ಸೀರಿಯಲ್‌ನಲ್ಲಿ ಬರೋ ಡಾಕ್ಟರಮ್ಮ ಹೀಗ್ಯಾಕೆ? ತಲೆಗೆ ಹುಳು ಬಿಟ್ಕೊಂಡ್ರು ವೀಕ್ಷಕರು!
Kannada Serial Doctor Role: ಒಬ್ಬರೇ ನಟಿ ಎರಡು ಧಾರಾವಾಹಿಗಳಲ್ಲಿ ವೈದ್ಯೆಯಾಗಿ ನಟಿಸುತ್ತಿದ್ದಾರೆ. ಆದರೆ, ಒಂದು ಧಾರಾವಾಹಿಯಲ್ಲಿ ಸಕಾರಾತ್ಮಕ ಮತ್ತು ಇನ್ನೊಂದರಲ್ಲಿ ನಕಾರಾತ್ಮಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದು ವೀಕ್ಷಕರಲ್ಲಿ ಗೊಂದಲ ಮೂಡಿಸಿದೆ.

ಒಂದು ವಾಹಿನಿ ಅಂದ್ರೆ ಅಲ್ಲಿರುವ ಕಲಾವಿದರು ಒಂದು ಧಾರಾವಾಹಿಯಿಂದ ಮತ್ತೊಂದು ಧಾರಾವಾಹಿಗಳಿಗೆ ಹೋಗಿ ನಟಿಸಿ ಬರುತ್ತಾರೆ. ವಿಶೇಷ ದಿನ, ಮದುವೆ ಸಂಚಿಕೆಗಳಲ್ಲಿ ಗೆಸ್ಟ್ ಆಗಿ ಬೇರೆ ಧಾರಾವಾಹಿ ಕಲಾವಿದರು ಬರುತ್ತಿರುತ್ತಾರೆ.
ಕೆಲವೊಂದು ಸಾಮಾನ್ಯ ಪಾತ್ರಗಳು ಮಾತ್ರ ಧಾರಾವಾಹಿಗಳಲ್ಲಿ ಬದಲಾಗಲ್ಲ. ಇದೀಗ ಎರಡು ಧಾರಾವಾಹಿಗಳಲ್ಲಿ ವೈದ್ಯರಾಗಿ ಒಬ್ಬರೇ ನಟಿಸುತ್ತಿದ್ದಾರೆ. ಆದರೆ ಎರಡೂ ಧಾರಾವಾಹಿಗಳಲ್ಲಿ ವೈದ್ಯರನ್ನು ಎರಡು ಶೇಡ್‌ಗಳಲ್ಲಿ ತೋರಿಸಲಾಗಿದೆ.
ಝೀ ಕನ್ನಡದಲ್ಲಿ ಪ್ರಸಾರವಾಗುವ ಅಮೃತಧಾರೆ ಮತ್ತು ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ವೈದ್ಯೆಯಾಗಿ ನಟಿಸುತ್ತಿರುವ ಕಲಾವಿದೆ ಒಬ್ಬರೇ. ಲಕ್ಷ್ಮೀ ನಿವಾಸದಲ್ಲಿ ಈ ಒಳ್ಳೆಯ ವೈದ್ಯೆಯಾಗಿ ಕಾಣಿಸಿಕೊಂಡ್ರೆ, ಅಮೃತಧಾರೆಯಲ್ಲಿ ಕುತಂತ್ರಿ ಶಕುಂತಲಾ ಜೊತೆ ಈ ವೈದ್ಯೆ ಸೇರಿಕೊಂಡಿದ್ದಾರೆ.
ಚಿನ್ನುಮರಿ ಜಾಹ್ನವಿ ಗರ್ಭಿಣಿ ಎಂದು ತಿಳಿಯುತ್ತಲೇ ತನ್ನ ಮನೆಗೆಯೇ ವೈದ್ಯರನ್ನು ಕರೆಸಿಕೊಳ್ಳುತ್ತಿದ್ದನು. ಜಯಂತ್ ಮನೆಗೆ ಬರೋ ವೈದ್ಯೆ, ಜಾಹ್ನವಿಗೆ ಪೋಷಕರ ಆರೈಕೆ ಬೇಕು ಎಂದು ಹೇಳುತ್ತಲೇ ಬಂದಿದ್ದರು. ಗರ್ಭಪಾತವಾದಾಗಲು ಚಿನ್ನುಮರಿ ಬಗ್ಗೆ ವಿಶೇಷ ಕಾಳಜಿ ತೆಗೆದುಕೊಂಡಿದ್ದರು. ಹಾಗಾಗಿ ಇಲ್ಲಿ ವೈದ್ಯೆ ಪಾತ್ರದ ಬಗ್ಗೆ ಮೆಚ್ಚುಗೆ ಮಾತುಗಳು ಕೇಳಿ ಬಂದಿದ್ದವು.
ಇನ್ನು ಅಮೃತಧಾರೆಯಲ್ಲಿಯೂ ಇದೇ ಕಲಾವಿದೆ ವೈದ್ಯೆಯ ಪಾತ್ರದಲ್ಲಿ ನಟಿಸಿದ್ದಾರೆ. ಹಣದ ಆಸೆಗಾಗಿ ಶಕುಂತಲಾ ಮಾತು ಕೇಳಿ, ಭೂಮಿಕಾಗೆ ಮಕ್ಕಳಾಗಲ್ಲ ಎಂದು ಸುಳ್ಳು ರಿಪೋರ್ಟ್ ನೀಡಿದ್ದಾರೆ. ಇಲ್ಲಿ ನೆಗೆಟಿವ್ ರೋಲ್‌ನಲ್ಲಿ ನಟಿಸಿದ್ದಾರೆ.
ಈ ಎರಡು ಧಾರಾವಾಹಿ ವೀಕ್ಷಕರು ಒಬ್ಬರನ್ನೇ ಎರಡು ರೋಲ್‌ಗಳಲ್ಲಿ ತೋರಿಸುವ ನಮಗೆ ಕನ್ಫ್ಯೂಸ್ ಮಾಡ್ತಿದ್ದೀರಿ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಇದರ ಜೊತೆಯಲ್ಲಿ ಎರಡು ಧಾರಾವಾಹಿಯಲ್ಲಿ ಒಂದೇ ಪಾತ್ರವಾಗಿದ್ದರೂ, ಎರಡು ಶೇಡ್‌ಗಳಲ್ಲಿ ನಟಿಸುತ್ತಿರುವ ಕಲಾವಿದೆ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದ್ದಾರೆ.
ಇನ್ನು ಕಲರ್ಸ್ ಕನ್ನಡ ವಾಹಿನಿ ಯಾವುದೇ ಧಾರಾವಾಹಿಯಲ್ಲಿ ಮದುವೆ ಸೇರಿದಂತೆ ಇನ್ನಿತರ ಮಂಗಳಕಾರ ನಡೆದ್ರೆ ಅಲ್ಲಿಗೆ ಪುರೋಹಿತನಾಗಿ ರಾಮಾಚಾರಿಯೇ ಬರುತ್ತಾನೆ. ಸದ್ಯ ಯಜಮಾನ ಧಾರಾವಾಹಿಯಲ್ಲಿ ರಾಮಾಚಾರಿ ಮದುವೆ ಮಾಡಿಸುತ್ತಿದ್ದಾನೆ.