ಅತ್ತೂ ಅತ್ತೂ ಕೊನೆಗೆ ಪಾತ್ರಕ್ಕೆ ಗುಡ್ ಬೈ ಹೇಳಿದ ಕಾವ್ಯ ಶೈವ… ಬದಲಾದ್ರು ಕೆಂಡಸಂಪಿಗೆ ನಾಯಕಿ
ಕೆಂಡಸಂಪಿಗೆ ಧಾರಾವಾಹಿಯಲ್ಲಿ ಕಸರತ್ತು ಮಾಡಿ ಮಾಡಿ ಗೆಲುವು ಸಾಧಿಸಲು ಸಾಧ್ಯವಾಗದೇ ಅತ್ತೂ ಅತ್ತೂ ವೀಕ್ಷಕರನ್ನೇ ಸುಸ್ತು ಮಾಡಿದ್ದ ಸುಮನಾ ಪಾತ್ರ ಮಾಡುತ್ತಿದ್ದ ಕಾವ್ಯ ಶೈವ ಸೀರಿಯಲ್ ನಿಂದ ಹೊರಬಂದಿದ್ದಾರೆ.
ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ಕೆಂಡಸಂಪಿಗೆ ಧಾರಾವಾಹಿಯಲ್ಲಿ ನಾಯಕಿ ಸುಮನಾ ಪಾತ್ರದಲ್ಲಿ ನಟಿಸುತ್ತಿದ್ದವರು ಕಾವ್ಯ ಶೈವ. ಹೊಸ ಹೊಸ ತಿರುವು ಪಡೆದುಕೊಂಡ ಈ ಧಾರಾವಾಹಿ ಸದ್ಯ ರೋಚಕ ಹಂತ ತಲುಪಿತ್ತು. ಆದರೆ ಇದೀಗ ಹೊಸ ಟ್ವಿಸ್ಟ್ ಪ್ರೇಕ್ಷಕರಿಗೆ ಶಾಕ್ ನೀಡಿದೆ.
ತನ್ನ ಪ್ರೀತಿಯ ತಮ್ಮನ ಸಾವಿನ ಸೇಡು ತೀರಿಸಲು ಹೊರಟ ಸುಮನಾಳಿಗೆ ಸತ್ಯ ಏನು ಅನ್ನೋದು ಗೊತ್ತಾಗಿದೆ. ಆದರೆ ಯಾರಿಗೂ ಹೇಳದ ಪರಿಸ್ಥಿತಿ, ಪ್ರತಿಬಾರಿಯೂ ಗೆಲುವು ಸಾಧನದ್ದೆ ಆಗಿತ್ತು, ತಾನು ಅತ್ತೂ ಅತ್ತೂ ವೀಕ್ಷಕರನ್ನು ಅಳುವಂತೆ ಮಾಡಿದ ಸುಮನಾ ಪಾತ್ರಧಾರಿ ಕಾವ್ಯ ಶೈವ (Kavya Shaiva) ಇದೀಗ ಸತ್ಯವನ್ನು ಬಹಿರಂಗ ಮಾಡೋ ಮೊದಲೇ ಸೀರಿಯಲ್ ಪಾತ್ರದಿಂದ ಹೊರ ಬಂದಿದ್ದಾರೆ.
ಕಾವ್ಯಾ ಶೈವ ಯಾಕಾಗಿ ಈ ಪಾತ್ರದಿಂದ ಹೊರ ಬಂದಿದ್ದಾರೆ ಅನ್ನೋ ಕಾರಣ ಇನ್ನೂ ತಿಳಿದು ಬಂದಿಲ್ಲ. ಆದರೆ ಈಗಾಗಲೇ ಆ ಪಾತ್ರಕ್ಕೆ ಹೊಸ ಪಾತ್ರಧಾರಿ ಕೂಡ ಬಂದಾಗಿದೆ. ಈಗಾಗಲೇ ಶೂಟಿಂಗ್ ಆರಂಭವಾಗಿಯೂ ಆಗಿದೆ. ಆದರೆ ಇನ್ನಷ್ಟೆ ವೀಕ್ಷಕರಿಗೆ ಹೊಸ ಪಾತ್ರಧಾರಿಯ ಪರಿಚಯ ಆಗಬೇಕಿದೆ.
ಸದ್ಯ ಸೀರಿಯಲ್ ನಲ್ಲಿ ಸುಮನಾ ಅವರ ಕಿಡ್ನಾಪ್ ಆಗಿದೆ, ಹಾಗಾಗಿ ಹಲವು ದಿನಗಳಿಂದ ಸುಮನಾ ಅವರ ಹುಡುಕಾಟವೇ ನಡೆಯುತ್ತಿದೆ. ಇದರ ಮಧ್ಯೆ ಸಾಧನಾ ತಾನೇ ಸುಮನಾ ಕೊಲೆ ಮಾಡಿರೋದಾಗಿ ಕೂಡ ಹೇಳಿದ್ದಾಳೆ. ಆದರೆ ಈ ಕಿಡ್ನಾಪ್ ಟ್ವಿಸ್ಟ್ ಗೆ ಕಾರಣ ಸುಮನಾ ಪಾತ್ರದ ಬದಲಾವಣೆ.
ಸುಮನಾ ಪಾತ್ರದಲ್ಲಿ ನಟಿಸುತ್ತಿದ್ದ ಕಾವ್ಯ ಶೈವ ಅವರು ಇತ್ತೀಚೆಗೆ ತಮ್ಮ ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಒಂದನ್ನು ಶೇರ್ ಮಾಡುವ ಮೂಲಕ ಪಾತ್ರದಿಂದ ಹೊರ ಬರುವ ಬಗ್ಗೆ ಕ್ಲೂ ನೀಡಿದ್ದರು. ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಸುಮನಾ ಪಾತ್ರವನ್ನು ನಾನು ಇಷ್ಟಪಟ್ಟು ನಿರ್ವಹಿಸುತ್ತಿದ್ದೆ. ಧನ್ಯವಾದಗಳು ಎಂದಿದ್ದಾರೆ.
ಅಷ್ಟೇ ಅಲ್ಲ ‘ನಾನು ಇದಕ್ಕಿಂತ ಹೆಚ್ಚು ಕಷ್ಟಪಟ್ಟು ಕೆಲಸ ಮಾಡುವ ಮೂಲಕ ಇವತ್ತು ನಾನು ಪಡೆದುಕೊಂಡಿರುವ ಪ್ರೀತಿಗಿಂತ ಮತ್ತಷ್ಟು ಹೆಚ್ಚು ಪ್ರೀತಿ ಪಡೆಯುವ ಭರವಸೆ ಹೊಂದಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಸಹ ನಟರು ಸಹ ಕಾಮೆಂಟ್ ಮಾಡಿದ್ದು, ವಿ ವಿಲ್ ಮಿಸ್ ಯೂ ಎಂದು ಬರೆದಿದ್ದಾರೆ.
ಇನ್ನು ಈಗಾಗಲೇ ಸೀರಿಯಲ್ ನ ಟೈಟಲ್ ಕಾರ್ಡ್ ಬದಲಾಗಿದ್ದು, ಸುಮನಾ ಪಾತ್ರದಲ್ಲಿ ಈ ಹಿಂದೆ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜೇನು ಗೂಡು ಸೀರಿಯಲ್ ನಲ್ಲಿ ಪ್ರಾಚಿ ಪಾತ್ರದಲ್ಲಿ ನಟಿಸುತ್ತಿದ್ದ ನಟಿ ಈಗ ಸುಮನಾ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಇವರನ್ನು ಜನ ಹೇಗೆ ಸ್ವೀಕರಿಸುತ್ತಾರೆ ಕಾದು ನೋಡಬೇಕು.