- Home
- Entertainment
- TV Talk
- ಕಣ್ಣಲ್ಲೇ ಕೊಲ್ತಿದ್ದಾಳೆ ಸುಂದರಿ… ಲಕ್ಷ್ಮಿಯ ಹೊಸ ಲುಕ್ ಗೆ ಅಭಿಮಾನಿಗಳ ಎದೆ ಬಡಿತ ಹೆಚ್ಚಿದೆ
ಕಣ್ಣಲ್ಲೇ ಕೊಲ್ತಿದ್ದಾಳೆ ಸುಂದರಿ… ಲಕ್ಷ್ಮಿಯ ಹೊಸ ಲುಕ್ ಗೆ ಅಭಿಮಾನಿಗಳ ಎದೆ ಬಡಿತ ಹೆಚ್ಚಿದೆ
ಲಕ್ಷ್ಮೀ ಬಾರಮ್ಮ ಮೂಲಕ ಖ್ಯಾತಿ ಪಡೆದ ಕನ್ನಡ ನಟಿ ಭೂಮಿಕಾ ರಮೇಶ್ ಹೊಸ ಫೋಟೊ ಶೂಟಲ್ಲಿ ಸಖತ್ ಸುಂದರಿಯಾಗಿ ಕಾಣಿಸುತ್ತಿದ್ದಾರೆ. ನಟಿಯ ಅಂದಕ್ಕೆ ಫ್ಯಾನ್ಸ್ ಮನ ಸೋತಿದ್ದಾರೆ.

ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿದ್ದ ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಲಕ್ಷ್ಮೀ ಪಾತ್ರದಲ್ಲಿ ಮಿಂಚಿದ ಚೆಲುವೆ ಭೂಮಿಕಾ ರಮೇಶ್. ಇತ್ತೀಚೆಗಷ್ಟೇ ನಟಿ ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಪೂಜಾ ಮದುವೆ ಸಂದರ್ಭದಲ್ಲಿ ರೀ ಎಂಟ್ರಿ ಕೊಟ್ಟಿದ್ದರು.
ಲಕ್ಷ್ಮೀ ಬಾರಮ್ಮ (Lakshmi Baramma serial) ಪ್ರಸಾರವಾಗುತ್ತಿರುವಾಗ ಜನರದ್ದು ಒಂದೇ ದೂರು ಇತ್ತು. ಲಕ್ಷ್ಮೀ ಸ್ಟೈಲ್ ಚೇಂಜ್ ಮಾಡಿ, ಹೇರ್ ಸ್ಟೈಲ್ ಬದಲಾಯಿಸಿ, ಲುಕ್ ಬದಲಾಯಿಸಿ ಎಂದು, ಆದರೆ ಲಕ್ಷ್ಮೀಯ ಆ ಪಾಪದ ಲುಕ್ ಆರಂಭದಿಂದ ಕೊನೆವರೆಗೂ ಕ್ಯಾರಿ ಮಾಡಲಾಗಿತ್ತು.
ಇದೀಗ ಲಕ್ಷ್ಮೀ ಆಲಿಯಾಸ್ ಭೂಮಿಕಾ ರಮೇಶ್ (Bhoomika Ramesh) ಹೊಸ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಸಿಂಪಲ್ ಆಗಿ ಕಪ್ಪು ಬಣ್ಣದ ಸೀರೆಯುಟ್ಟು, ಗುಂಗುರು ಕೂದಲು ಇಳಿಬಿಟ್ಟು ಎಷ್ಟು ಸಿಂಪಲ್ ಆಗಿ ಕಾಣಿಸ್ತಿದ್ದಾರೋ, ಅಷ್ಟೇ ಸ್ಟೈಲಿಶ್ ಆಗಿ ಕಾಣಿಸ್ತಿದ್ದಾರೆ ಭೂಮಿಕಾ.
ಭೂಮಿಕಾರ ಸೆಳೆಯುವ ಕಣ್ಣೋಟ, ಚಂದಕ್ಕೆ ಮನಸೋತಿರುವ ಅಭಿಮಾನಿಗಳು ಬ್ಯೂಟಿ, ಸುಂದರಿ, ಅಕ್ಕಮ್ಮನ ಸುಂದರಿ, ಎಲಿಗೆಂಟ್ ಲುಕ್, ನಿಮ್ಮ ಕಣ್ಣೋಟ ಕೊಲ್ಲುತ್ತಿದೆ, ಕನ್ನಡದ ಗೊಂಬೆ, ಗಾರ್ಜಿಯಸ್ ಎಂದು ಕಾಮೆಂಟ್ ಮಾಡಿದ್ದಾರೆ.
ಭೂಮಿಕಾ ತಮ್ಮ ಫೋಟೋಗಳ ಜೊತೆಗೆ ಸಂಪ್ರದಾಯದಲ್ಲಿ ಸುತ್ತುವರೆದಿದೆ, ನಂಬಿಕೆಯಲ್ಲಿ ಬೇರೂರಿದೆ. ಪ್ರತಿಯೊಂದು ಪ್ರಾರ್ಥನೆಯಲ್ಲಿ ಶಾಂತಿ ಇದೆ ಮತ್ತು ಪ್ರತಿಯೊಂದು ಮಡಿಲಲ್ಲಿ ಅನುಗ್ರಹವಿದೆ ಎಂದು ಬರೆದುಕೊಂಡಿದ್ದಾರೆ. ಅಂದ ಹಾಗೆ ಈ ಮುದ್ದಾದ ಫೋಟೊ ಶೂಟ್ ಮಾಡಿಸಿದ್ದು ಕುಸುಮತ್ತೆ ಮನೆಯಲ್ಲಿ, ಅಂದರೆ ಪದ್ಮಜಾ ರಾವ್ (Padmaja Rao) ಅವರ ಮನೆಯಲ್ಲಿ.
ಭೂಮಿಕಾ, ಲಕ್ಷ್ಮೀ ಬಾರಮ್ಮದಲ್ಲಿ ನಟಿಸುತ್ತಿರುವಾಗಲೇ ತೆಲುಗಿನಲ್ಲಿ ಮೇಘ ಸಂದೇಶಂ ಧಾರಾವಾಹಿಯಲ್ಲಿ ನಟಿಸುತ್ತಿದ್ದರು. ಈವಾಗಲೂ ಅದೇ ಸೀರಿಯಲ್ ನಲ್ಲಿ ಮುಂದುವರೆದಿದ್ದಾರೆ. ಈ ಧಾರಾವಾಹಿಯಲ್ಲಿ ನಾಯಕನಾಗಿ ಅಭಿನವ್ ವಿಶ್ವನಾಥನ್ (Abhinav Vishwanathan) ನಟಿಸುತ್ತಿದ್ದಾರೆ.