ಸೀರೆಯುಟ್ಟು, ಕೈಯಲ್ಲಿ ಜಪಮಾಲೆ ಹಿಡಿದು…. ನೆಮ್ಮದಿ ಬಗ್ಗೆ ಏನು ಹೇಳಿದ್ರು ನಟಿ ರಜಿನಿ
ಹೊಸ ಧಾರಾವಾಹಿಯಲ್ಲಿ ವಿಲನ್ ಆಗಿ ಮಿಂಚಲಿರುವ ನಟಿ ರಜಿನಿ ಹೊಸ ಲುಕ್ ಹಾಗೂ ಹೊಸ ಮೋಟಿವೇಶನ್ ಲೈನ್ ನೊಂದಿಗೆ ಕಾಣಿಸಿಕೊಂಡಿದ್ದಾರೆ.

ರಜಿನಿ
ಕನ್ನಡ ಕಿರುತೆರೆಯಲ್ಲಿ ಅಮೃತವರ್ಷಿಣಿ (Amruthavarshini) ಧಾರಾವಾಹಿ ಮೂಲಕ ಎಂಟ್ರಿ ಕೊಟ್ಟು ಇವತ್ತಿನವರೆಗೂ ಕನ್ನಡ ವೀಕ್ಷಕರ ಪಾಲಿನ ಅಮೃತ ಆಗಿ ಜನಪ್ರಿಯತೆ ಪಡೆದ ನಟಿ ರಜಿನಿ.
ಹಲವು ಸೀರಿಯಲ್ ನಲ್ಲಿ ನಟನೆ
ರಜಿನಿ (Rajini) ಅವರು ಕಳೆದ ಹತ್ತು ವರ್ಷಗಳಲ್ಲಿ ಹಲವಾರು ಸೀರಿಯಲ್ ಗಳಲ್ಲಿ ನಟಿಸಿದ್ದಾರೆ. ರಿಯಾಲಿಟಿ ಶೋಗಳಲ್ಲೂ ಮಿಂಚಿದ್ದಾರೆ.
ಹಿಟ್ಲರ್ ಕಲ್ಯಾಣ
ರಜಿನಿ ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲೂ ನಟಿಸಿದ್ದು, ಆರಂಭದಲ್ಲಿ ಒಳ್ಳೆಯವರಾಗಿ, ಬಳಿಕ ವಿಲನ್ ಪಾತ್ರದಲ್ಲಿ ಮಿಂಚಿದ್ದರು.
ಹೊಸ ಸೀರಿಯಲ್ ನಲ್ಲೂ ವಿಲನ್
ಇದೀಗ ಮತ್ತೆ ಹಲವು ವರ್ಷಗಳ ಬಳಿಕ ಸ್ಟಾರ್ ಸುವರ್ಣ (Star Suvarna) ವಾಹಿನಿಗೆ ಎಂಟ್ರಿಕೊಟ್ಟಿದ್ದು, ಹೊಸ ಧಾರಾವಾಹಿಯಲ್ಲಿ ಖಡಕ್ ವಿಲನ್ ಆಗಿ ನಟಿಸಲಿದ್ದಾರೆ.
ನೀನಿರಲು ಜೊತೆಯಲ್ಲಿ
ನೀನಿರಲು ಜೊತೆಯಲ್ಲಿ ಎನ್ನುವ ಧಾರಾವಾಹಿಯಲ್ಲಿ ನಾಯಕನ ಅತ್ತಿಗೆಯಾಗಿ, ಖಡಕ್ ವಿಲನ್ ಆಗಿ ಮಿಂಚಲಿದ್ದಾರೆ.
ಸದ್ದು ಮಾಡಿದ ಪ್ರೊಮೋ
ಈಗಾಗಲೇ ಸೀರಿಯಲ್ ಪ್ರೊಮೋ (serial promo) ಬಿಡುಗಡೆಯಾಗಿದ್ದು, ನಟಿಯ ವಿಲನ್ ಲುಕ್ ಮನಗೆದ್ದಿದೆ. ಮತ್ತೆ ರಜನಿಯವರನ್ನು ಕಿರುತೆರೆಯಲ್ಲಿ ನೋಡಿ ಅಭಿಮಾನಿಗಳು ಖುಷೀಯಾಗಿದ್ದಾರೆ.
ಹೊಸ ಲುಕ್
ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ರಜಿನಿ, ಸೀರೆಯುಟ್ಟು, ಮಲ್ಲಿಗೆ ಹೂವು ಮುಡಿದು ಮುದ್ದಾಗಿ ಕಾಣಿಸಿಕೊಂಡಿದ್ದಾರೆ
ನಟಿ ಹೇಳಿದ್ದೇನು?
ತಮ್ಮ ಫೋಟೊ ಕ್ಯಾಪ್ಶನ್ ನಲ್ಲಿ ನಟಿ ಹಣ, ಹೆಸರು ಸಂಪಾದಿಸಿ, ನೋಡೊಕೆ ಚೆನ್ನಾಗಿರೊರೇ ಆತ್ಮಹತ್ಯೆ ಮಾಡಿಕೊಳ್ತಾರೆ. ಇದಕ್ಕೆ ಕಾರಣ ಏನು ಅನ್ನೋದನ್ನು ಕೂಡ ಹೇಳಿದ್ದಾರೆ.
ನೆಮ್ಮದಿ
ಅಂದರೆ,ಅವುಗಳಿಗಿಂತ ಅಂದರೆ ಹಣ, ಹೆಸರಿಗಿಂತ ದುಬಾರಿಯಾದದ್ದು ಏನೋ ಇದೆ ಅಂತಾಯ್ತು..ಅದೇ ನೆಮ್ಮದಿ... ಶುಭ ದಿನ ಎಂದಿದ್ದಾರೆ ನಟಿ
ನಟಿಯ ಅಂದಕ್ಕೆ ಫ್ಯಾನ್ಸ್ ಫಿದಾ
ನಟಿಯ ಫೋಟೊ ಹಾಗೂ ಕ್ಯಾಪ್ಶನ್ ಗೆ ಮೆಚ್ಚುಗೆ ಸೂಚಿಸಿದ ಜನ ರಂಜು ಮೇಡಮ್ ಮೂಗಿಗೆ ಒಂದು ಮುಗುತ್ತಿ ಇದ್ದಿದ್ರೆ ನಿಮ್ಮ ಬ್ಯುಟಿ ಇನ್ನು ಚಂದ ಕಾಣುತಿತ್ತು. ಕ್ಯಾಪ್ಶನ್ ಸೂಪರ್ ಅಂದಿದ್ದಾರೆ.