- Home
- Entertainment
- TV Talk
- Amruthadhaare Serial: ಬಲು ಕಿಲಾಡಿ ಈ ಅಜ್ಜಿ! ಕೊನೆ ಆಸೆ ಈಡೇರಿಸಿಕೊಳ್ತೇನಂತ ಸತ್ತೇ ಹೋಗೋದಾ? ಮಾಡಿದ್ದೇನು ನೋಡಿ!
Amruthadhaare Serial: ಬಲು ಕಿಲಾಡಿ ಈ ಅಜ್ಜಿ! ಕೊನೆ ಆಸೆ ಈಡೇರಿಸಿಕೊಳ್ತೇನಂತ ಸತ್ತೇ ಹೋಗೋದಾ? ಮಾಡಿದ್ದೇನು ನೋಡಿ!
ಶಕುಂತಲಾಳ ಭಯದಿಂದ ದೂರಾಗಿರುವ ಗೌತಮ್ ಮತ್ತು ಭೂಮಿಕಾರನ್ನು ಒಂದು ಮಾಡಲು, ಜೈದೇವ್‌ನಿಂದ ಮೋಸಹೋದ ಅಜ್ಜಿ ಸಾಯುವ ನಾಟಕವಾಡಿದ್ದಾಳೆ. ತನ್ನ ಕೊನೆಯಾಸೆಯ ನೆಪದಲ್ಲಿ ದಂಪತಿಯನ್ನು ಮತ್ತೆ ಒಂದು ಮಾಡಲು ಅಜ್ಜಿ ಪಣತೊಟ್ಟಿದ್ದು, ಈ ಪ್ಲ್ಯಾನ್ ಯಶಸ್ವಿಯಾಗುವುದೇ ಎಂದು ಕಾದುನೋಡಬೇಕಿದೆ.

ದಂಪತಿ ಒಂದು ಮಾಡುವಲ್ಲಿ ವಿಫಲ
ಅಮೃತಧಾರೆಯಲ್ಲಿ (Amruthadhaare) ಸದ್ಯ ಗೌತಮ್ ಮತ್ತು ಭೂಮಿಕಾರನ್ನು ಒಂದು ಮಾಡಲು ಎಲ್ಲರೂ ಪ್ರಯತ್ನಿಸಿ ಫೇಲ್ ಆದರು. ಶಕುಂತಲಾ ಭಯದಿಂದ ಭೂಮಿಕಾ ಗೌತಮ್ ಜೊತೆ ಬರಲು ರೆಡಿನೇ ಇಲ್ಲ. ಗೌತಮ್ಗೆ ಶಕುಂತಲಾ ಏನು ಮಾಡಿಬಿಟ್ಟಿಯಾಳೋ ಎನ್ನುವ ಭಯ.
ಅಜ್ಜಿ ಆಸ್ತಿ ಕಬಳಿಕೆ
ಅದೇ ಇನ್ನೊಂದೆಡೆ, ಅಜ್ಜಿಯ ಎಲ್ಲಾ ಆಸ್ತಿಗಳನ್ನು ಕಬಳಿಸಿ ಜೈದೇವ್ ಆಕೆಯನ್ನು ವೃದ್ಧಾಶ್ರಮಕ್ಕೆ ಕಳುಹಿಸಿದ್ದಾನೆ. ಅಜ್ಜಿಯ ಕಷಾಯದಲ್ಲಿ ನಿದ್ದೆ ಮಾತ್ರೆ ಬೆರೆಸಿ, ಹೆಬ್ಬೆರಳು ಅಚ್ಚು ಹಾಕಿಸಿಕೊಂಡು ಆಸ್ತಿ ಲಪಟಾಯಿಸಿದ್ದಾನೆ.
ಆನಂದ್ಗೆ ವಿಷ್ಯ ತಿಳಿಸಿದ ಲಕ್ಷ್ಮೀಕಾಂತ
ಈ ವಿಷ್ಯ ಮಾವ ಲಕ್ಷ್ಮೀಕಾಂತನಿಂದ ಆನಂದ್ಗೆ ಗೊತ್ತಾಗಿದೆ. ಅಜ್ಜಿಯನ್ನು ಹುಡುಕಿ ಅವರು ವೃದ್ಧಾಶ್ರಮಕ್ಕೆ ಹೋಗಿದ್ದಾರೆ. ಆಮೇಲೆ ಅಜ್ಜಿಗೂ ಗೌತಮ್ ಮತ್ತು ಭೂಮಿಕಾ ವಿಷಯ ತಿಳಿದಿದೆ.
ಲವ್ ಅಜ್ಜಿ
ಅಜ್ಜಿ ಅಂದ್ರೆ ಸುಮ್ಮನೇ ಅಲ್ಲ. ಈ ಮೊದಲೂ ಇವರಿಬ್ಬರನ್ನು ಒಂದು ಮಾಡಿದ್ದು ಇದೇ ಅಜ್ಜಿ. ಈಗಲೂ ಒಂದು ಮಾಡುವ ಪಣ ತೊಟ್ಟಿದ್ದಾಳೆ.
ಸಾಯುವ ನಾಟಕ
ಸಾಯುವ ಹಾಗೆ ನಾಟಕ ಮಾಡಿದ್ದಾಳೆ. ಭೂಮಿಕಾ ಮತ್ತು ಗೌತಮ್ಗೆ ಕರೆ ಮಾಡಿ ಅಜ್ಜಿಯ ಕೊನೆಯ ಆಸೆ ಈಡೇರಿಸಲು ಬನ್ನಿ ಎಂದು ಹೇಳುವಂತೆ ಆನಂದ್ಗೆ ಹೇಳಿದ್ದಾಳೆ.
ಇಬ್ಬರೂ ಬರೋದು ಗ್ಯಾರೆಂಟಿ
ಅಜ್ಜಿ ಎಂದರೆ ಇಬ್ಬರಿಗೂ ಪ್ರೀತಿ. ಆಕೆ ಸಾಯುವ ಹಂತದಲ್ಲಿ ಇದ್ದಾಳೆ ಎಂದು ತಿಳಿದರೆ ಇಬ್ಬರ ಕಥೆಯೂ ಅಷ್ಟೇ. ಅಜ್ಜಿಯ ಕೊನೆಯ ಆಸೆಯ ನೆಪದಲ್ಲಿ ಗೌತಮ್ ಮತ್ತು ಭೂಮಿಕಾ ಒಂದಾಗಲೇ ಬೇಕಿದೆ.
ಸೀರಿಯಲ್ ಮುಗಿದಂತೆ!
ಎಲ್ಲರೂ ಒಂದಾದರೆ, ಎಲ್ಲರೂ ಸೇರಿ ಜೈದೇವ್ ಮತ್ತು ಶಕುಂತಲಾಗೆ ಬುದ್ಧಿ ಕಲಿಸುವಲ್ಲಿ ಸಂದೇಹವೇ ಇಲ್ಲ. ಒಟ್ಟಿಗೇ ಸೇರಿ ದೊಡ್ಡ ಪ್ಲ್ಯಾನ್ ಮಾಡಿ ವಿಲನ್ಗಳನ್ನು ಮುಗಿಸುವುದು ದಿಟ. ಅಷ್ಟಾದರೆ ಅಲ್ಲಿಗೆ ಸೀರಿಯಲ್ ಮುಗಿದಂತೆ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

