ಗಿಫ್ಟ್ ಬೇಕು ಎಂದು ಹಠ ಮಾಡಿದಕ್ಕೆ ರಕ್ತ ಮಾರಿದ ತಂದೆ; ಖ್ಯಾತ ನಿರೂಪಕಿ ಕಣ್ಣೀರು!
ತಂದೆ ಮಾಡಿದ ತ್ಯಾಗ ನೆನೆದು ಭಾವುಕರಾದ ಖ್ಯಾತ ನಿರೂಪಕಿ. ಮಕ್ಕಳ ಖುಷಿನೇ ಮುಖ್ಯ ಅಂತಾರೆ ಅಲ್ವಾ ಪೋಷಕರು.

ಅನುಸೂಯಾ ಎಂಬಿಎ ಪದವಿಧರೆ.2003ರಲ್ಲಿ 'ನಾಗ' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದ್ದರು. 2013ರಲ್ಲಿ 'ಜಬರ್ದಸ್ತ್' ಕಾರ್ಯಕ್ರಮಕ್ಕೆ ನಿರೂಪಕಿಯಾಗಿದ್ದರು.
2018ರಲ್ಲಿ 'ರಂಗಸ್ಥಲಂ' ಚಿತ್ರಕ್ಕೆ ಫಿಲ್ಮ್ ಫೇರ್ ಬೆಸ್ಟ್ ನಟಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಒಟ್ಟು 24 ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದಾರೆ. ಈಗ ಅನಸೂಯ ಇಲ್ಲದೆ ಸಿನಿಮಾ ಇಲ್ಲ ಕಾರ್ಯಕ್ರಮವಿಲ್ಲ.
ತಂದೆ ತಮ್ಮ ಜೀವನದಲ್ಲಿ ಎಷ್ಟು ಗ್ರೇಟ್ ಎಂದು ಹೇಳಿಕೊಳ್ಳಲು ಅನಸೂಯಾ ಒಂದು ನಿಜವಾದ ಘಟನೆಯಲ್ಲಿ ಬಿಚ್ಚಿಟ್ಟಿದ್ದಾರೆ. ಇದನ್ನು ಕೇಳಿ ಅನೇಕರು ಶಾಕ್ ಆಗಿದ್ದಾರೆ.
ಅಂದು ನನ್ನ ಹುಟ್ಟುಹಬ್ಬವಿತ್ತು ಆ ದಿನ ತನ್ನ ತಂದೆಗೆ ಉಡುಗೊರೆಯನ್ನು ಕೊಡಲು ಕೇಳಿದೆ. ಅಂದು ಅವರು ನನಗೆ ಗೊತ್ತಿಲ್ಲದ ಹಾಗೆ ತಮ್ಮ ರಕ್ತ ಮಾರಿ ಉಡುಗೊರೆಯನ್ನು ತಂದು ಕೊಟ್ಟರು.
ಹಲವು ದಿನಗಳ ನಂತರ ಈ ವಿಚಾರ ನನ್ನ ಕಿವಿಗೆ ಬಿತ್ತು ಕೇಳಿ ಬೆಚ್ಚಿಬಿದ್ದಿದೆ.ಪ್ರತಿಯೊಬ್ಬ ತಂದೆಯೂ ತನ್ನ ಮಕ್ಕಳಿಗಾಗಿ ಏನನ್ನಾದರೂ ತ್ಯಾಗ ಮಾಡುತ್ತಲೇ ಇರುತ್ತಾನೆ.
ತಂದೆಯ ಪ್ರೀತಿಮ ತ್ಯಾಗದಿಂದ ಬರುತ್ತದೆ. ನನ್ನ ತಂದೆ ಜೀವನದಲ್ಲಿ ಹೀರೋ ಎಂದಿದ್ದಾರೆ. ಈ ಘಟನೆಯನ್ನು ವಿಮಾನಂ ಸಿನಿಮಾ ರಿಲೀಸ್ ಸಮಯದಲ್ಲಿ ಹೇಳಿಕೊಂಡಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.