ಕೊಡಗಿನ ಮಳೆಯಲ್ಲಿ ಮಿಂದೆದ್ದ ರಾಧಾ ಮಿಸ್‌ನಲ್ಲಿ ಆ ಬಿಟೌನ್ ನಟಿಯನ್ನ ಕಂಡ ಫ್ಯಾನ್ಸ್
ರಾಧಾ ಮಿಸ್ ಖ್ಯಾತಿಯ ನಟಿ ಶ್ವೇತಾ ಆರ್ ಪ್ರಸಾದ್ ಕೊಡಗಿನ ಮಳೆಯಲ್ಲಿ ಹೊಸ ಫೋಟೋಶೂಟ್ ಮಾಡಿಸಿಕೊಂಡಿದ್ದು, ಭತ್ತದ ಗದ್ದೆಯಲ್ಲಿ ಮನಮೋಹಕ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ನೆಟ್ಟಿಗರು ಶ್ವೇತಾ ಅವರ ಸೌಂದರ್ಯವನ್ನು ಹಾಡಿ ಹೊಗಳಿದ್ದಾರೆ.

ರಾಧಾ ಮಿಸ್ ಖ್ಯಾತಿಯ ನಟಿ ಶ್ವೇತಾ ಆರ್ ಪ್ರಸಾದ್ ಕೊಡಗಿನ ಮಳೆಯಲ್ಲಿ ಹೊಸ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಈ ಫೋಟೋಗಳನ್ನು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಭತ್ತದ ಗೆದ್ದೆಯಲ್ಲಿ ನಿಂತು ಶ್ವೇತಾ ಪ್ರಸಾದ್ ಬೇರೆ ಬೇರೆ ಪೋಸ್ ನೋಡಿ ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದಾರೆ. ಫೋಟೋಗಳಿಗೆ ಕಮೆಂಟ್ ಮಾಡಿರುವ ನೆಟ್ಟಿಗರು ನಟಿಯ ಸೌಂದರ್ಯವನ್ನು ಹಾಡಿ ಹೊಗಳಿದ್ದಾರೆ. ಕೆಲವರು ಶ್ವೇತಾ ಪ್ರಸಾದ್ ಅವರನ್ನು ಬಾಲಿವುಡ್ ನಟಿಗೆ ಹೋಲಿಸಿದ್ದಾರೆ.
ಫೋಟೋಗಳು ತುಂಬಾ ಸುಂದರವಾಗಿವೆ. ಮನಮೋಹಕವಾಗಿ ಕಾಣಿಸುತ್ತಿದ್ದೀರಿ. ಸೌಂದರ್ಯ ದೇವತೆ, ಸೂಪರ್ ಬ್ಯುಟಿಫುಲ್, ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ, ಹಾಟ್ ರಾಧಾ ಮಿಸ್ ಎಂದು ಕಮೆಂಟ್ ಮಾಡಿದ್ದಾರೆ. ಪ್ರದೀಪ ಯಾವ ಜನ್ಮದಲ್ಲಿ ಏನ್ ಪುಣ್ಯ ಮಾಡಿದ್ಯಾ, ಗುರು ದಿನಾಲು ದಸರಾ ದೀಪಾವಳಿ ಯುಗಾದಿ ಹಬ್ಬ ನಿನಗೆ ಎಂದು ಶ್ವೇತಾ ಪತಿಯನ್ನು ಅದೃಷ್ಟವಂತ ಎಂದು ಕರೆದಿದ್ದಾರೆ.
ನೆಟ್ಟಿಗರೊಬ್ಬರು ಶ್ವೇತಾ ಅವರನ್ನು ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರಿಗೆ ಹೋಲಿಕೆ ಮಾಡಿದ್ದಾರೆ. ತುಳು ನಾಡಿನ ಶಿಲ್ಪಾ ಶೆಟ್ಟಿ, ವಯಸ್ಸು 50 ಆದ್ರೂ ಇಂದಿಗೂ ಝೀರೋ ಫಿಗರ್ ಮೇಂಟೈನ್ ಮಾಡಿದ್ದಾರೆ.
ಶ್ವೇತಾ ಪ್ರಸಾದ್ ಕೊನೆಯದಾಗಿ ಅಮೃತಧಾರೆ ಸೀರಿಯಲ್‌ನಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಈ ಹಿಂದೆಯೂ ಹಲವು ಧಾರಾವಾಹಿಗಳಲ್ಲಿ ಶ್ವೇತಾ ಪ್ರಸಾದ್ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ.