- Home
- Entertainment
- TV Talk
- Amruthadhaare Serial: ಲಗ್ಗೇಜ್ ಜೊತೆ ಜೈದೇವನ ಮನೆಗೇ ಉಳಿಯಲು ಬಂದಳು ಮಧುರಾ- ಮುಂದಿರೋದೇ ರೋಚಕ ಟ್ವಿಸ್ಟ್
Amruthadhaare Serial: ಲಗ್ಗೇಜ್ ಜೊತೆ ಜೈದೇವನ ಮನೆಗೇ ಉಳಿಯಲು ಬಂದಳು ಮಧುರಾ- ಮುಂದಿರೋದೇ ರೋಚಕ ಟ್ವಿಸ್ಟ್
ಅಮೃತಧಾರೆ ಸೀರಿಯಲ್‌ನಲ್ಲಿ 'ಆಪರೇಷನ್ ಜೈದೇವ್' ಭಾಗವಾಗಿ, ಮಲ್ಲಿ ಮತ್ತು ಭೂಮಿಕಾ ಮಧುರಾಳನ್ನು ಜೈದೇವ್‌ನ ಸತ್ಯ ಬಯಲು ಮಾಡಲು ಕಳುಹಿಸಿದ್ದಾರೆ. ಹಾಸ್ಟೆಲ್‌ನಿಂದ ಹೊರಹಾಕಲ್ಪಟ್ಟ ನೆಪದಲ್ಲಿ ಮಧುರಾ ಈಗ ಜೈದೇವ್ ಮನೆಯಲ್ಲೇ ಆಶ್ರಯ ಕೇಳಿದ್ದು, ಜೈದೇವ್ ಈ ಸಂಚಿಗೆ ಬಲಿಯಾಗುತ್ತಾನೆಯೇ ಎಂಬ ಕುತೂಹಲ ಮೂಡಿದೆ.

ಆಪರೇಷನ್ ಜೈದೇವ್
ಅಮೃತಧಾರೆ ಸೀರಿಯಲ್ (Amruthadhaare Serial)ನಲ್ಲಿ ಸದ್ಯ ಆಪರೇಷನ್ ಜೈದೇವ್ ನಡೆಯುತ್ತಿದೆ. ಇದಕ್ಕಾಗಿ ಪೊಲೀಸ್ ಸಿಬ್ಬಂದಿ ಮಧುರಾಳನ್ನು ಹನಿಟ್ರ್ಯಾಪ್ ಮಾಡಿಸಲು ಕಳುಹಿಸಿದ್ದಾಳೆ ಮಲ್ಲಿ. ಮಲ್ಲಿ ಮತ್ತು ಭೂಮಿಕಾ ಸೇರಿ ಮಧುರಾಳಿಂದ ಜೈದೇವನ ಸತ್ಯ ಹೊರತೆಗೆಯಬೇಕಿದೆ.
ಹೆಣ್ಣುಮಕ್ಕಳ ವೀಕ್ನೆಸ್
ಜೈದೇವ್ಗೆ ಹೆಣ್ಣುಮಕ್ಕಳ ವೀಕ್ನೆಸ್ ಇರೋದು ತಿಳಿದೇ ಈ ಪ್ಲ್ಯಾನ್ ಮಾಡಲಾಗಿದೆ. ಆದರೆ ಜೈದೇವ್ ಅಂದುಕೊಂಡಷ್ಟು ಕೆಟ್ಟವನಲ್ಲ. ಯಾರೋ ಹೆಣ್ಣುಮಕ್ಕಳು ಸಿಕ್ಕರು ಎಂದು ಅಷ್ಟು ಸುಲಭದಲ್ಲಿ ಅವರಿಗೆ ಬೀಳುವವನೂ ಅಲ್ಲ. ಆದ್ದರಿಂದ ಮಧುರಾಗೆ ಜೈದೇವನ ಹತ್ತಿರ ಆಗುವುದು ಸ್ವಲ್ಪ ಕಷ್ಟವೇ ಆಗ್ತಿದೆ.
ಸ್ನೇಹ ಬೆಳೆಸಿದ ಮಧುರಾ
ಇದರ ಹೊರತಾಗಿಯೂ ಮಲ್ಲಿಯ ಆದೇಶದಂತೆ ಮಧುರಾ, ಜೈದೇವನಿಂದ ಫೋನ್ ನಂಬರ್ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾಳೆ. ಆದರೆ ದಿಯಾ ಮತ್ತು ಅನು ಬಗ್ಗೆ ತಿಳಿದುಕೊಳ್ಳಲು ಇಷ್ಟು ಸಾಕಾಗುವುದಿಲ್ಲವಲ್ಲ.
ಡ್ಯೂಟಿಯ ಭಾಗ
ಅದೇ ಕಾರಣಕ್ಕೆ, ಮಧುರಾಳನ್ನು ಜೈದೇವನ ಮನೆಗೆ ಹೋಗುವಂತೆ ಹೇಳಿದಾಗ, ಆರಂಭದಲ್ಲಿ ಮಧುರಾ ತುಂಬಾ ಭಯ ಪಟ್ಟುಕೊಂಡಿದ್ದಾಳೆ. ಆದರೆ, ಮಲ್ಲಿ ಮತ್ತು ಭೂಮಿಕಾ ಅವಳಿಗೆ ಸಮಾಧಾನ ಮಾಡಿ, ಅದು ಡ್ಯೂಟಿಯ ಭಾಗ ಎಂದು ಹೇಳಿ ಕಳುಹಿಸಿದ್ದಾಳೆ.
ಜೈದೇವನ ಮನೆಯಲ್ಲಿ ಮಧುರಾ
ಅದರಂತೆ ಮಧುರಾ ಜೈದೇವನ ಮನೆಗೆ ಬಂದಿದ್ದಾಳೆ. ನನ್ನನ್ನು ಹಾಸ್ಟೆಲ್‌ನಿಂದ ಹೊರಕ್ಕೆ ಹಾಕಿದ್ರು. ಎಲ್ಲಿಯೂ ನನಗೆ ಜಾಗ ಸಿಗಲಿಲ್ಲ. ಅಲ್ಪ ಸ್ವಲ್ಪ ಪರಿಚಯ ಅಂತ ಇರೋದು ನೀವೊಬ್ಬರೇ. ಅದಕ್ಕಾಗಿ ನಿಮ್ಮ ಮನೆಯಲ್ಲಿ ಉಳಿದುಕೊಳ್ಳಲು ಜಾಗ ಕೊಡಿ ಎಂದು ಹೇಳಿದ್ದಾಳೆ.
ಜೈದೇವ್ಗೆ ತಿಳಿಯತ್ತಾ?
ಜೈದೇವ್ ಇದನ್ನು ಒಪ್ಪುತ್ತಾನಾ ಅಥವಾ ಅವನಿಗೆ ಏನೋ ಸಂಚು ನಡೆಯುತ್ತಿದೆ ಎನ್ನೋದು ತಿಳಿಯತ್ತಾ ಎನ್ನೋದು ಸದ್ಯಕ್ಕಿರುವ ಕುತೂಹಲ. ಎಷ್ಟೇ ಜಾಣರಾದರೂ, ಹೆಣ್ಣು, ಹೊನ್ನು, ಮಣ್ಣು ಕಂಡರೆ ಬಾಯಿ ಬಿಟ್ಟರೆ ಅಲ್ಲಿಗೆ ಅವರ ಕಥೆ ಮುಗಿದಂತೆ ಅನ್ನುವಂತೆ ಜೈದೇವನ ಸ್ಥಿತಿಯೂ ಆಗತ್ತಾ ಎನ್ನೋದನ್ನು ನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

