- Home
- Entertainment
- TV Talk
- Amruthadhaare ಟ್ವಿಸ್ಟ್ ಅಂದ್ರೆ ಇದಪ್ಪಾ- ಭಾಗ್ಯಮ್ಮ ರಾಕ್ಸ್, ಶಕುಂತಲಾ ಶಾಕ್ಸ್; ಭೂಮಿಕಾ ಸ್ಟೋರಿನೇ ಬೇರೆ!
Amruthadhaare ಟ್ವಿಸ್ಟ್ ಅಂದ್ರೆ ಇದಪ್ಪಾ- ಭಾಗ್ಯಮ್ಮ ರಾಕ್ಸ್, ಶಕುಂತಲಾ ಶಾಕ್ಸ್; ಭೂಮಿಕಾ ಸ್ಟೋರಿನೇ ಬೇರೆ!
ಅಮೃತಧಾರೆ ಧಾರಾವಾಹಿಯು ಕುತೂಹಲಕಾರಿ ಘಟ್ಟ ತಲುಪಿದ್ದು, ಮಗಳು ಬದುಕಿರುವ ಸತ್ಯ ತಿಳಿದ ಭೂಮಿಕಾ ದೇಶ ಬಿಡುವ ನಿರ್ಧಾರದಿಂದ ಹಿಂದೆ ಸರಿದಿದ್ದಾಳೆ. ಇನ್ನೊಂದೆಡೆ, ಶಕುಂತಲಾಳಿಗೆ ಶಾಕ್ ನೀಡುವಂತೆ ಭಾಗ್ಯಮ್ಮ ಮಾತನಾಡಿ, ಆಕೆಯ ಆಟ ಮುಗಿಯಿತು ಎಂದು ಸವಾಲು ಹಾಕಿದ್ದಾಳೆ.

ಕುತೂಹಲ ಘಟ್ಟಕ್ಕೆ
ಅಮೃತಧಾರೆ ಸೀರಿಯಲ್ (Amruthadhaare Serial) ಇದೀಗ ಕುತೂಹಲದ ಘಟ್ಟಕ್ಕೆ ಬಂದು ತಲುಪಿದೆ. ಇನ್ನೇನು ಭೂಮಿಕಾ ದೇಶವನ್ನು ಬಿಟ್ಟು ಹೋಗಬೇಕು ಎನ್ನುವಷ್ಟರಲ್ಲಿಯೇ ಆನಂದ್ ಬಂದು ಮಗಳು ಬದುಕಿರುವ ಸುದ್ದಿಯನ್ನು ಹೇಳಿದ್ದಾನೆ.
ಮಲ್ಲಿ ಬುದ್ಧಿ ಮಾತು
ಅದೇ ಇನ್ನೊಂದೆಡೆ ಮಲ್ಲಿ ಭೂಮಿಕಾಗೆ ಬುದ್ಧಿಮಾತು ಹೇಳಿ, ಗೌತಮ್ ಮಗುವನ್ನು ಹುಡುಕುತ್ತಿರುವ ದಾಖಲೆ ಕೊಟ್ಟಿದ್ದಾಳೆ. ಇದನ್ನೆಲ್ಲಾ ನೋಡಿದ ಮೇಲೆ ಭೂಮಿಕಾಗೆ ತಾನು ಮಾಡ್ತಿರೋದು ತಪ್ಪು ಎನ್ನಿಸಿದೆ. ಗೌತಮ್ ಬಳಿ ಎಲ್ಲಾ ವಿಷಯ ಹೇಳುವ ನಿರ್ಧಾರ ಮಾಡಿದ್ದಾಳೆ.
ಭಾಗ್ಯಮ್ಮನಿಗೆ ಚಾಲೆಂಜ್
ಅದೇ ಇನ್ನೊಂದೆಡೆ, ಶಕುಂತಲಾ ಭಾಗ್ಯಮ್ಮನಿಗೆ ಚಾಲೆಂಜ್ ಹಾಕಿ ನನ್ನೆಲ್ಲಾ ಬಂಡವಾಳವನ್ನು ಅತ್ತೆ ಎದುರು ಹೇಳು ನೋಡುವ ಎಂದು ಆಕೆಗೆ ಮಾತು ಬರುವುದಿಲ್ಲ ಎಂದು ಕೊಂಕಾಡಿದ್ದಾಳೆ.
ಶಕುಂತಲಾ ಶಾಕ್
ಆದರೆ ಭಾಗ್ಯಮ್ಮ, ಮಾತನಾಡಿ ಶಕುಂತಲಾ ಕೈತಿರುಗಿಸಿ, ಇನ್ನು ನಿನ್ನ ಆಟ ಮುಗಿಯಿತು ಎಂದಿದ್ದಾಳೆ. ಭಾಗ್ಯಮ್ಮ ಮಾತನಾಡಿದ್ದನ್ನು ನೋಡಿ ಶಕುಂತಲಾ ಶಾಕ್ ಆಗಿದ್ದಾಳೆ.
ಮುಂದೇನು?
ಹಾಗಿದ್ದರೆ ಭೂಮಿಕಾ- ಗೌತಮ್ ಒಂದಾಗ್ತಾರಾ, ಅಥ್ವಾ ಇನ್ನೇನೋ ಅನಾಹುತ ಆಗತ್ತಾ? ಅಷ್ಟಕ್ಕೂ ಅವರ ಆಸ್ತಿಯನ್ನೆಲ್ಲಾ ಜೈದೇವ ಬರೆಸಿಕೊಂಡು ಆಗಿದೆ. ಭಾಗ್ಯಮ್ಮನ ಪ್ರಾಣಕ್ಕೆ ಶಕುಂತಲಾ ಕಂಟಕ ತಂದು ಮತ್ತೇನಾದ್ರೂ ಮಾಡ್ತಾಳಾ ಎನ್ನುವುದನ್ನು ಕಾದು ನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

