- Home
- Entertainment
- TV Talk
- ಬಾಲ್ಯದ ಗೆಳೆಯನ ಜೊತೆ ಹಸೆಮಣೆ ಏರಲು ರೆಡಿಯಾದ್ರು ಅಮೃತಧಾರೆ ನಟಿ…. ಮೇಘಾ ಶೆಣೈ Pre Wedding Photos
ಬಾಲ್ಯದ ಗೆಳೆಯನ ಜೊತೆ ಹಸೆಮಣೆ ಏರಲು ರೆಡಿಯಾದ್ರು ಅಮೃತಧಾರೆ ನಟಿ…. ಮೇಘಾ ಶೆಣೈ Pre Wedding Photos
ಅಮೃತಧಾರೆ ಧಾರಾವಾಹಿ ನಟಿ ಮೇಘಾ ಶೆಣೈ ಶೀಘ್ರದಲ್ಲಿ ಹಸೆಮಣೆ ಏರಲಿದ್ದಾರೆ. ಇತ್ತೀಚಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಮೇಘಾ ಶೆಣೈ, ಇದೀಗ ಪ್ರೀ ವೆಡ್ಡಿಂಗ್ ಫೋಟೊಶೂಟ್ ಮಾಡಿಸಿದ್ದು, ಸೋಶಿಯಲ್ ಮೀಡಿಯಾದಲ್ಲಿ ಫೋಟೊಗಳನ್ನು ಹಂಚಿಕೊಂಡಿದ್ದಾರೆ.

ಅಮೃತಧಾರೆ ನಟಿ
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ದಿವಾನ್ ತಂಗಿ ಸುಧಾ ಪಾತ್ರದಲ್ಲಿ ನಟಿಸುತ್ತಿದ್ದ ನಟಿ ಮೇಘಾ ಶೆಣೈ, ಶೀಘ್ರದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲು ತಯಾರಿ ನಡೆಸಿದ್ದಾರೆ.
ನಿಶ್ಚಿತಾರ್ಥ ಮಾಡಿಕೊಂಡಿದ್ದ ನಟಿ
ಮೇಘಾ ಶೆಣೈ ಮಂಗಳೂರಿನವರಾಗಿದ್ದು ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಹಲವಾರು ವರ್ಷಗಳಿಂದ ಕನ್ನಡ ಕಿರುತೆರೆಯಲ್ಲಿ ಗುರುತಿಸಿಕೊಂಡಿರುವ ಮೇಘಾ, ಆಗಸ್ಟ್ 21 ರಂದು ಭರತ್ ಸಿಂಗ್ ಜೊತೆ ಅದ್ದೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು.
ಪ್ರಿ ವೆಡ್ಡಿಂಗ್ ಫೋಟೊಶೂಟ್
ಇದೀಗ ವೈವಾಹಿಕ ಜೀವನಕ್ಕೆ ಕಾಲಿಡಲು ತಯಾರಿ ನಡೆಸಿರುವ ನಟಿ ಮೇಘಾ ಶೆಣೈ, ಪ್ರಿ ವೆಡ್ಡಿಂಗ್ ಫೋಟೊ ಶೂಟ್, ವಿಡಿಯೋ ಶೂಟ್ ಮಾಡಿಸಿಕೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಫೋಟೊಗಳನ್ನು ಶೇರ್ ಮಾಡಿದ್ದಾರೆ.
ಬಾಲ್ಯದ ಸ್ನೇಹಿತನೇ ಜೀವನ ಸಂಗಾತಿ
ಬಾಲ್ಯದ ಸ್ನೇಹಿತರಿಂದ ಹಿಡಿದು ಜೀವನ ಸಂಗಾತಿಗಳವರೆಗೆ - ನಮ್ಮ ಪ್ರಿ ವೆಡ್ಡಿಂಗ್ ಫೋಟೊ ಶೂಟ್, ನಾವು ಈ ರೀತಿ ಪೋಸ್ ನೀಡುವ ದಿನ ಬರುತ್ತದೆ ಎಂದು ಎಂದಿಗೂ ಊಹಿಸಿರಲಿಲ್ಲ ಎಂದು ಮೇಘಾ ಶೆಣೈ ಬರೆದುಕೊಂಡಿದ್ದಾರೆ.
ಮದುವೆ ಯಾವಾಗ?
ಮೇಘಾ ಶೆಣೈ ಇದುವರೆಗೂ ತಾವು ಮದುವೆಯಾಗುವ ಹುಡುಗನ ಕುರಿತಾಗಲಿ, ಅವರ ಹೆಸರು, ಕೆಲಸ ಕುರಿತಾಗಲೀ ಹಾಗೂ ಮದುವೆ ಯಾವಾಗ ಎನ್ನುವ ಕುರಿತಾಗಲಿ ಯಾವುದೇ ಮಾಹಿತಿ ನೀಡಿಲ್ಲ. ಇದೀಗ ಪ್ರಿ ವೆಡ್ಡಿಂಗ್ ಶೂಟ್ ಮಾಡಿಸಿದ್ದು, ಶೀಘ್ರದಲ್ಲೇ ಮದುವೆಯಾಗುವ ಸೂಚನೆ ನೀಡಿದ್ದಾರೆ.
ಮೇಘಾ ಶೆಣೈ ನಟಿಸಿದ ಧಾರಾವಾಹಿಗಳು
‘ಸುಂದರಿ' ಧಾರಾವಾಹಿಯ ಮೂಲಕ ನಟನೆ ಜರ್ನಿ ಶುರು ಮಾಡಿದ ಮೇಘಾ ಬಳಿಕ 'ಬ್ರಾಹ್ಮಿನ್ಸ್ ಕೆಫೆ', .ಜನುಮದ ಜೋಡಿ' ಧಾರಾವಾಹಿಯಲ್ಲಿ ಅಭಿನಯಿಸಿದರು. ನಂತ್ರ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ 'ಕಾವೇರಿ' ಧಾರಾವಾಹಿಯಲ್ಲಿ ವಿಲನ್ ಆಗಿ ಸದ್ದು ಮಾಡಿದರು.
ವಿಲನ್ ಆಗಿ ಫೇಮಸ್
ಇದಲ್ಲದೇ 'ಮಹಾದೇವಿ' ಧಾರಾವಾಹಿಯಲ್ಲಿ ಅಧಿಕಾರಿ ರಶ್ಮಿಯಾಗಿ, 'ರಕ್ಷಾಬಂಧನ' ಧಾರಾವಾಹಿಯಲ್ಲಿ ನಾಯಕನ ಪ್ರೇಯಸಿಯಾಗಿ, 'ಆರತಿಗೊಬ್ಬ ಕೀರ್ತಿಗೊಬ್ಬ' ಧಾರಾವಾಹಿಯಲ್ಲಿ ಕೀರ್ತಿ ಆಗಿ ಕಾಣಿಸಿಕೊಂಡಿದ್ದರು. ನಂತರ ಜೀವ ಹೂವಾಗಿದೆ ಧಾರಾವಾಹಿಯಲ್ಲಿ ನಟಿಸಿದ್ದರು. ಸದ್ಯ ಅಮೃತಧಾರೆಯಲ್ಲಿ ಸುಧಾ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ.