ಮದುವೆ ಬಳಿಕ ಮೊದಲ ಬಾರಿ ಪತಿ ಜೊತೆ ಸತ್ಯನಾರಾಯಣ ಪೂಜೆ ಮಾಡಿದ Amruthadhare ನಟಿ
ಅಮೃತಧಾರೆ ನಟಿ ಮೇಘಾ ಶೆಣೈ ಇತ್ತೀಚೆಗೆ ತಮ್ಮ ಬಾಲ್ಯದ ಗೆಳೆಯನ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಇದೀಗ ಮದುವೆ ಬಳಿಕ ಮೊದಲ ಬಾರಿಗೆ ಗಂಡನ ಜೊತೆ ಸತ್ಯನಾರಾಯಣ ಸ್ವಾಮಿ ಪೂಜೆ ಮಾಡಿದ್ದು, ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಅಮೃತಧಾರೆ ಸೀರಿಯಲ್
ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ದಿವಾನ್ ಸಹೋದರಿ ಸುಧಾ ಪಾತ್ರದ ಮೂಲಕ ಜನಪ್ರಿಯತೆ ಪಡೆದ ನಟಿ ಮೇಘಾ ಶೆಣೈ ಇತ್ತೀಚೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಇದೀಗ ಪತಿ ಜೊತೆ ಸತ್ಯನಾರಾಯಣ ಸ್ವಾಮಿ ಪೂಜೆ ಮಾಡಿರುವ ಸಂಭ್ರಮವನ್ನು ಹಂಚಿಕೊಂಡಿದ್ದಾರೆ.
ಮೇಘಾ ಶೆಣೈ
ಮೇಘಾ ಶೆಣೈ ಮೂಲತಃ ಮಂಗಳೂರಿನವರಾಗಿದ್ದು , ಹಲವಾರು ವರ್ಷಗಳಿಂದ ಕನ್ನಡ ಕಿರುತೆರೆಯಲ್ಲಿ ನಟಿಯಾಗಿ ವಿವಿಧ ಶೇಡ್ ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮೇಘಾ, ಆಗಸ್ಟ್ 21 ರಂದು ತಮ್ಮ ಗೆಳೆಯ ಭರತ್ ಸಿಂಗ್ ಜೊತೆ ಅದ್ದೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈ ಜೋಡಿ ನವಂಬರ್ 10ರಂದು ಕುಟುಂಬದ ಸಮ್ಮುಖದಲ್ಲಿ ಅದ್ಧೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.
ಸತ್ಯನಾರಾಯಣ ಪೂಜೆ
ಇದೀಗ ಮದುವೆಯಾದ ಬಳಿಕ ಪತಿ ಜೊತೆ ಮೊದಲ ಬಾರಿ ಸತ್ಯನಾರಾಯಣ ಪೂಜೆ ಮಾಡಿದ್ದು, ಆ ಸಂಭ್ರಮದ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಅದ್ಬುತವಾದ ಹೊಸ ವರ್ಷಕ್ಕಾಗಿ ಕಾಯುತ್ತಿರುವುದಾಗಿ ನಟಿ ಇನ್’ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಸಕಾರಾತ್ಮಕ 2026ಕ್ಕೆ ಎದುರು ನೋಡುತ್ತಿದ್ದೇನೆ
ಇದು ನನ್ನ ಪತಿಯೊಂದಿಗೆ ನಾನು ಮಾಡಿದ ಮೊದಲ ಸತ್ಯನಾರಾಯಣ ಪೂಜೆ. ಈ ವರ್ಷ ನನಗೆ ಅಪಾರ ಸಂತೋಷ ಮತ್ತು ಅನೇಕ ಹೊಸ ಆರಂಭಗಳನ್ನು ನೀಡಿದೆ. ಇದು ಇಷ್ಟೊಂದು ಅಚ್ಚರಿಗಳನ್ನು ತರುತ್ತದೆ ಎಂದು ನಾನು ಎಂದಿಗೂ ಭಾವಿಸಿರಲಿಲ್ಲ. ವರ್ಷಕ್ಕೆ ಕೆಲವೇ ದಿನಗಳು ಉಳಿದಿರುವಾಗ, ಅವುಗಳನ್ನು ಸಂತೋಷ ಮತ್ತು ಒಳ್ಳೆಯ ನೆನಪುಗಳೊಂದಿಗೆ ಪಾಲಿಸಲು ನಾನು ಆಶಿಸುತ್ತೇನೆ ಮತ್ತು ಅದೇ ಶಕ್ತಿ ಮತ್ತು ಸಕಾರಾತ್ಮಕತೆಯೊಂದಿಗೆ 2026 ಗಾಗಿ ಎದುರು ನೋಡುತ್ತಿದ್ದೇನೆ ಎಂದಿದ್ದಾರೆ ಮೇಘಾ ಶೆಣೈ.
ಮತ್ತೆ ಅಮೃತಧಾರೆಗೆ ಬರ್ತಾರ?
ಅಮೃತಧಾರೆ ಧಾರಾವಾಹಿಯಲ್ಲಿ ಸದ್ಯ ಕಥೆ ಲೀಪ್ ತೆಗೆದುಕೊಂಡಿದೆ, ಭೂಮಿಕಾ, ಗೌತಮ್, ಮಲ್ಲಿ, ಜೈದೇವ್ ಸುತ್ತಲೇ ಕಥೆ ತಿರುಗುತ್ತಿದೆ. ಹಾಗಾಗಿ ಸುಧಾ ಪಾತ್ರವನ್ನು ಸದ್ಯ ತೋರಿಸುತ್ತಿಲ್ಲ. ಇನ್ನು ಮುಂದಿನ ದಿನಗಳಲ್ಲಿ ಮತ್ತೆ ಸುಧಾ ಪಾತ್ರದ ಪ್ರವೇಶ ಆಗಬಹುದೇ? ಆ ಸಂದರ್ಭದಲ್ಲಿ ಮೇಘಾ ಮತ್ತೆ ಎಂಟ್ರಿ ಕೊಡುವರೇ ಅನ್ನೋದು ಗೊತ್ತಿಲ್ಲ.
ಮೇಘಾ ಶೆಣೈ ನಟಿಸಿರುವ ಧಾರಾವಾಹಿಗಳು
‘ಸುಂದರಿ' ಧಾರಾವಾಹಿಯ ಮೂಲಕ ಸೀರಿಯಲ್ ಗೆ ಎಂಟ್ರಿ ಕೊಟ್ಟ ಮೇಘಾ ಶೆಣೈ 'ಬ್ರಾಹ್ಮಿನ್ಸ್ ಕೆಫೆ', ‘ಜನುಮದ ಜೋಡಿ, 'ಕಾವೇರಿ', 'ಮಹಾದೇವಿ', 'ರಕ್ಷಾಬಂಧನ, 'ಆರತಿಗೊಬ್ಬ ಕೀರ್ತಿಗೊಬ್ಬ' , ಜೀವ ಹೂವಾಗಿದೆ ಧಾರಾವಾಹಿಯಲ್ಲಿ ನಟಿಸಿದ್ದರು. ಸದ್ಯ ಅಮೃತಧಾರೆಯಲ್ಲಿ ಸುಧಾ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

