MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ಕೂಲಿ ಕೆಲ್ಸ ಮಾಡಿದ್ದೆ, ಜೈಲೂ ಸೇರಿದೆ: Amruthadhaare ನಟ ರಾಣವ್​ ಬದುಕಿನ ಯಾರೂ ತಿಳಿಯದ ಸತ್ಯ

ಕೂಲಿ ಕೆಲ್ಸ ಮಾಡಿದ್ದೆ, ಜೈಲೂ ಸೇರಿದೆ: Amruthadhaare ನಟ ರಾಣವ್​ ಬದುಕಿನ ಯಾರೂ ತಿಳಿಯದ ಸತ್ಯ

ಅಮೃತಧಾರೆ ಸೀರಿಯಲ್ ಖ್ಯಾತಿಯ ನಟ ಜೈದೇವ್ ಅಲಿಯಾಸ್ ರಾಣವ್ ಗೌಡ, ಸಹನಟಿ ರಾಧಾ ಭಗವತಿ ಅವರನ್ನು ಶೀಘ್ರದಲ್ಲೇ ವಿವಾಹವಾಗಲಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ, ಅವರು ತಮ್ಮ ನಟನಾ ಪಯಣದ ಹಿಂದಿನ ಕಷ್ಟಹಂಚಿಕೊಂಡಿದ್ದು, ಕೂಲಿ ಕೆಲಸ ಮಾಡಿದ್ದರಿಂದ ಹಿಡಿದು ಜೈಲು ಸೇರಿದ್ದರ ಬಗ್ಗೆಯೂ ಮಾತನಾಡಿದ್ದಾರೆ.

2 Min read
Author : Suchethana D
Published : Apr 17 2026, 12:15 PM IST
Share this Photo Gallery
  • FB
  • TW
  • Linkdin
  • Whatsapp
16
ಮದುಮಗನಾಗಿರೋ ಅಮೃತಧಾರೆ ಜೈದೇವ್​
Image Credit : Social Media

ಮದುಮಗನಾಗಿರೋ ಅಮೃತಧಾರೆ ಜೈದೇವ್​

ಅಮೃತಧಾರೆ ಸೀರಿಯಲ್​ (Amruthadhaare Serial) ಜೈದೇವ್​ ಉರ್ಫ್​ ರಾಣವ್​ ಗೌಡ ಅವರು ಇದೀಗ ಇದೇ ಸೀರಿಯಲ್​ ಹಳೆಯ ಮಲ್ಲಿ ಅರ್ಥಾತ್​ ಭಾರ್ಗವಿ ಎಲ್​ಎಲ್​ಬಿ ನಟಿ ರಾಧಾ ಭಗವತಿ ಅವರ ಜೊತೆ ಶೀಘ್ರದಲ್ಲಿಯೇ ಹಸೆಮಣೆ ಏರಲಿದ್ದಾರೆ. ಈ ವರ್ಷವೇ ತಮ್ಮ ಮದುವೆ ಎಂದು ಎಂಗೇಜ್​ಮೆಂಟ್​ ಆಗಿರೋ ಈ ಜೋಡಿ ಘೋಷಿಸಿದೆ.

26
ಹಳೆಯ ದಿನಗಳ ಮೆಲುಕು
Image Credit : Instagram

ಹಳೆಯ ದಿನಗಳ ಮೆಲುಕು

ಇದರ ನಡುವೆಯೇ, ಇದೀಗ ನಟ ರಾಣವ್​ ಅವರು ತಮ್ಮ ಹಳೆಯ ದಿನಗಳನ್ನು ಮೆಲುಕು ಹಾಕಿದ್ದಾರೆ. ಈ ಪರಿಯ ಸಕ್ಸಸ್​ ನಟನಾಗಿ ಬರಲು ತಾವು ಪಟ್ಟಿರುವ ಕಷ್ಟಗಳ ದಿನಗಳನ್ನು ನಟ ನೆನೆದಿದ್ದಾರೆ. ಚಂದನ್​ ಕೆ.ಶೆಟ್ಟಿ ಯುಟ್ಯೂಬ್​ ಚಾನೆಲ್​ಗೆ ನೀಡಿರುವ ಸಂದರ್ಶನದಲ್ಲಿ ಅವರು ಈ ವಿಷಯವನ್ನು ತಿಳಿಸಿದ್ದಾರೆ.

Related Articles

Related image1
Amruthadhaare ಜೈದೇವ್​- ಹಳೆ ಮಲ್ಲಿ ರಿಯಲ್​ ಮದ್ವೆ ಯಾವಾಗ, ಹೇಗೆ, ಎಲ್ಲಿ? ಜೋಡಿ ಹೇಳಿದ್ದೇನು
Related image2
Amruthadhaare ಜೈದೇವ್​ಗಾಗಿ ನಾನ್​ವೆಜ್​ ಮಾಡೋದ ಕಲಿತೆ: ನಾಚುತ್ತಲೇ ನಟಿ ರಾಧಾ ಭಗವತಿ ಹೇಳಿದ್ದೇನು?
36
ಕೂಲಿ ಕೆಲ್ಸ ಮಾಡಿದೆ
Image Credit : Ranav Gowda Instagram

ಕೂಲಿ ಕೆಲ್ಸ ಮಾಡಿದೆ

ಎಂಜಿನಿಯರಿಂಗ್​ ಅರ್ಧಂದರ್ಧ ಕಲಿತ ಮೇಲೆ ಜೀವನದಲ್ಲಿ ಸಾಕಷ್ಟು ಅಪ್ಸ್ ಅಂಡ್ ಡೌನ್ಸ್ ಆಯ್ತು. ಸಿಮೆಂಟ್ ಕೆಲಸ, ಕೂಲಿ ಕೆಲಸನೂ ಮಾಡಬೇಕಾಯ್ತು. ಲೇಬರ್ ಆಗಿ ಐದಾರು ವರ್ಷ ದುಡಿದೆ. ದುಡ್ಡಿನ ವ್ಯಾಲ್ಯೂ ಗೊತ್ತಾಗ್ಲಿ ಅಂತಾನೆ ನಮ್ಮ ತಂದೆ ಇಂಥ ಸ್ಟೆಪ್​ ತೆಗೆದುಕೊಂಡಿದ್ರು. ಸೋ ನಾನು ಅದಕ್ಕೆ ಚಾಲೆಂಜಿಂಗ್ ಆಗಿ ನಾನು ಏನು ಕೊಡ್ತೀರೋ ಕೊಡಿ ಅದು ಏನು ಮಾಡ್ಬೇಕೋ ಹೇಳಿ ಮಾಡ್ತೀನಿ ಅಂತ ನಾನು ರೆಡಿ ಆಗಿದ್ದೆ ಎಂದಿದ್ದಾರೆ.

46
ಬಿಜಿನೆಸ್​ ಲಾಸ್​
Image Credit : Google

ಬಿಜಿನೆಸ್​ ಲಾಸ್​

ಅದಾದ ಬಳಿಕ ಬಿಸಿನೆಸ್​ಗೆ ಕೈ ಹಾಕಿದೆ. ಅದು ಲಾಸ್ ಆಯ್ತು. ಸಿಮೆಂಟ್ ಬಿಸಿನೆಸ್ ಆಗಿತ್ತು ಅದು, ಆರು ತಿಂಗಳು ಚೆನ್ನಾಗಿಯೇ ನಡೆಯಿತು. ಕಮಿಟ್ಮೆಂಟ್ ಜಾಸ್ತಿ ಇತ್ತು. ಸೋ ಎಲ್ಲಾನು ಬಿಟ್ಟುಬಿಟ್ಟೆ ಎಂದಿದ್ದಾರೆ ರಾಣವ್​.

56
ಸೆಂಟ್ರಲ್​ ಜೈಲಿಗೆ ಹೋದೆ
Image Credit : Chandan K Shetty Instagram

ಸೆಂಟ್ರಲ್​ ಜೈಲಿಗೆ ಹೋದೆ

ಆದರೆ ಆ ಸಂದರ್ಭದಲ್ಲಿ ಕಾವೇರಿ ಗಲಾಟೆ ನಡೆಯುತ್ತಿತ್ತು. ಅಲ್ಲಿಗೆ ಹೋಗಿ ಸೆಂಟ್ರಲ್​ ಜೈಲು ಸೇರುವ ಸ್ಥಿತಿ ಬಂತು. ಅಲ್ಲೆಲ್ಲ ಹೋಗಿ ಇದ್ದು ಬಂದದ್ದು ಸುಮಾರು ಜನಕ್ಕೆ ಗೊತ್ತಿಲ್ಲ ಬಿಡಿ. ಆ ಸಮಯದಲ್ಲಿ ತುಲಾ ರಾಶಿಗೆ ಸಾಡೇಸಾತಿ ನಡೆಯುತ್ತಿತ್ತು. ನನ್ನ ಅಮ್ಮ ನನ್ನನ್ನು ಎಚ್ಚರಿಸುತ್ತಲೇ ಇದ್ದರು. ಆದರೆ ಅವೆಲ್ಲಾ ಏನೂ ಇಲ್ಲಮ್ಮ, ಸುಮ್​ಸುಮ್ನೆ ನಂಬಬೇಡ ಎಂದಿದ್ದೆ. ಆಮೇಲೆ ಗೊತ್ತಾಯ್ತು, ಜೈಲಿಗೆ ಸೇರಬೇಕಾಯ್ತು ಎಂದಿದ್ದಾರೆ ನಟ.

66
ಫೈನ್ ಡೇ ಡಿಸೈಡ್ ಮಾಡಿದೆ
Image Credit : Instagram

ಫೈನ್ ಡೇ ಡಿಸೈಡ್ ಮಾಡಿದೆ

ಎಲ್ಲಾ ಆದ ಮೇಲೆ ಒಂದು ಫೈನ್ ಡೇ ಡಿಸೈಡ್ ಮಾಡಿದೆ. ನನ್ನ ಬಣ್ಣದ ಬದುಕಿನ ಆಸೆ ಏನಿದೆ ಅದನ್ನು ಈಡೇರಿಸಿಕೊಳ್ಳೋಣ ಎಂದು. ಇಂಡಸ್ಟ್ರಿಗೆ ಹೋಗೋಣ ಅಂತ ಅಂದ್ಬಿಟ್ಟು ಒಂದು ದಿನ ಡಿಸೈಡ್ ಮಾಡಿದೆ. ನಂತರದ ಪಯಣವೂ ಅಷ್ಟು ಸುಲಭವಾಗಿರಲಿಲ್ಲ. ಸಾಕಷ್ಟು ಪ್ರಯತ್ನದ ಬಳಿಕ ಅಂತೂ ನನ್ನ ಆಸೆ ಈಡೇರಿದೆ. ಈಗ ಇಲ್ಲಿಯೇ ಮುಂದುವರೆದಿದ್ದೇನೆ ಎಂದಿದ್ದಾರೆ ನಟ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಅಮೃತಧಾರೆ
ಮದುವೆ
ಮನರಂಜನಾ ಸುದ್ದಿ
ಟಿವಿ ಶೋ
ಕನ್ನಡ ಧಾರಾವಾಹಿ

Latest Videos
Recommended Stories
Recommended image1
No 1 ಆಗಿ ಮೆರೆದಿದ್ದ ಜನಪ್ರಿಯ ಧಾರಾವಾಹಿ ಅಂತ್ಯ ಆಗ್ತಿದ್ಯಾ? ಹೀರೋ ಕ್ಲಾರಿಟಿ ಕೊಟ್ರು!
Recommended image2
ಮೌನ ಗುಡ್ಡೆಮನೆ ಬಳಿಕ 'ರಾಮಾಚಾರಿ’ಯ ನಾಯಕ ರಿತ್ವಿಕ್ ಕಿರುತೆರೆಗೆ ರೀ ಎಂಟ್ರಿ
Recommended image3
ಸತ್ತರೂ ಮುಖ ನೋಡಲ್ಲ-14 ವರ್ಷದಿಂದ ಬೀದಿಗೆ ಬಂದು ಜಗಳ ಆಡಿದ್ದ ಸ್ಟಾರ್‌ ನಟನ ಮನೆ ಸಮಸ್ಯೆ ಬಗೆಹರಿತು!
Related Stories
Recommended image1
Amruthadhaare ಜೈದೇವ್​- ಹಳೆ ಮಲ್ಲಿ ರಿಯಲ್​ ಮದ್ವೆ ಯಾವಾಗ, ಹೇಗೆ, ಎಲ್ಲಿ? ಜೋಡಿ ಹೇಳಿದ್ದೇನು
Recommended image2
Amruthadhaare ಜೈದೇವ್​ಗಾಗಿ ನಾನ್​ವೆಜ್​ ಮಾಡೋದ ಕಲಿತೆ: ನಾಚುತ್ತಲೇ ನಟಿ ರಾಧಾ ಭಗವತಿ ಹೇಳಿದ್ದೇನು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved