ಅಮೆರಿಕಾ ಅಮೆರಿಕಾ ನಟಿ ಹೇಮ ಪ್ರಭಾತ್ ಈವಾಗ ಏನ್ ಮಾಡ್ತಿದ್ದಾರೆ?
ಅಮೆರಿಕಾ ಅಮೆರಿಕಾ ಚಿತ್ರದ ಮೂಲಕ ಜನರ ಹೃದಯ ಗೆದ್ದಿದ್ದ ನಟಿ ಹೇಮ ಪ್ರಭಾತ್ ಕನ್ನಡ ಸೀರಿಯಲ್ ಗಳಲ್ಲೂ ನಟಿಸಿ ಸೈ ಎನಿಸಿದ್ದರು. ಆದರೆ ಈಗ ಈ ನಟಿ ಎಲ್ಲಿದ್ದಾರೆ?
ನೂರು ಜನ್ಮಕೂ ನೂರಾರೂ ಜನ್ಮಕೂ ಹಾಡು ಕೇಳಿದ್ರೆ ರಮೇಶ್ ಅರವಿಂದ್ ಮತ್ತು ಮುದ್ದು ಮುದ್ದಾದ ಚೆಲುವೆ ಹೇಮ ಪ್ರಭಾತ್ ಸಹ ನೆನಪಾಗುತ್ತಾರೆ. ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ಭೂಮಿ ಪಾತ್ರದಲ್ಲಿ ನಟಿಸಿ ಕರ್ನಾಟಕದ ಮನಸೂರೆಗೊಂಡಿದ್ದ ನಟಿ ಹೇಮಾ (Hema Prabath) ಈವಾಗ ಏನು ಮಾಡ್ತಿದ್ದಾರೆ?
ಸಿನಿಮಾದಲ್ಲಿ ನಟಿಸುವ ಮುನ್ನ ಇವರು ರೈತಯೋಧ ಎಂಬ ಸೀರಿಯಲ್ ನಲ್ಲಿ ನಟಿಸಿದ್ದರು. ಇದಾದ ನಂತರ ಅಮೆರಿಕಾ ಅಮೆರಿಕಾ(America America), ಗೋಲಿಬಾರ್, ದೊರೆ, ಸಂಭ್ರಮ, ರವಿಮಾಮ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಹೇಮಾ ಈ ಹಿಂದೆ 2019 ರಲ್ಲಿ ಕನ್ನಡ ಸೀರಿಯಲ್ ರಕ್ಷಾ ಬಂಧನದಲ್ಲಿ (Raksha Bandhan) ನಟಿಸಿದ್ದರು. ಸಿನಿಮಾ ರಂಗದಿಂದ ದೂರ ಇದ್ದ ನಟಿ ಸುಮಾರು 15 ವರ್ಷದ ಬಳಿಕ ರಕ್ಷಾ ಬಂಧನ ಮೂಲಕ ನಟನೆಗೆ ಕಮ್ ಬ್ಯಾಕ್ ಮಾಡಿದ್ದರು. ನಂತರ ನಟಿ ಮತ್ತೆ ನಟನಾ ಜಗತ್ತಿನಲ್ಲಿ ಕಾಣಿಸಿಕೊಳ್ಳಲೆ ಇಲ್ಲ.
ತಮ್ಮ ತಾಯ್ತನ ಅನುಭವಿಸುತ್ತಿದ್ದ ಕಾರಣ ಹಾಗೂ ಮಕ್ಕಳ ಜವಾಬ್ದಾರಿಯಿಂದಾಗಿ ನಟಿ ಹೇಮಾ ನಟನಾ ರಂಗದಿಂದ ಸುದೀರ್ಘ ವಿರಾಮ ತೆಗೆದುಕೊಂಡಿದ್ದರು. ರಕ್ಷಾಬಂಧನ ಸೀರಿಯಲ್ ನಲ್ಲಿ ಕಾಣಿಸಿಕೊಂಡ ಬಳಿಕ ಮತ್ತೆ ನಟಿ ಕಾಣಿಸಿಕೊಳ್ಳಲೇ ಇಲ್ಲ.
ಕಡಿಮೆ ಅವಧಿಯಲ್ಲಿ ಉತ್ತಮ ಚಿತ್ರಗಳನ್ನು ನೀಡಿ, ಜನರ ಮನಸ್ಸು ಗೆದ್ದಿದ್ದ ಈ ನಟಿ ಈವಾಗ ಏನು ಮಾಡ್ತಿದ್ದಾರೆ? ನಟನೆಯಿಂದ ದೂರವೇ ಉಳಿದಿರುವ ಹೇಮಾ ಪ್ರಭಾತ್ ತಮ್ಮ ವೈವಾಹಿಕ ಜೀವನದಿಂದ ಹೆಚ್ಚು ಸುದ್ದಿಯಾಗಿದ್ದರು.
ಸದ್ಯ ನಟಿ ಹೇಮಾ ರಂಗೋಲಿ ಚಿತ್ರದ ಹ್ಯಾಂಡ್ಸಮ್ ನಟ ಪ್ರಶಾಂತ್ ಜೊತೆ ಮದುವೆಯಾಗಿ ಸುಖ ದಾಂಪತ್ಯ ಜೀವನ ನಡೆಸುತ್ತಿದ್ದಾರೆ. ಇವರಿಗೆ ಇಬ್ಬರು ಮುದ್ದಾದ ಮಕ್ಕಳು ಕೂಡ ಇದ್ದಾರೆ. ಸದ್ಯ ಹೇಮಾ ತಮ್ಮ ಡ್ಯಾನ್ಸ್ ಕ್ಲಾಸ್ ನಲ್ಲಿ ಬ್ಯುಸಿಯಾಗಿದ್ದಾರೆ.
ಹೇಮಾ ಮತ್ತು ಅವರ ಪತಿ ಪ್ರಶಾಂತ್ ಇಬ್ಬರೂ ಸಹ ಭರತನಾಟ್ಯ ಡ್ಯಾನ್ಸರ್ ಆಗಿದ್ದು, ಇಬ್ಬರು ಜೊತೆಯಾಗಿ ಸೇರಿ ಸುಕೃತಿ ನಾಟ್ಯಾಲಯ ಎಂಬ ಡ್ಯಾನ್ಸ್ ಕ್ಲಾಸ್ ನಡೆಸುತ್ತಿದ್ದು,ಹಲವಾರು ಮಕ್ಕಳಿಗೆ ನೃತ್ಯ ಹೇಳಿಕೊಡುತ್ತಿದ್ದಾರೆ.
ಸೊಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ನಟಿ ತಮ್ಮ ಡ್ಯಾನ್ಸ್ ವಿಡಿಯೋಗಳನ್ನು, ಜೊತೆಗೆ ರೀಲ್ಸ್, ಫೋಟೊ ಗಳನ್ನು ಶೇರ್ ಮಾಡುತ್ತಿರುತ್ತಾರೆ. ಆ ಮೂಲಕ ಇವರು ಜನರಿಗೆ ಕನೆಕ್ಟ್ ಆಗಿದ್ದಾರೆ. ಜೊತೆಗೆ ಗಂಡನ ಜೊತೆಗಿನ ರೋಮ್ಯಾಂಟಿಕ್ ಡ್ಯಾನ್ಸ್ ವಿಡಿಯೋಗಳನ್ನು, ಡ್ಯಾನ್ಸ್ ವಿಡಿಯೋಗಳನ್ನು ಸಹ ಶೇರ್ ಮಾಡುತ್ತಿರುತ್ತಾರೆ.