- Home
- Entertainment
- TV Talk
- ಸೀರೆ, ಮುಡಿಯಲ್ಲಿ ಮಲ್ಲಿಗೆ … ಮಾರ್ಚ್ ಮುಗೀತಾ ಬಂತು ಮದ್ವೆ ಬಗ್ಗೆ ಇನ್ನಾದ್ರೂ ಮೌನ ಮುರಿತಾರ ಅನುಶ್ರೀ!
ಸೀರೆ, ಮುಡಿಯಲ್ಲಿ ಮಲ್ಲಿಗೆ … ಮಾರ್ಚ್ ಮುಗೀತಾ ಬಂತು ಮದ್ವೆ ಬಗ್ಗೆ ಇನ್ನಾದ್ರೂ ಮೌನ ಮುರಿತಾರ ಅನುಶ್ರೀ!
ನಿರೂಪಕಿ ಅನುಶ್ರೀ ಅಂದವಾಗಿ ಸೀರೆಯುಟ್ಟು, ತಲೆ ತುಂಬಾ ಮಲ್ಲಿಗೆ ಮುಡಿದು ಮುದ್ದಾಗಿ ಪೋಸ್ ಕೊಟ್ಟಿದ್ದು, ಜನ ನೋಡಿ, ಮದುವೆ ಯಾವಾಗ ಅನ್ನೋದನ್ನು ಈವಾಗಾದ್ರು ಹೇಳಿ ಅಂತಿದ್ದಾರೆ.

ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ (Anchor Anushree) ಈಗ ಸರಿಗಮಪ ಕಾರ್ಯಕ್ರಮದ ನಿರೂಪಣೆ ಮಾಡೋದ್ರಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಇವರು ದುಬೈನಲ್ಲೂ ಕಾರ್ಯಕ್ರಮಗಳನ್ನು ಹೋಸ್ಟ್ ಮಾಡಿ ಬಂದಿದ್ದರು. ಅಲ್ಲಿನ ಸುಂದರ ಫೋಟೊಗಳನ್ನು ಸಹ ಪೋಸ್ಟ್ ಮಾಡಿದ್ದರು.
ಇದಾದ ಬಳಿಕ ಅಪ್ಪು ಪುನೀತ್ ರಾಜ್ ಕುಮಾರ್ (Puneeth Rajkumar) ಹುಟ್ಟುಹಬ್ಬದ ವಿಶೇಷವಾಗಿ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಿ, ಅಪ್ಪು ಸಿನಿಮಾವನ್ನು ಸಹ ನೋಡಿ ಸಂಭ್ರಮಿಸಿದ್ದರು. ಜೊತೆಗೆ ಅಪ್ಪು ಕುರಿತು ವಿಶೇಷ ಪೋಸ್ಟ್ ಅನ್ನು ಕೂಡ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದರು.
ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ಅನುಶ್ರೀ, ವಿವಿಧ ರೀತಿಯ ಫೋಟೊ ಶೂಟ್ ಮಾಡಿಸಿ ಶೇರ್ ಮಾಡುತ್ತಲೇ ಇರುತ್ತಾರೆ, ಅಲ್ಲದ್ದೇ ಕನ್ನಡ ಹಾಡುಗಳಿಗೆ ರೀಲ್ಸ್ ಮಾಡಿ ಶೇರ್ ಮಾಡುತ್ತಿರುತ್ತಾರೆ. ಇದೀಗ ಹೊಸದಾದ ಫೋಟೊಗಳನ್ನು ನಟಿ ಶೇರ್ ಮಾಡಿದ್ದಾರೆ.
ತಿಳಿ ನೇರಳೆ ಮತ್ತು ಬಿಳಿ ಬಣ್ಣದ ಸಿಲ್ಕ್ ಸೀರೆಯುಟ್ಟಿರುವ ಅನುಶ್ರೀ, ಅದಕ್ಕೆ ಮ್ಯಾಚ್ ಆಗುವ ನೇರಳೆ ಬ್ಲೌಸ್ ಧರಿಸಿದ್ದಾರೆ, ಸೀರೆಗೆ ಹೊಂದಾಣಿಕೆಯಾಗುವ ರೀತಿ ಬಿಳಿ ಬಣ್ಣದ ಬಳೆಗಳು, ಮಧ್ಯದಲ್ಲಿ ಗೋಲ್ಡನ್ ಬಳೆಗಳು, ತಲೆಯಲ್ಲಿ ದುಂಡು ಮಲ್ಲಿಗೆ ಹೂವು ಮುಡಿದಿದ್ದಾರೆ. ಒಟ್ಟಲ್ಲಿ ಸಿಂಪಲ್ ಆಗಿ ಆದರೆ ಸುಂದರವಾಗಿ ರೆಡಿಯಾಗಿದ್ದಾರೆ ಅನುಶ್ರೀ.
ತಮ್ಮ ಫೋಟೊಗಳ ಜೊತೆಗೆ ಅನುಶ್ರೀ ಈ ಚಂದದ ಸೀರೆ ಇನ್ನಷ್ಟು ಮನಸ್ಸಿನ ಬಣ್ಣದ ಅಂದ ತುಂಬಿತು, ಈ ಹಾಡಿನಿಂದ ಈ ಕ್ಷಣವೇ ರಂಗೇರಿತು !!! ಎಂದು ಬ್ಯಾಕ್ ಗ್ರೌಂಡಲ್ಲಿ, ಓ ಕುಸುಮವೇ, ಕುಸುಮದಾ ಅರ್ಪಣೆ ಎನ್ನುವ ಹಾಡನ್ನು ಕೂಡ ಹಾಕಿದ್ದು, ಫೋಟೋಗಳಿಗೆ ಆ ಹಾಡು ಪರ್ಫೆಕ್ಟ್ ಆಗಿ ಮ್ಯಾಚ್ ಆಗುತ್ತಿವೆ.
ನಿರೂಪಕಿಯ ಈ ಫೋಟೊಗಳನ್ನು ನೋಡುತ್ತಿದ್ದರೆ, ಅನುಶ್ರೀ ಮದುವೆಗೆ ರೆಡಿಯಾಗುತ್ತಿರುವ ಹೆಣ್ಣಿನಂತೆ ಕಾಣಿಸುತ್ತಿದ್ದಾರೆ. ಜೊತೆಗೆ ಅಭಿಮಾನಿಗಳು ಸಹ ಮೇಡಂ ಆದಷ್ಟು ಬೇಗನೆ ಮದುವೆಯಾಗಿ, ಮದುವೆ ಯಾವಾಗ ಎಂದು ಕಾಯುತ್ತಿದ್ದಾರೆ.
ಅನುಶ್ರೀ ತುಂಬಾನೇ ಸುಂದರವಾಗಿ ಕಾಣಿಸುತ್ತಿದ್ದು, ಫ್ಯಾನ್ಸ್ ನಮ್ ಅನು ಅಕ್ಕನಿಗೆ ದೃಷ್ಟಿ ತೆಗಿರೊ! ಸೂಪರ್ ಅನು, ಸುಂದರಿ, ಚಂದನದ ಗೊಂಬೆ, ಮುದ್ದು ಗೊಂಬೆ, ಸ್ಟನ್ನಿಂಗ್, ಎವರ್ ಗ್ರೀನ್ ಬ್ಯೂಟಿ, ನಿಮ್ಮ ನಗುವಿನ ನಿರೂಪಣೆಗೆ ಸೋಲದ ಮನಸ್ಸೇ ಇಲ್ಲ ಎಂದು ಕಾಮೆಂಟ್ ಮಾಡಿ, ಅನುಶ್ರೀಯವರನ್ನು ಕೊಂಡಾಡಿದ್ದಾರೆ.
ಇನ್ನೂ ಒಬ್ಬರು ಮೇಡಂ ನೀವು ಮಾರ್ಚಲ್ಲಿ ಮದುವೆಯಾಗ್ತೀರಿ ಅಂದಿದ್ರಿ, ಯಾಕೆ ಇನ್ನೂ ಆಗಿಲ್ಲ. ನಾವು ನಿಮ್ಮ ಹುಡುಗನ್ನ ನೋಡೋದಕ್ಕೆ ಕಾಯ್ತಾ ಇದ್ದೀವಿ, ನಿಮ್ಮ ಕೆಲಸಕ್ಕೆ ನಮ್ಮ ಬೆಂಬಲ ಯಾವಾಗಲೂ ಇರುತ್ತೆ, ಮದುವೆ ಯಾವಾಗ ಹೇಳಿ ಎಂದು ಕಾಮೆಂಟ್ ಮಾಡಿದ್ದಾರೆ.