- Home
- Entertainment
- TV Talk
- ಸದ್ದಿಲ್ಲದೇ ಎಂಗೇಜ್‌ಮೆಂಟ್ ಮಾಡಿಕೊಂಡ ‘ಲಕುಮಿ’, ‘ಯಾರೇ ನೀ ಮೋಹಿನಿ’ ನಟಿ Sushma Shekhar
ಸದ್ದಿಲ್ಲದೇ ಎಂಗೇಜ್‌ಮೆಂಟ್ ಮಾಡಿಕೊಂಡ ‘ಲಕುಮಿ’, ‘ಯಾರೇ ನೀ ಮೋಹಿನಿ’ ನಟಿ Sushma Shekhar
ಲಕುಮಿ, ಯಾರೆ ನೀ ಮೋಹಿನಿ, ಗಿಣಿರಾಮ ಸೇರಿ ಹಲವಾರು ಧಾರಾವಾಹಿಗಳಲ್ಲಿ ನಟಿಸುವ ಮೂಲಕ ಮನೆಮಾತಾಗಿದ್ದ ನಟಿ ಸುಷ್ಮಾ ಶೇಖರ್ ತಮ್ಮ ಗೆಳೆಯನ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿ ‘I said Yes’ ಎಂದಿದ್ದಾರೆ.

ಸುಷ್ಮಾ ಶೇಖರ್
ಕನ್ನಡ ಕಿರುತೆರೆಯ ಜನಪ್ರಿಯ ನಟಿ ಸುಷ್ಮಾ ಶೇಖರ್ ಅವರು ತಮ್ಮ ಗೆಳೆಯನ ಜೊತೆ ಹೊಸ ಜೀವನಕ್ಕೆ ಕಾಲಿಡಲು ಸಿದ್ಧರಾಗಿದ್ದು ಇದೀಗ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಕನ್ನಡ ಕಿರುತೆರೆ ನಟಿ
ಸುಷ್ಮಾ ಶೇಖರ್ ಕನ್ನಡ ಕಿರುತೆರೆ ಮತ್ತು ಹಿರಿತೆರೆಯಲ್ಲಿ ಬಾಲ ನಟಿಯಾಗಿ ಮಿಂಚಿದ್ದರು. ಬಾಲ್ಯದಲ್ಲಿ ನಿರಂತರವಾಗಿ ಸೀರಿಯಲ್, ಸಿನಿಮಾಗಳಲ್ಲಿ ನಟಿಸಿದ್ದ ಸುಷ್ಮಾ, ಬಳಿಕ ನಿಧಾನವಾಗಿ ಓದಿನ ಕಡೆಗೆ ಗಮನ ಹರಿಸಿದ್ದರು.
ಯಾರೇ ನೀ ಮೋಹಿನಿ
ಸುಷ್ಮಾ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಯಾರೇ ನೀ ಮೋಹಿನಿ' ಎನ್ನುವ ದೆವ್ವದ ಸೀರಿಯಲ್ ನಲ್ಲಿ ನಾಯಕಿ ಬೆಳ್ಳಿಯಾಗಿ ನಟಿಸಿದ್ದರು. ಸುಮಾರು ಐದಾರು ವರ್ಷಗಳ ಕಾಲ ಬೆಳ್ಳಿಯ ಪಾತ್ರದ ಮೂಲಕ ಜನಪ್ರಿಯತೆಯನ್ನು ಗಳಿಸಿದ್ದರು.
ಗಿಣಿರಾಮ ಸೀರಿಯಲ್
ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ, 'ಜನನಿ' ಧಾರಾವಾಹಿಯಲ್ಲಿ ಭುವನೇಶ್ವರಿ ಪಾತ್ರದಲ್ಲಿ ಕೂಡ ಸುಷ್ಮಾ ನಟಿಸಿದ್ದರು. ಜೊತೆಗೆ ಉತ್ತರ ಕರ್ನಾಟಕದ ಸೊಬಗಿನ 'ಗಿಣಿರಾಮ' ಧಾರಾವಾಹಿಯಲ್ಲಿ ನಾಯಕ ಶಿವರಾಮನ ಪ್ರೇಯಸಿ ನೇಹಾಳಾಗಿ ನಟಿಸಿದ್ದರು ಸುಷ್ಮಾ.
ಸೀರಿಯಲ್ ಗೆ ಎಂಟ್ರಿ
'ವೆಂಕಟೇಶ್ವರ ಮಹಿಮೆ' ಧಾರಾವಾಹಿಯ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟ ಸುಷ್ಮಾ ಶೇಖರ್. ನಂತರ 'ಕುಸುಮಾಂಜಲಿ' , 'ಲಕುಮಿ', ಕ’ಕನಕ’ ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸಿದ್ದರು. ನಂತರ ನಟನೆಯಿಂದ ಬ್ರೇಕ್ ತೆಗೆದುಕೊಂಡಿದ್ದ ಸುಷ್ಮಾ, ಓದಿನ ಕಡೆಗೆ ಗಮನ ಹರಿಸಿದ್ದರು. ಸುಷ್ಮಾ ಬಿಬಿಎ ಪದವಿಧರೆಯಾಗಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್
ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟಿವ್ ಆಗಿರುವ ಸುಷ್ಮಾಗೆ 122k ಫಾಲೋವರ್ಸ್ ಹೊಂದಿದ್ದು, ಡ್ಯಾನ್ಸ್ ಇಷ್ಟಪಡುವ ಇವರು ಹೆಚ್ಚಾಗಿ ತಮ್ಮ ಡ್ಯಾನ್ಸ್ ರೀಲ್ಸ್ ಮೂಲಕ ಸದ್ದು ಮಾಡುತ್ತಿರುತ್ತಾರೆ.
ತಮ್ಮ ಗೆಳೆಯನ ಜೊತೆ ನಿಶ್ಚಿತಾರ್ಥ
ಇದೀಗ ನಟಿ ನಿಶ್ಚಿತಾರ್ಥ ಮಾಡಿಕೊಂಡಿದ್ದು, He asked, I said yes—and just like that, my forever began” Grateful for a love that feels like home… ಎಂದು ಬರೆದುಕೊಂಡಿದ್ದಾರೆ. ಆದರೆ ಹುಡುಗನ ಕುರಿತು ಯಾವುದೇ ಮಾಹಿತಿ ಇಲ್ಲ. ಹುಡುಗ ಯಾರು? ಹೆಸರೇನು? ಉದ್ಯೋಗ ಏನು? ಎನ್ನುವ ಮಾಹಿತಿಯೂ ಲಭ್ಯವಿಲ್ಲ. ಜೊತೆಗೆ ನಟಿ ಕಾಮೆಂಟ್ ಸೆಕ್ಷನ್ ಕೂಡ ಆಫ್ ಮಾಡಿದ್ದಾರೆ.