ಇಷ್ಟು ಚಿಕ್ಕ ವಯಸ್ಸಿಗೆ ಇರುಮುಡಿ ಕಟ್ಟಿ ಶಬರಿಮಲೆ ಯಾತ್ರೆ ಕೈಗೊಂಡ ಅಮೃತಧಾರೆ ಧಾರಾವಾಹಿ ಬಾಲ ನಟಿ
‘ಅಮೃತಧಾರೆ’ ಧಾರಾವಾಹಿಯಲ್ಲಿ ನಟಿಸುತ್ತಲಿರುವ ಪ್ರಾಣ್ಯಾ ಅಕ್ಷಯ್ ಅವರು ಅಯ್ಯಪ್ಪ ದೀಕ್ಷೆ ಪಡೆದಿದ್ದಾರೆ. ತಂದೆಯ ಜೊತೆಗೆ ಪ್ರಾಣ್ಯಾ ಅವರು ಇಷ್ಟು ಚಿಕ್ಕ ವಯಸ್ಸಿನಲ್ಲಿ ಇರುಮುಡಿ ಕಟ್ಟಿ ಅಯ್ಯಪ್ಪನ ಸನ್ನಿಧಾನಕ್ಕೆ ತೆರಳಿದ್ದಾರೆ. ಈ ವಿಡಿಯೋವನ್ನು ಅವರ ಅಕೌಂಟ್‌ನಲ್ಲಿ ಹಂಚಿಕೊಳ್ಳಲಾಗಿದೆ.

ಅಮೃತಧಾರೆ, ಪಾರು ಧಾರಾವಾಹಿಗಳಲ್ಲಿ ಪ್ರಾಣ್ಯಾ ಅಕ್ಷಯ್ ಅವರು ನಟಿಸಿದ್ದಾರೆ. ಸದ್ಯ ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ದಿವಾನ್ ತಂಗಿ ಮಗಳ ಪಾತ್ರ ಮಾಡುತ್ತಿದ್ದಾರೆ.

ಪ್ರಾಣ್ಯಾ ಅಕ್ಷಯ್ ಅವರು ಈಗ ತಂದೆ ಜೊತೆಗೆ ಶಬರಿಮಲೆ ಯಾತ್ರೆ ಕೈಗೊಂಡಿದ್ದಾರೆ. ಇರುಮುಡಿ ಕಟ್ಟಿ ಅವರು ಈ ಯಾತ್ರೆ ಕೈಗೊಂಡಿದ್ದಾರೆ.

ಪ್ರಾಣ್ಯಾ ಅಕ್ಷಯ್ ಅವರು ಇಷ್ಟು ಚಿಕ್ಕ ವಯಸ್ಸಿಗೆ ಇರುಮುಡಿ ಕಟ್ಟಿ ಯಾತ್ರೆ ಕೈಗೊಂಡಿರೋದು ಅನೇಕರಿಗೆ ಇಷ್ಟ ಆಗಿದೆ. ಇವರ ಭಕ್ತಿಗೆ ಮೆಚ್ಚುಗೆ ವ್ಯಕ್ತವಾಗಿದೆ.

ಪ್ರಾಣ್ಯಾ ಅಕ್ಷಯ್ ಅವರ ತಂದೆ ಆರ್ಮಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಈಗ ಅವರು ಕೂಡ ಬಿಡುವು ಮಾಡಿಕೊಂಡು ಅಯ್ಯಪ್ಪ ದೀಕ್ಷೆ ಪಡೆದಿದ್ದಾರೆ.

ಈ ಬಾಲನಟಿ ಪ್ರಾಣ್ಯಾ ಅವರು ತಂದೆ ಜೊತೆಗೆ ಡ್ಯಾನ್ಸ್, ರೀಲ್ಸ್ ಮಾಡುತ್ತಿರುತ್ತಾರೆ. ಇದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.