- Home
- Entertainment
- TV Talk
- Amruthadhaare ಯಾರೂ ಊಹಿಸದ ಟ್ವಿಸ್ಟ್: ಮಿಂಚು ಹುಡುಕಿ ಬಂದ ಅಪ್ಪ-ಅಮ್ಮ; ಹಾಗಿದ್ರೆ ಯಾರ ಮಗಳೀಕೆ
Amruthadhaare ಯಾರೂ ಊಹಿಸದ ಟ್ವಿಸ್ಟ್: ಮಿಂಚು ಹುಡುಕಿ ಬಂದ ಅಪ್ಪ-ಅಮ್ಮ; ಹಾಗಿದ್ರೆ ಯಾರ ಮಗಳೀಕೆ
ಗೌತಮ್ ಮತ್ತು ಭೂಮಿಕಾ ಮಿಂಚುವನ್ನು ದತ್ತು ನೀಡಲು ಸಿದ್ಧತೆ ನಡೆಸುತ್ತಿರುವಾಗಲೇ ಆಕೆ ಶಾಲೆಯಿಂದ ನಾಪತ್ತೆಯಾಗಿದ್ದಾಳೆ. ಇದೇ ವೇಳೆ, ನಾವೇ ಮಿಂಚುಳ ನಿಜವಾದ ಪೋಷಕರು ಎಂದು ಹೇಳಿಕೊಂಡು ದಂಪತಿ ಎಂಟ್ರಿ ಕೊಟ್ಟಿದ್ದು, ಕಥೆಗೆ ಹೊಸ ತಿರುವು ಸಿಕ್ಕಿದೆ.

ದತ್ತು ಪ್ಲ್ಯಾನ್
ಅಮೃತಧಾರೆ ಸೀರಿಯಲ್ (Amruthadhaare Serial)ನಲ್ಲಿ ಯಾರೂ ಊಹಿಸದ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಕ್ಕಿದೆ. ಮಹಿಮಾಗೆ ಮಿಂಚುವನ್ನು ದತ್ತು ಕೊಡಲು ಗೌತಮ್ ಮತ್ತು ಭೂಮಿಕಾ ಎಲ್ಲಾ ತಯಾರಿ ನಡೆಸಿದ್ದಾರೆ.
ಜೈದೇವ್ ಪ್ಲ್ಯಾನ್
ಇದರ ಬೆನ್ನಲ್ಲೇ ಅತ್ತ ಜೈದೇವ್ ಮಿಂಚುನ್ನು ಕಿಡ್ನ್ಯಾಪ್ ಮಾಡಲು ಪ್ಲ್ಯಾನ್ ಮಾಡಿದ್ದಾನೆ. ಇನ್ನೊಂದೆಡೆ, ಮಹಿಮಾ ಮನೆಗೆ ಹೋಗಲು ಒಲ್ಲದ ಮಿಂಚು ನಾನೇ ಮನೆಬಿಟ್ಟು ಹೋದರೆ ಹೇಗೆ ಎಂದು ಮನಸ್ಸಿನಲ್ಲಿ ಅಂದುಕೊಂಡಿದ್ದಾಳೆ.
ಮಿಂಚು ಮಿಸ್ಸಿಂಗ್
ಸ್ಕೂಲ್ಗೆ ಹೋಗಿರುವ ಮಿಂಚು ನಾಪತ್ತೆಯಾಗಿದ್ದಾಳೆ. ಆಕೆಯನ್ನು ಜೈದೇವನೇ ಕಿಡ್ನ್ಯಾಪ್ ಮಾಡಿದ್ನೋ ಅಥವಾ ಅವಳಾಗಿಯೇ ಎಲ್ಲಿ ಹೋದಳೋ ಗೊತ್ತಿಲ್ಲ.
ರೋಚಕ ಟ್ವಿಸ್ಟ್
ಆದರೆ ಇವೆಲ್ಲವುಗಳ ನಡುವೆಯೇ ರೋಚಕ ಟ್ವಿಸ್ಟ್ ಸಿಕ್ಕಿದೆ. ಮಿಂಚು ತಮ್ಮದೇ ಮಗಳು ಎಂದುಕೊಂಡು ಅಪ್ಪ-ಅಮ್ಮ ಬಂದಿದ್ದಾರೆ. ನಾವು ಫಾರಿನ್ಗೆ ಹೋಗುವಾಗ ಮಿಂಚುವನ್ನು ಬೇರೊಬ್ಬರಿಗೆ ಕೊಟ್ಟು ಹೋಗಿದ್ವಿ. ಆದರೆ ಅವರು ದೇವಸ್ಥಾನದಲ್ಲಿ ಮಿಂಚು ಬಿಟ್ಟು ಹೋಗಿಬಿಟ್ಟಿದ್ದಾರೆ ಎಂದಿದ್ದಾರೆ.
ನಿಮ್ಮ ಮನೆಯಲ್ಲಿ ಮಗು
ಮಿಂಚುವನ್ನು ಎಲ್ಲಾ ಕಡೆಗೆ ಹುಡುಕಿದ್ವಿ, ಸಿಗಲಿಲ್ಲ. ಆಮೇಲೆ ಪೊಲೀಸ್ ಕಂಪ್ಲೇಂಟ್ ಕೊಡಲು ಹೋದಾಗ ಮಗು ನಿಮ್ಮ ಬಳಿ ಇರುವುದು ತಿಳಿಯಿತು. ದಯವಿಟ್ಟು ಮಗಳನ್ನು ನಮ್ಮ ಬಳಿ ಕಳುಹಿಸಿ ಎಂದಾಗ, ಎಲ್ಲರೂ ಕಕ್ಕಾಬಿಕ್ಕಿಯಾಗಿದ್ದಾರೆ.
ಅಸಲಿಗೆ ಯಾರ ಮಗು?
ಶಾಲೆಗೆ ಹೋದ ಮಗು ಮಿಸ್ ಆಗಿರೋದಾಗಿ ಗೌತಮ್ ಹೇಳಿದಾಗ ಅಪ್ಪ-ಅಮ್ಮ ಎಂದು ಹೇಳಿಕೊಂಡು ಬಂದ ಜೋಡಿ ಶಾಕ್ ಆಗಿದ್ದಾರೆ. ಹಾಗಿದ್ರೆ ಮಿಂಚು ಯಾರ ಮಗು ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ. ಇದು ಜೈದೇವನ ಕುತಂತ್ರವೋ ಎಂದು ನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

