ಸದ್ದಿಲ್ಲದೇ ವೈವಾಹಿಕ ಜೀವನಕ್ಕೆ ಕಾಲಿಟ್ಟ ‘ಯಾರೆ ನೀ ಮೋಹಿನಿ’ ನಟಿ Sushma Shekhar
ಲಕುಮಿ, ಯಾರೆ ನೀ ಮೋಹಿನಿ, ಗಿಣಿರಾಮ ಸೇರಿ ಹಲವಾರು ಧಾರಾವಾಹಿಗಳ ಮೂಲಕ ಜನಪ್ರಿಯತೆ ಪಡೆದಿದ್ದ ನಟಿ ಸುಷ್ಮಾ ಶೇಖರ್ ತಮ್ಮ ಬಹುಕಾಲದ ಗೆಳೆಯನ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದೀಗ ಮದುವೆ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಸುಷ್ಮಾ ಶೇಖರ್
ಕನ್ನಡ ಕಿರುತೆರೆಯಲ್ಲಿ ಬಾಲನಟಿಯಾಗಿ, ನಾಯಕಿಯಾಗಿ, ವಿಲನ್ ಆಗಿ ಮಿಂಚಿದ ನಟಿ ಸುಷ್ಮಾ ಶೇಖರ್ ತಮ್ಮ ಬಹು ಕಾಲದ ಗೆಳೆಯನ ಜೊತೆ ಇತ್ತೀಚೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು. ಸರಳ ಸಮಾರಂಭದಲ್ಲಿ ನಡೆದ ವಿವಾಹದ ಫೋಟೊಗಳನ್ನು ನಟಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಸದ್ದಿಲ್ಲದೆ ಮದುವೆಯಾದ ನಟಿ
ಸುಷ್ಮಾ ತಮ್ಮ ನಿಶ್ಚಿತಾರ್ಥದ ಬಗ್ಗೆ ಕೂಡ ಹೆಚ್ಚಾಗಿ ಸುದ್ದಿ ಮಾಡಿರಲಿಲ್ಲ. ಇದೀಗ ಮದುವೆಯನ್ನೂ ಸಹ ಸದ್ದಿಲ್ಲದೇ ಸರಳ ಸಮಾರಂಭದಲ್ಲಿ ಜನವರಿ 25ರಂದು ನಡೆದಿದ್ದು, ಇದೀಗ ಸುಂದರ ಕ್ಷಣಗಳ ಫೋಟೊಗಳನ್ನು ತಮ್ಮ ಇನ್’ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.
ಇಂದಿನಿಂದ “ನಾನು” ಅಲ್ಲ… “ನಾವು”
ಮದುವೆಯ ಫೋಟೊಗಳ ಜೊತೆಗೆ ಸುಷ್ಮಾ, ಇದು ಕೇವಲ ಮದುವೆಯಲ್ಲ, ಪ್ರೀತಿ, ಗೌರವ ಮತ್ತು ಒಗ್ಗಟ್ಟಿನಿಂದ ತುಂಬಿದ ಜೀವನದ ಆರಂಭ. ಎರಡು ಕುಟುಂಬಗಳ ಪವಿತ್ರ ಸಂಗಮ, ಎರಡು ಆತ್ಮಗಳ ಶಾಶ್ವತ ಸಂಬಂಧ. ಇಂದಿನಿಂದ “ನಾನು” ಅಲ್ಲ… “ನಾವು” ಎಂದು ಬರೆದುಕೊಂಡಿದ್ದಾರೆ.
ಅಯ್ಯಂಗಾರಿ ವೆಡ್ಡಿಂಗ್
ಚತುರ್ಥಿ ಫಾರ್ಮ್ ಹೌಸ್ ನಲ್ಲಿ ಸುಷ್ಮಾ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಸುಷ್ಮಾ ಕೆಂಪು ಮತ್ತು ನೀಲಿ ಬಣ್ಣದ ಸೀರೆ ಧರಿಸಿದ್ದು, ಅಯ್ಯಂಗಾರಿ ಶೈಲಿಯ ವಿವಾಹ ವಿಧಾನ ಇದಾಗಿದೆ. ಸುಷ್ಮಾ ಮದುವೆಯಾಗಿರುವ ಹುಡುಗನ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ.
ಸುಷ್ಮಾ ನಟಿಸಿದ ಧಾರಾವಾಹಿಗಳು
'ವೆಂಕಟೇಶ್ವರ ಮಹಿಮೆ' ಧಾರಾವಾಹಿಯ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟ ಸುಷ್ಮಾ ಶೇಖರ್. ನಂತರ 'ಕುಸುಮಾಂಜಲಿ' , 'ಲಕುಮಿ', ಕ’ಕನಕ’ ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸಿದ್ದರು. ನಂತರ ನಟನೆಯಿಂದ ಬ್ರೇಕ್ ತೆಗೆದುಕೊಂಡಿದ್ದ ಸುಷ್ಮಾ, ಓದಿನ ಕಡೆಗೆ ಗಮನ ಹರಿಸಿದ್ದರು. ಸುಷ್ಮಾ ಬಿಬಿಎ ಪದವಿಧರೆಯಾಗಿದ್ದಾರೆ. ಬಳಿಕ ‘ಯಾರೇ ನೀ ಮೋಹಿನಿ' ಎನ್ನುವ ದೆವ್ವದ ಸೀರಿಯಲ್ ನಲ್ಲಿ , 'ಜನನಿ' ಧಾರಾವಾಹಿಯಲ್ಲಿ ಭುವನೇಶ್ವರಿ ಪಾತ್ರದಲ್ಲಿ , 'ಗಿಣಿರಾಮ' ಧಾರಾವಾಹಿಯಲ್ಲಿ ನಾಯಕ ಶಿವರಾಮನ ಪ್ರೇಯಸಿ ನೇಹಾಳಾಗಿ ನಟಿಸಿದ್ದರು.
ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್
ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟಿವ್ ಆಗಿರುವ ಸುಷ್ಮಾಗೆ 122k ಫಾಲೋವರ್ಸ್ ಹೊಂದಿದ್ದು, ಡ್ಯಾನ್ಸ್ ಇಷ್ಟಪಡುವ ಇವರು ಹೆಚ್ಚಾಗಿ ತಮ್ಮ ಡ್ಯಾನ್ಸ್ ರೀಲ್ಸ್ ಮೂಲಕ ಸದ್ದು ಮಾಡುತ್ತಿರುತ್ತಾರೆ. ಇದೀಗ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟಿಗೆ ಅಭಿಮಾನಿಗಳು ಶುಭ ಕೋರುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

