ಸೌತ್ ಕೊರಿಯಾದಲ್ಲಿ ಸೀರೆಯುಟ್ಟು ಮಿಂಚಿದ ಇಶಿತಾ ವರ್ಷ….. BTS ಮೀಟ್ ಆಗಿ ಅಂತಿದ್ದಾರೆ ಜನ
ಅಗ್ನಿಸಾಕ್ಷಿಯಲ್ಲಿ ಮಾಯಾ ಪಾತ್ರದಲ್ಲಿ ಮಿಂಚಿದ ನಟಿ ಇಶಿತಾ ವರ್ಷ ಇದೀಗ ಕೊರಿಯಾಗೆ ತೆರಳಿ ಅಲ್ಲಿ ಸೀರೆಯುಟ್ಟು ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ.

ನಟಿ ಇಶಿತಾ ವರ್ಷ (Ishitha Varsha) ಕನ್ನಡಿಗರಿಗೆ ಚಿರಪರಿಚಿತ ನಟಿ, ಅಗ್ನಿಸಾಕ್ಷಿ ಸೀರಿಯಲ್ ನಲ್ಲಿ ಮಾಯಾ ಆಗಿ ನಟಿಸಿ ಜನಪ್ರಿಯತೆ ಪಡೆದಿದ್ದ ನಟಿ, ನಂತರ ಅಲ್ಲೊಂದು ಇಲ್ಲೊಂದು ಬಂದು ಹೋಗುವ ಪಾತ್ರಗಳಲ್ಲಿ ನಟಿಸಿದ್ದು ಬಿಟ್ಟರೆ, ಬೇರಾವ ಸೀರಿಯಲ್ ನಲ್ಲೂ ಕಾಣಿಸಿಕೊಂಡಿಲ್ಲ.
ರಾಜಾ ರಾಣಿ ಸೀಸನ್ 1 ರಲ್ಲಿ ಪತಿ ಮುರುಗಾನಂದರ ಜೊತೆ ಕಂಟೆಸ್ಟಂಟ್ ಆಗಿ ಭಾಗವಹಿಸಿದ್ದ ಇಶಿತಾ ರನ್ನರ್ ಅಪ್ ಕೂಡ ಆಗಿದ್ದರು. ಕೆಲವೊಂದು ರಿಯಾಲಿಟಿ ಶೋದಲ್ಲೂ ಕಾಣಿಸಿಕೊಂಡಿದ್ದರು. ಆದರೆ ಅವರು ಹೆಚ್ಚಾಗಿ ಸುದ್ದಿಯಾಗಿದ್ದು, ತಮ್ಮ ವೈಲ್ಡ್ ಲೈಫ್ ಫೋಟೋಗ್ರಾಫಿ, ಸಫಾರಿ ಮೂಲಕವೇ.
ಸದಾ ಟ್ರಾವೆಲ್, ವೈಲ್ಡ್ ಲೈಫ್ ಫೋಟೋಗ್ರಫಿ ಮಾಡುತ್ತಾ ದೇಶ ಸುತ್ತುತ್ತಿರುವ ಅಗ್ನಿಸಾಕ್ಷಿ ನಟಿ ಇಶಿತಾ ವರ್ಷ ಇದೀಗ ಕೊರಿಯಾಗೆ ತೆರಳಿದ್ದು, ಅಲ್ಲಿ 1ಡಿಗ್ರಿ ಸೆಲ್ಸಿಯಸ್ ನಲ್ಲಿ ಹಾಫ್ ಸಾರಿಯುಟ್ಟು ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಅದಕ್ಕೆ ಕನ್ನಡತಿ ಇನ್ ಸೌತ್ ಕೊರಿಯಾ (Kannadati in South Korea) ಎಂದು ಟ್ಯಾಗ್ ಲೈನ್ ಬೇರೆ ಕೊಟ್ಟಿದ್ದಾರೆ.
ತಾವು ಹಸಿರು ಬಣ್ಣದ ಲಂಗ ಬ್ಲೌಸ್ ಮತ್ತು ಕಪ್ಪು ಬಣ್ಣದ ದಾವಣಿ ತೊಟ್ಟು , ಮತ್ತು ಗೋಲ್ಡನ್ ಸೀರೆಯಲ್ಲಿ ವಿವಿಧ ಪೋಸ್ ನೀಡುವ ವಿಡಿಯೋ ಶೇರ್ ಮಾಡಿರುವ ಇಶಿತಾ ಕೊರಿಯನ್ನರಿಗೆ ನಮ್ಮ ಸಾಂಪ್ರದಾಯಿಕ ಉಡುಪನ್ನು ತೋರಿಸುವುದನ್ನು 1 ಡಿಗ್ರಿ ಸೆಲ್ಸಿಯಸ್ ಸಹ ತಡೆಯಲು ಸಾಧ್ಯವಾಗಲಿಲ್ಲ! ಎಂದು ಬರೆದುಕೊಂಡಿದ್ದಾರೆ.
ಇನ್ನು ಇಶಿತಾ ಅಭಿಮಾನಿಗಳು ಸಹ ಕೊರಿಯಾದಲ್ಲಿ ಅವರ ಟ್ರೆಡಿಶನಲ್ ಲುಕ್ ಶ್(Traditional Look) ನೋಡಿ ಖುಷಿ ಪಟ್ಟಿದ್ದಾರೆ. ಅದಕ್ಕಿಂತ ಹೆಚ್ಚಾಗಿ ಬಿಟಿಎಸ್ ಅಭಿಮಾನಿಗಳಿಂದಲೇ ತುಂಬಿರೋ ಭಾರತದಲ್ಲಿ ಜನರು ಮೇಡಂ ಸೌತ್ ಕೊರಿಯಾದಲ್ಲಿದ್ದೀರಾ… ಹಾಗಿದ್ರೆ ಬಿಟಿಎಸ್ ಆರ್ಮಿನ ಒಂದು ಸಲ ಭೇಟಿ ಮಾಡಿ ಬನ್ನಿ ಎಂದು ಸಹ ಹೇಳಿದ್ದಾರೆ.
ತಮ್ಮ ಸ್ಟೈಲಿಶ್ ಮತ್ತು ಬೋಲ್ಡ್ ಫೋಟೋಗ್ರಾಫಿ (Bold Photography) ಮೂಲಕವೇ ಇಂಟರ್ನೆಟ್ ನಲ್ಲಿ ಹೆಚ್ಚು ಸುದ್ದಿ ಮಾಡುತ್ತಿರುವ ಇಶಿತಾ ಕೊನೆಯದಾಗಿ ಪುಟ್ಟಕ್ಕನ ಮಕ್ಕಳು ಸೀರಿಯಲ್ ನಲ್ಲಿ ಸಹನಾ ಪರ ವಾದಿಸಲು ಬಂದಿದ್ದ ಲಾಯರ್ ಆಗಿ ನಟಿಸಿದ್ದರು, ಅದಕ್ಕೂ ಮುನ್ನ ಶ್ರೀಗೌರಿ ಧಾರಾವಾಹಿಯ ಒಂದೆರಡು ಎಪಿಸೋಡ್ ಗಳಲ್ಲೂ ನಟಿಸಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.