- Home
- Entertainment
- TV Talk
- ಶಿಶಿರ್ ಶಾಸ್ತ್ರಿ ಫ್ಯಾಮಿಲಿ ಜೊತೆ Aishwarya Sindhogi ಡಿನ್ನರ್ ಡೇಟ್ : ‘AiShir’ ಫ್ಯಾನ್ಸ್ ಫುಲ್ ಖುಶ್
ಶಿಶಿರ್ ಶಾಸ್ತ್ರಿ ಫ್ಯಾಮಿಲಿ ಜೊತೆ Aishwarya Sindhogi ಡಿನ್ನರ್ ಡೇಟ್ : ‘AiShir’ ಫ್ಯಾನ್ಸ್ ಫುಲ್ ಖುಶ್
ಬಿಗ್ ಬಾಸ್ ಸೀಸನ್ 11ರಲ್ಲಿ ಸ್ಪರ್ಧಿಸಿದ್ದ ಶಿಶಿರ್ ಶಾಸ್ತ್ರೀ ಮತ್ತು ಐಶ್ವರ್ಯ ಸಿಂಧೋಗಿ (Aishwarya Sindhogi) ಅಲ್ಲಿಂದ ಹೊರ ಬಂದ ಬಳಿಕ ಸಿಕ್ಕಾಪಟ್ಟೆ ಕ್ಲೋಸ್ ಆಗಿದ್ದು, ಇದೀಗ ಶಿಶಿರ್ ತಂದೆ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅವರ ಫ್ಯಾಮಿಲಿ ಜೊತೆ ಡಿನ್ನರ್ ಮಾಡಿದ್ದು, ಸದ್ಯ ಫೋಟೊಗಳು ವೈರಲ್ ಆಗಿವೆ.

ಬಿಗ್ ಬಾಸ್ ಸೀಸನ್ 11
ಬಿಗ್ ಬಾಸ್ ಸೀಸನ್ 11 ರಲ್ಲಿ ಸ್ಪರ್ಧಿಗಳಾಗಿ ಭಾಗವಹಿಸಿದ್ದ ಐಶ್ವರ್ಯ ಸಿಂಧೋಗಿ ಮತ್ತು ಶಿಶಿರ್ ಶಾಸ್ತ್ರಿ ಅಲ್ಲಿಂದ ಹೊರ ಬಂದಮೇಲೆ ಜೊತೆಯಾಗಿಯೇ ಓಡಾಡುತ್ತಿದ್ದಾರೆ. ಇಬ್ಬರ ಮಧ್ಯೆ ಲವ್ವಿ ಡವ್ವಿ ಇದೆ ಎನ್ನುವ ಗುಸುಗುಸು ಕೂಡ ಎಲ್ಲೆಡೆ ಕೇಳಿ ಬರುತ್ತಿದೆ. ಆದರೆ ಜೋಡಿ ಈ ಮಾತನ್ನು ತಳ್ಳಿ ಹಾಕಿದ್ದರು.
ಶಿಶಿರ್ -ಐಶ್ವರ್ಯ
ಬಿಗ್ ಬಾಸ್ ಮನೆಯಿಂದ ಬಂದ ಮೇಲೆ ಈ ಜೋಡಿ ಜೊತೆಯಾಗಿ ಸಾಕಷ್ಟು ಟ್ರಾವೆಲ್ ಮಾಡಿದ್ದರು. ಈವಾಗಲೂ ಕೂಡ ಎಲ್ಲಾ ಕಡೆ ಇವರು ಜೊತೆಯಾಗಿಯೇ ಕಾಣಿಸಿಕೊಳ್ಳುತ್ತಾರೆ. ಆದರೆ ಪ್ರೀತಿಯ ಬಗ್ಗೆ ಮಾತ್ರ ಕನ್ಪರ್ಮ್ ಆಗಿಲ್ಲ. ನಮ್ಮ ನಡುವೆ ಅಂತದ್ದೇನಿಲ್ಲ, ಜಂಟಿಯಾಗುವ ಯೋಚನೆ ಸದ್ಯಕ್ಕಿಲ್ಲ. ಮುಂದೇನಾಗುತ್ತೆ, ದೇವರೇ ಬಲ್ಲ ಎಂದಿದ್ದರು.
ಶಿಶಿರ್ ತಂದೆ ಬರ್ತ್ ಡೇ
ಇದೀಗ ಶಿಶಿರ್ ತಂದೆಯ ಹುಟ್ಟುಹಬ್ಬ ನಿನ್ನೆ ನಡೆದಿದ್ದು, ಈ ಹಿನ್ನೆಲೆಯಲ್ಲಿ ಶಿಶಿರ್ ತಮ್ಮ ತಂದೆ-ತಾಯಿಯನ್ನು ಜೊತೆಯಾಗಿ ಹೊಟೇಲ್ ಗೆ ಕರೆದುಕೊಂಡು ಹೋಗಿ ಅಪ್ಪನ ಹುಟ್ಟುಹಬ್ಬದ ಡಿನ್ನರ್ ಪಾರ್ಟಿ ಮಾಡಿದ್ದರು.
ಸಾಥ್ ನೀಡಿದ ಐಶ್ವರ್ಯ
ಶಿಶಿರ್ ಶಾಸ್ತ್ರಿ ಕುಟುಂಬದ ಜೊತೆಗೆ ಐಶ್ವರ್ಯ ಸಿಂಧೋಗಿ ಸಹ ಕಾಣಿಸಿಕೊಂಡಿದ್ದು, ಫ್ಯಾಮಿಲಿ ಜೊತೆಯಲ್ಲಿ ಡಿನ್ನರ್ ಡೇಟ್ ಸಖತ್ ಆಗಿ ಎಂಜಾಯ್ ಮಾಡಿದ್ದಾರೆ. ಈ ಫೋಟೊಗಳನ್ನು ಐಶ್ವರ್ಯ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
ಫ್ಯಾಮಿಲಿ ಬಗ್ಗೆ ಏನ್ ಹೇಳಿದ್ರು ಐಶ್
ಐಶ್ವರ್ಯ ತಂದೆ-ತಾಯಿಯನ್ನು ಕೆಲವು ವರ್ಷಗಳ ಹಿಂದೆಯೇ ಕಳೆದುಕೊಂಡಿದ್ದಾರೆ. ಇದೀಗ ಶಿಶಿರ್ ಫ್ಯಾಮಿಲಿ ಜೊತೆ ಕಾಣಿಸಿಕೊಂಡ ಐಶ್ವರ್ಯ ‘ಒಗ್ಗಟ್ಟು, ನಗು, ಸಂಭಾಷಣೆ ಮತ್ತು ಉತ್ತಮ ಆಹಾರದ ಉತ್ಸಾಹ! ಜೀವನಕ್ಕೆ ಅರ್ಥ ಮತ್ತು ಗುಣಮಟ್ಟವನ್ನು ಸೇರಿಸುತ್ತಿರೋದು ನಿಜಾ ಎಂದಿದ್ದಾರೆ.
ಲಿವಿಂಗ್ ಟುಗೆದರ್ ರೂಮರ್ಸ್
ಈ ಹಿಂದೆ ಐಶ್ವರ್ಯ ಮತ್ತು ಶಿಶಿರ್ ಲಿಲಿಂಗ್ ನಲ್ಲಿದ್ದಾರೆ ಎನ್ನುವ ರೂಮರ್ಸ್ ಹರಡಿತ್ತು, ಅದಕ್ಕೆ ಶಿಶಿರ್ ಖಡಕ್ ಆಗಿಯೇ ಉತ್ತರ ನೀಡಿದ್ದರು. 'ಇಂಡಸ್ಟ್ರಿಗೆ ಬಂದಾಗಿನಿಂದ ಇಂತಹ ವಿಚಾರಗಳಿಗೆ ತಲೆಕೆಡಿಸಿಕೊಳ್ಳೋದನ್ನ ಬಿಟ್ಟೆ. ಮೊದಲು ಸ್ವಲ್ಪ ಮನಸ್ಸಿಗೆ ಹಾಕೋತಿದ್ದೆ. ಸಂಬಂಧ ಸೃಷ್ಟಿ ಮಾಡ್ತಾರೆ ಅಂದ್ರೆ ಅದು ಅವರಲ್ಲಿರೋ ಲೋಪ. ಯಾರ ಜೊತೆಗೆ ಯಾವ ಸಂಬಂಧ ಇದೆ ಅನ್ನೋ ಕ್ಲಾರಿಟಿ ನನಗಿದೆ. ಜನ ಅದಕ್ಕೆ ಬೇರೆ ಅರ್ಥ ಕೊಡೋದಕ್ಕೆ ಹೋದರೆ ಅದು ಅವರ ಸಮಸ್ಯೆ. ನಾನು ನಮ್ಮ ಮನೆಯಲ್ಲಿದ್ದೇನೆ, ಐಶ್ವರ್ಯ ಅವರ ಮನೆಯಲ್ಲಿದ್ದಾರೆ ಎಂದಿದ್ದರು.
AiShir ಫ್ಯಾನ್ಸ್ ಖುಷ್
ಇನ್ನು ಐಶ್ವರ್ಯ ಅವರು ಶಿಶಿರ್ ಶಾಸ್ತ್ರೀ ಅವರ ಫ್ಯಾಮಿಲಿ ಜೊತೆಗೆ ಇರೋದನ್ನು ನೋಡಿ AiShir ಫ್ಯಾನ್ಸ್ ಅಂತೂ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ಇವರಿಬ್ಬರು ಸದಾ ಹೀಗೆ ಜೊತೆಯಾಗಿರಬೇಕು. ಪರ್ಫೆಕ್ಟ್ ಫ್ಯಾಮಿಲಿ ಎಂದಿದ್ದಾರೆ.
ಏನು ಮಾಡ್ತಿದ್ದಾರೆ ಶಿಶಿರ್ -ಐಶ್ವರ್ಯಾ?
ಸದ್ಯ ಶಿಶಿರ್ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಗಂಧದಗುಡಿ’ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಇನ್ನು ಐಶ್ವರ್ಯಾ ಅವರಿಗೆ ತುಳು ಸಿನಿಮಾದಿಂದ ಆಫರ್ ಗಳು ಬಂದಿವೆ ಎನ್ನಲಾಗುತ್ತಿದೆ. ಕೆಲವು ಸೀರಿಯಲ್ ಗಳಲ್ಲೂ ಐಶ್ವರ್ಯ ಇತ್ತೀಚೆಗೆ ನಟಿಸಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

