- Home
- Entertainment
- TV Talk
- ಹೌದು ಏನಿವಾಗ? ಕಾಮಾಲೆ ಕಣ್ಣಿಗೆ ಕಾಣೋದೆಲ್ಲಾ ಹಳದಿ… ಅನುಶ್ರೀ ಕಿಡಿ ಕಾರಿದ್ದು ಯಾರ್ ಮೇಲೆ?
ಹೌದು ಏನಿವಾಗ? ಕಾಮಾಲೆ ಕಣ್ಣಿಗೆ ಕಾಣೋದೆಲ್ಲಾ ಹಳದಿ… ಅನುಶ್ರೀ ಕಿಡಿ ಕಾರಿದ್ದು ಯಾರ್ ಮೇಲೆ?
Anchor Anushree: ಕನ್ನಡದ ಜನಪ್ರಿಯ ನಿರೂಪಕಿ ಅನುಶ್ರೀಯವರು ಟ್ರೋಲ್ ಒಂದರ ವಿರುದ್ಧ ಕಿಡಿ ಕಾರಿದಂತೆ ಕಾಣಿಸ್ತಿದೆ. ಹೌದು ಏನಿವಾಗ? ಕಾಮಾಲೆ ಕಣ್ಣಿಗೆ ಕಾಣೋದೆಲ್ಲಾ ಹಳದಿ ಎಂದು ಕಾಮೆಂಟ್ ಮಾಡುವ ಮೂಲಕ ಟ್ರೋಲ್ ಒಂದಕ್ಕೆ ಖಡಕ್ ಆಗಿ ನಿರೂಪಕಿ ಉತ್ತರಿಸಿದ್ದಾರೆ.

ನಿರೂಪಕಿ ಅನುಶ್ರೀ
ಕನ್ನಡ ಕಿರುತೆರೆಯ ಖ್ಯಾತ ನಿರೂಪಕಿ ಅನುಶ್ರೀ ಟ್ರೋಲ್ ಪೇಜ್ ಒಂದು ಶೇರ್ ಮಾಡಿರುವ ವಿಡೀಯೋಗೆ ಖಡಕ್ ಆಗಿ ಉತ್ತರ ಕೊಟ್ಟಿದ್ದಾರೆ. ಆ ಕಾಮೆಂಟ್ ಗೆ ಇದೀಗ ಮೂರು ಸಾವಿರಕ್ಕೂ ಅಧಿಕ ಲೈಕ್ ಬಂದಿದ್ದು, ನಿರೂಪಕಿ ಮಾತಿಗೆ ಹಲವರು ಬೆಂಬಲ ಸೂಚಿಸಿದ್ದಾರೆ.
ಅಷ್ಟಕ್ಕೂ ಆಗಿದ್ದೇನು?
ರಾಯಚೂರ್ ಮೀಮ್ಸ್ ಬ್ರೋ ಎನ್ನುವ ಟ್ರೋಲ್ ಪೇಜ್ ಒಂದು ಅನುಶ್ರೀಯವರ ಎರಡು ವಿಡಿಯೋವನ್ನು ಕಂಬೈನ್ ಮಾಡಿ ಹಾಕಿದ್ದು, ಅದಕ್ಕೆ ಕ್ಯಾಪ್ಶನ್ ಆಗಿ ಆಸ್ಕರ್ ಗೋಸ್ ಟು ಅನುಶ್ರೀ ಎಂದಿದ್ದಾರೆ. ಅಷ್ಟೇ ಅಲ್ಲದೇ ಇಫ್ ಬಕೆಟ್ ಹಾವ್ ಮೌತ್, ವಾರೆ ಮೇರಿ ಲಡ್ಕಿ ಎಂದು ಕೂಡ ವಿಡಿಯೋದಲ್ಲಿ ಹಾಕಿದ್ದಾರೆ.
ವಿಡೀಯೋದಲ್ಲಿ ಏನಿದೆ?
ಇತ್ತೀಚೆಗೆ ನಿರೂಪಕಿ ಅನುಶ್ರೀ ಶಿವರಾಜ್ ಕುಮಾರ್, ಉಪೇಂದ್ರ, ರಾಜ್ ಬಿ ಶೆಟ್ಟಿಯವರ 45 ಚಿತ್ರದ ಇಂಟರ್ವ್ಯೂ ಮಾಡುತ್ತಾ, ನನಗೆ ತಿರುಪತಿಗೆ ಮೊದಲ ಬಾರಿ ಹೋದಾಗ, ತಿಮ್ಮಪ್ಪ ಕಾಣಿಸಲೇ ಇಲ್ಲ, ಬದಲಾಗಿ ಶ್ರೀನಿವಾಸ ಕಲ್ಯಾಣದ ಡಾ ರಾಜಕುಮಾರ್ ಅವರೇ ಕಾಣಿಸಿದ್ದರು ಎಂದಿದ್ದಾರೆ.
ಮತ್ತೊಂದು ಹಳೆಯ ವಿಡೀಯೋ
ಅದರ ಜೊತೆಗೆ ಮತ್ತೊಂದು ಹಳೆಯ ವಿಡಿಯೋವನ್ನು ಸಹ ಟ್ರೋಲ್ ಪೇಜ್ ಶೇರ್ ಮಾಡಿದ್ದು, ಅದರಲ್ಲಿ ಅನುಶ್ರೀ ಚಿರಂಜೀವಿ ಅವರ ಜೊತೆ ವೇದಿಕೆಯಲ್ಲಿ ಮಾತನಾಡುತ್ತಾ, ನಾನು ಎಲ್ಲೆ ಹೋದರು ಮಂಜುನಾಥನ ದರ್ಶನ ಮಾಡುವಾಗ ಕಾಣುವಂತಹ ಮುಖ ಚಿರಂಜೀವಿ ಅವರದೇ ಎಂದು ಹೇಳಿದ್ದಾರೆ.
ಕೊನೆಗೆ ಉಪೇಂದ್ರ ವಿಡಿಯೋ
ವಿಡಿಯೋ ಕೊನೆಯಲ್ಲಿ ಉಪೇಂದ್ರ ಅವರ ಉಪೇಂದ್ರ ಸಿನಿಮಾದ ವಾರೆ ಮೇರಿ ಲಡ್ಕಿ, ನಿನ್ನಂಥವರು ಈ ದೇಶದಲ್ ಇದ್ದಾರ ಎನ್ನುವ ವಿಡಿಯೋ ಕೂಡ ಹಾಕಿದ್ದು, ಆ ಮೂಲಕ ನಿರೂಪಕಿ ಅನುಶ್ರೀಯವರನ್ನು ಟ್ರೋಲ್ ಮಾಡಿದ್ದಾರೆ.
ಖಡಕ್ ಉತ್ತರ ಕೊಟ್ಟ ಅನುಶ್ರೀ
ಈ ಟ್ರೋಲ್ ವಿಡಿಯೋಗೆ ಅಷ್ಟೇ ಖಡಕ್ ಆಗಿ ಉತ್ತರಿಸಿರುವ ಅನುಶ್ರೀ ಹೌದು ಏನಿವಾಗ, ಓಬವ್ವ ಅಂದಾಗ ಜಯಂತಿ ಅಮ್ಮ ನೆನಪಾಗ್ತಾರೆ.. ಕಿತ್ತೂರು ಚೆನ್ನಮ್ಮ ಅಂದಾಗ ಸರೋಜಮ್ಮ ನೆನಪಾಗ್ತಾರೆ… ಶ್ರೀನಿವಾಸ ಎಂದಾಗ ಅಪ್ಪಾಜಿ.. ಮಂಜುನಾಥ ಎಂದಾಗ ಚಿರಂಜೀವಿ ಸರ್… ಅದು ಹೆಮ್ಮೆ ಪಡೋ ಅಂತ ವಿಷಯ … ಕಾಮಲೆ ಕಣ್ಣೋರಿಗೆ ಕಾಣೋದೆಲ್ಲ ಹಳದಿ ಅನ್ನೋ ಹಾಗೆ… ನಿಮ್ಮ ಬುದ್ಧಿವಂತಿಕೆಗೆ ಹಾಗೆ ಕಾಣೋದು ಎಂದು ಉತ್ತರಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

