ಭಾಗ್ಯ ಮನೆಗೆ ಎಂಟ್ರಿ ಕೊಡ್ತಿದ್ದಾರೆ ಸರ್ಪ್ರೈಸ್ ಗೆಸ್ಟ್… ಯಾರಿರಬಹುದು?
ಭಾಗ್ಯ ಲಕ್ಷ್ಮೀ ಸೀರಿಯಲ್ ನಲ್ಲಿ ಹೊಸ ಹೊಸ ತಿರುವುಗಳು ಉಂಟಾಗಿದ್ದು, ಇದೀಗ ಮತ್ತೊಂದು ತಿರುವು ಎಂಬಂತೆ ಭಾಗ್ಯ ಮನೆಗೆ ಸರ್ಪ್ರೈಸ್ ಗೆಸ್ಟ್ ಎಂಟ್ರಿ ಕೊಡ್ತಿದ್ದಾರೆ.

ಭಾಗ್ಯಲಕ್ಷ್ಮೀ ಸೀರಿಯಲ್ (Bhagyalakshmi) ಇದೀಗ ಅನೇಕ ತಿರುವು ಪಡೆದುಕೊಂಡು ಅದ್ಭುತವಾಗಿ ಮೂಡಿಬರುತ್ತಿದ್ದು, ಮುಂದಿನ ಎಪಿಸೋಡ್‌ನಲ್ಲಿ ಏನಾಗಲಿದೆ ಎಂದು ಪ್ರೇಕ್ಷಕರು ಕಾಯುವಂತೆ ಮಾಡಿದೆ. ಇದೆಲ್ಲದರ ನಡುವೆ ಇಂದು ಭಾಗ್ಯ ಮನೆಗೆ ಸರ್ಪ್ರೈಸ್ ಗೆಸ್ಟ್ ಎಂಟ್ರಿ ಕೊಡಲಿದ್ದಾರೆ.
ಕಲರ್ಸ್ ಕನ್ನಡದ ಸೋಶಿಯಲ್ ಮೀಡಿಯಾದಲ್ಲಿ ಈಗಾಗಲೇ ಭಾಗ್ಯಲಕ್ಷ್ಮಿ ಪ್ರೋಮೋ ಬಿಡುಗಡೆಯಾಗಿದ್ದು, ಭಾಗ್ಯಾ ಮನೆಗೆೆ ಜಬರ್‍ದಸ್ತ್ ಎಂಟ್ರಿ; ನಿಮಗೆಲ್ಲಾ ಗೊತ್ತಿರೋ ವಿಷಯನೇ! ಎಂದು ಬರೆದುಕೊಂಡಿದ್ದಾರೆ. ಆದ್ರೆ ಭಾಗ್ಯ ಮನೆಗೆ ಬರ್ತಾ ಇರೋ ಗೆಸ್ಟ್ (special guest) ಯಾರು?
ಈಗಾಗಲೇ ಸರ್ಪ್ರೈಸ್ ಗೆಸ್ಟ್ ಕಣ್ಣು, ನಗು ನೋಡಿ, ಇದು ನಮ್ಮ ಕೋಳಿಮರಿ ಮೀರಾನೆ ಎಂದು ಪ್ರೇಕ್ಷಕರು ಹೇಳಿದ್ದಾಗಿದೆ. ಜೊತೆಗೆ ತಮ್ಮ ನೆಚ್ಚಿನ ನಟಿ ಅಂಕಿತಾ ಅಮರ್ (Ankira Amar) ಅವರನ್ನು ಮತ್ತೆ ಕಿರುತೆರೆ ಮೇಲೆ ನೋಡಿ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ.
ಒಂದೂವರೆ ವರ್ಷ ಆದ ಮೇಲೆ ನಮ್ ಯುವರಾಣಿ (Nammane Yuvarani) ಮೀರಾ ನ ನೋಡೋ ಭಾಗ್ಯ ಮಾಡಿಕೊಟ್ರಿ.. ಹಾಗೆ ಯುವರಾಜನ್ನು ನೋಡೋ ಭಾಗ್ಯ ಮಾಡಿಕೊಟ್ಟಿದ್ರೆ ಇನ್ನೂ ಚೆನ್ನಾಗಿರ್ತ ಇತ್ತು ಎಂದು ಒಬ್ರು ಕಮೆಂಟ್ ಮಾಡಿದ್ದಾರೆ.
ಆ ನೋಟ, ಆ ನಗು, ಆ ಸ್ಟೈಲ್ ನೋಡಿದ್ರೇನೇ ಗೊತ್ತಾಗುತ್ತೆ ಅದು ನಮ್ ಯುವರಾಣಿ ಮೀರಾ ನೆ ಅಂತ. ನಮ್ ಮುದ್ದು ಕೋಳಿಮರಿ ನಮ್ಮನೆ ಯುವರಾಣಿ ಮೀರಾ ಎಂದು ಇನ್ನು ಕೆಲವರು ಹೇಳಿದ್ರೆ, ಆ ಮತ್ತೆ ಗೊತ್ತಿಲ್ದೆ ಇರುತ್ತ ಒಂದೂವರೆ ವರ್ಷಗಳಿಂದ ಕಾದ ಕ್ಷಣ ಇದು ಎಂದು ಇನ್ನೂ ಕೆಲವರು ಹೇಳಿದ್ದಾರೆ.
ನಮ್ಮ ಎಲ್ಲರ ಮನ ಗೆದ್ದಿರೋ ಕೋಳಿಮರಿ ಮೀರಾ.. ಮುದ್ದು ಮುಖದ ಚೆಲುವೆ.ತುಂಬಾ ದಿನಗಳ ನಂತರ ಮತ್ತೆ ಕಲರ್ಸ್ ಕನ್ನಡದಲ್ಲಿ . ಮೀರಾನ ಮತ್ತೆ ಕಿರುತೆರೆಯಲ್ಲಿ ನೋಡೋಕೇ ಸೂಪರ್ ಎಕ್ಸೈಟೆಡ್ ಆಗಿದ್ದೇವೆ. ಇವತ್ತಿನ ಎಪಿಸೋಡ್ ಮಿಸ್ ಮಾಡೋದೆ ಇಲ್ಲ ಎಂದು ಹೇಳಿದ್ದಾರೆ ಜನ.
ಮೀರಾ ಜೊತೆ ಅನಿ ಬಂದಿದ್ರೆ ಇನ್ನೂ ಜಬರ್ದಸ್ತ್ ಇರ್ತ ಇತ್ತು..! Please ಮತ್ತೊಮ್ಮೆ AniRa ನ ನೋಡೋ ಅವಕಾಶ ಮಾಡಿಕೊಡಿ, ಅನಿಕೇತ್ ನ ಕರೆಯಿಸಿ, ಇಬ್ರನ್ನು ನೋಡಬೇಕು ಎಂದು ಸಾಕಷ್ಟು ಅಭಿಮಾನಿಗಳು ಕಾಮೆಂಟ್ ಮೂಲಕ ತಿಳಿಸಿದ್ದಾರೆ.
ನಟಿ ಮೀರಾ ಅಂದ್ರೆ ಅಂಕಿತಾ ಅಮರ್ ಅವರು ನಮ್ಮನೆ ಯುವರಾಣಿ ಸೀರಿಯಲ್ ಮೂಲಕ ಮನೆಮಾತಾಗಿದ್ದರು, ಸದ್ಯ ನಟಿ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿರೋದರಿಂದ ಕಿರುತೆರೆಯಿಂದ (smallscreen) ದೂರ ಇದ್ದರು. ಇದೀಗ ತಮ್ಮ ನೆಚ್ಚಿನ ನಟಿಯನ್ನು ಮತ್ತೆ ನೋಡುವ ಸಂತಸದಲ್ಲಿದ್ದಾರೆ ಅಭಿಮಾನಿಗಳು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.