅತ್ತೆ
ಭಾಗ್ಯಲಕ್ಷ್ಮೀ ಸೀರಿಯಲ್ ನಲ್ಲಿ ಭಾಗ್ಯ ಅತ್ತೆ ಕುಸುಮಾ ಪಾತ್ರದಲ್ಲಿ ಕಾಣಿಸಿಕೊಂಡಿರುವ ಪದ್ಮಜಾ ರಾವ್ ಮನೆ ಮೆಚ್ಚಿದ ಅತ್ತೆ ಪ್ರಶಸ್ತಿ ಪಡೆದಿದ್ದಾರೆ. ಸೊಸೆಯನ್ನು ಮಗಳ ರೀತಿಯಲ್ಲಿ ಕಾಣುತ್ತಾ, ಆಕೆಯ ಕನಸನ್ನು ನನಸು ಮಾಡಲು ಬೆನ್ನೆಲುಬಾಗಿ ನಿಲ್ಲುವ ಅತ್ತೆಯ ಪಾತ್ರ ಇದಾಗಿದೆ.
ಮನೆ ಮೆಚ್ಚಿದ ಮಗ
ಇಬ್ಬರು ತಾಯಂದಿರಿಗೆ ಉತ್ತಮ ಮಗನಾಗಿ, ತನ್ನ ಮಲತಾಯಿ ಅತ್ಯಂತ ಕೆಟ್ಟವಳಾಗಿದ್ದರೂ, ಆಕೆಯ ಒಂದು ಸಣ್ಣ ತಪ್ಪು ಸಹ ಅರ್ಥ ಮಾಡಿಕೊಳ್ಳದೇ, ನನ್ನ ತಾಯಿ ತಪ್ಪು ಮಾಡಲು ಸಾಧ್ಯವೇ ಇಲ್ಲ ಎಂದು ತಾಯಿಯನ್ನೇ ದೇವರೆಂದು ತಿಳಿದ ಮಗ ಗೀತಾ ಸೀರಿಯಲ್ ನ ವಿಜಯ್ ಅಂದ್ರೆ ಧನುಷ್ ಗೌಡ ಮನೆ ಮೆಚ್ಚಿದ ಮಗ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಮನೆ ಮೆಚ್ಚಿದ ಮಾವ
ಮನೆ ಮೆಚ್ಚಿದ ಮಾವ ಪ್ರಶಸ್ತಿಯನ್ನು ಕೆಂಡ ಸಂಪಿಗೆ ಸೀರಿಯಲ್ ನಲ್ಲಿ ಮಾವ ಕೇಶವ್ ಪ್ರಸಾದ್ ಪಾತ್ರದಲ್ಲಿ ನಟಿಸುತ್ತಿರುವ ದೊಡ್ಡಣ್ಣ ಅವರಿಗೆ ಲಭಿಸಿದೆ. ಮನೆಯವರಿಗೆ ಗೊತ್ತಾಗದಂತೆ ಸೊಸೆಯ ಬೆನ್ನೆಲುಬಾಗಿ ನಿಂತಿರುವ ಮಾವನ ಪಾತ್ರ ಇದಾಗಿದೆ.
ಜನ ಮೆಚ್ಚಿದ ಸ್ಟೈಲ್ ಐಕಾನ್
ಪುಣ್ಯವತಿ ಸೀರಿಯಲ್ ಮೂಲಕ ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿರುವ ನಂದನ್ ಆಲಿಯಾಸ್ ಭುವನ್ ಸತ್ಯ ಜನ ಮೆಚ್ಚಿದ ಸ್ಟೈಲ್ ಐಕಾನ್ ಪ್ರಶಸ್ತಿ ಪಡೆದಿದ್ದಾರೆ. ಇವರ ಪಾತ್ರವನ್ನು ಜನರು ಸಹ ಇಷ್ಟಪಟ್ಟಿದ್ದಾರೆ.
ಮನೆ ಮೆಚ್ಚಿದ ಅಳಿಯ
ಈ ಬಾರಿ ಮನೆ ಮೆಚ್ಚಿದ ಅಳಿಯ ಪ್ರಶಸ್ತಿಯನ್ನು ಇಬ್ಬರು ಪಡೆದುಕೊಂಡಿದ್ದಾರೆ. ಲಕ್ಷಣ ಸೀರಿಯಲ್ ನಾಯಕ ಭೂಪತಿ ಅಂದ್ರೆ, ಜಗನ್ ಚಂದ್ರಶೇಖರ್ ಮತ್ತು ಒಲವಿನ ನಿಲ್ದಾಣ ಸೀರಿಯಲ್ ನಟ ಸಿದ್ಧಾಂತ್ ಅಂದ್ರೆ ಅಕ್ಷಯ್ ನಾಯಕ್ ಪಡೆದುಕೊಂಡಿದ್ದಾರೆ.
ಜನ ಮೆಚ್ಚಿದ ಹೊಸ ಪರಿಚಯ
ಜನ ಮೆಚ್ಚಿದ ಹೊಸ ಪರಿಚಯ ಸಹ ಈ ಬಾರಿ ಇಬ್ಬರ ಪಾಲಾಗಿದೆ. ಅಂತರಪಟ ಸೀರಿಯಲ್ ನಟಿ ಆರಾಧಾನ ಪಾತ್ರದಲ್ಲಿ ಮಿಂಚುತ್ತಿರುವ ತನ್ವಿಯಾ ಬಾಲ್ ರಾಜ್ ಮತ್ತು ಲಕ್ಷ್ಮೀ ಬಾರಮ್ಮ ಸೀರಿಯಲ್ ನಲ್ಲಿ ಲಕ್ಷ್ಮೀ ಪಾತ್ರದಲ್ಲಿ ನಟಿಸುತ್ತಿರುವ ಭೂಮಿಕಾ ರಮೇಶ್ ಈ ಪ್ರಶಸ್ತಿ ಗೆದ್ದಿದ್ದಾರೆ.
ಮನೆಮೆಚ್ಚಿದ ಹಿರಿಯ
ಇನ್ನು ಮನೆ ಮೆಚ್ಚಿದ ಹಿರಿಯ ಪ್ರಶಸ್ತಿಯನ್ನು ತ್ರಿಪುರ ಸುಂದರಿ ಸೀರಿಯಲ್ ನಲ್ಲಿ ಮಾಯಿ ಪಾತ್ರದಲ್ಲಿ ನಟಿಸುತ್ತಿರುವ ನಟಿ ಪಡೆದಿದ್ದಾರೆ. ಮನೆಮಂದಿ ಮತ್ತು ಪ್ರದ್ಯುಮ್ನನ ಒಳಿತಿಗಾಗಿ ಏನು ಮಾಡಲು ಸಹ ಸಿದ್ಧವಾಗಿರುವ ಮನೆ ಹಿರಿಯ ಪಾತ್ರ ಅದಾಗಿದೆ.