MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ಇಷ್ಟೊಂದು ಸುಂದರಿಯಾಗಿ ಕಂಡ್ರೆ ಹುಡುಗರ ಕಣ್ಣು ಬೀಳತ್ತೆ ನೋಡಪ್ಪಾ! ಮೋಡಿ ಮಾಡಿದ ನಟ ರಾಘವೇಂದ್ರ

ಇಷ್ಟೊಂದು ಸುಂದರಿಯಾಗಿ ಕಂಡ್ರೆ ಹುಡುಗರ ಕಣ್ಣು ಬೀಳತ್ತೆ ನೋಡಪ್ಪಾ! ಮೋಡಿ ಮಾಡಿದ ನಟ ರಾಘವೇಂದ್ರ

'ಮಜಾ ಭಾರತ' ಖ್ಯಾತಿಯ ನಟ ರಾಘವೇಂದ್ರ, ತಮ್ಮ ಸ್ತ್ರೀವೇಷದ ಮೂಲಕ 'ರಾಗಿಣಿ' ಎಂದೇ ಜನಪ್ರಿಯರಾಗಿದ್ದಾರೆ. ಇತ್ತೀಚೆಗೆ ನಟಿ ಕಲ್ಪನಾ ಅವರಂತೆ ಕಾಣಿಸಿಕೊಂಡು ಮೆಚ್ಚುಗೆ ಗಳಿಸಿದ ಇವರು, ಹೆಣ್ಣಿನ ವೇಷದಲ್ಲಿದ್ದಾಗ ತಮಗಾದ ಕಿರುಕುಳದ ಕಹಿ ಅನುಭವಗಳನ್ನು ಹಂಚಿಕೊಂಡಿದ್ದಾರೆ.

2 Min read
Author : Suchethana D
Published : Feb 02 2026, 05:56 PM IST
Share this Photo Gallery
  • FB
  • TW
  • Linkdin
  • Whatsapp
16
ರಾಘವೇಂದ್ರನೋ, ರಾಗಿಣಿಯೊ?
Image Credit : Instagram

ರಾಘವೇಂದ್ರನೋ, ರಾಗಿಣಿಯೊ?

ರಾಘವೇಂದ್ರ ಎನ್ನೋಕ್ಕಿಂತ ರಾಗಿಣಿ ಎಂದೇ ಫೇಮಸ್​ ಆದವರು 'ಮಜಾ ಭಾರತ' ಖ್ಯಾತಿಯ ನಟ. ಸ್ತ್ರೀವೇಷದಲ್ಲಿ ಹೆಣ್ಣುಮಕ್ಕಳನ್ನೂ ನಾಚಿಸುವ ಹಾಗೆ ನಟಿಸುವುದರಲ್ಲಿ ಎತ್ತಿದ ಕೈ ಯಾರದ್ದು ಎಂದು ಕೇಳಿದರೆ ಕಿರುತೆರೆ ವೀಕ್ಷಕರಿಗೆ ಮೊದಲಿಗೆ ನೆನಪಾಗುವುದು ರಾಘವೇಂದ್ರ. ರಾಗಿಣಿ ಎಂದೇ ಫೇಮಸ್​ ಆಗಿರೋ ಕಾಮಿಡಿ ಹೀರೋ ರಾಘು ಅಂದ್ರೆ ಒಂದು ಲೆವೆಲ್​ ಮೇಲೆಯೇ. ಶಿವಮೊಗ್ಗ ಜಿಲ್ಲೆಯ ಸಾಗರದವರಾದ ರಾಘವೇಂದ್ರ ಹುಡುಗಿ ಪಾತ್ರದ ಮೂಲಕವೇ ವೀಕ್ಷಕರ ಮನಸ್ಸು ಗೆದ್ದಿದ್ದಾರೆ, ಹಾಗೆ ಕದ್ದಿದ್ದಾರೆ ಕೂಡ. ಇವರು ಸ್ತ್ರೀವೇಷ ಹಾಕಿದರೆನೇ ನೋಡಲು ಸೊಗಸು ಎನ್ನುವಷ್ಟರ ಮಟ್ಟಿಗೆ ವೀಕ್ಷಕರು ಇವರನ್ನು ಹಾಗೆಯೇ ನೋಡಲು ಬಯಸುವುದು ಇದೆ.

26
ಮಿನುಗುತಾರೆ ಕಲ್ಪನಾ ರೂಪದಲ್ಲಿ...
Image Credit : Instagram

ಮಿನುಗುತಾರೆ ಕಲ್ಪನಾ ರೂಪದಲ್ಲಿ...

ಇದೀಗ ಇವರು ಮಿನುಗುತಾರೆ ಕಲ್ಪನಾ ಅವರ ರೀತಿಯಲ್ಲಿಯೇ ರೆಟ್ರೋಸ್ಟೈಲ್​ ಗೆಟಪ್​ನಲ್ಲಿ, ಬಾನಲ್ಲೂ ನೀನೆ, ಭುವಿಯಲ್ಲೂ ನೀನೇ ಹಾಡಿಗೆ ನಟಿ ಕಲ್ಪನಾ ಅವರಂತೆಯೇ ನಟಿಸಿದ್ದಾರೆ. ಇವರ ಈ ನಟನೆಗೆ ಅಭಿಮಾನಿಗಳು ಎಂದಿನಂತೆ ಫಿದಾ ಆಗಿದ್ದಾರೆ. ಕೆಲವರು ಇವರು ಪುರುಷ ಎನ್ನುವುದನ್ನೂ ತಿಳಿಯದೇ, ತುಂಬಾ ಚೆನ್ನಾಗಿ ಕಾಣಿಸುತ್ತೀರಿ ಮೇಡಂ ಎಂದೇ ಕಮೆಂಟ್​ ಹಾಕಿದ್ದಾರೆ. ಒಟ್ಟಿನಲ್ಲಿ ರಾಘವೇಂದ್ರ ಅವರು ಮತ್ತೊಮ್ಮೆ ಎಲ್ಲರ ಮನಸ್ಸನ್ನು ಹೆಣ್ಣಿನ ವೇಷದಲ್ಲಿ ಗೆದ್ದಿದ್ದಾರೆ.

Related Articles

Related image1
CCL ಪಂದ್ಯದಲ್ಲಿ Sudeep Team ಚಾಂಪಿಯನ್: ಕಪ್​ ಪಡೆಯಲು ಬಂದ ಕಿಚ್ಚನ ಭರ್ಜರಿ ಡಾನ್ಸ್​ ವಿಡಿಯೋ ವೈರಲ್
Related image2
ಕ್ಯಾಮೆರಾ ಎದುರೇ ಮಾಡರ್ನ್​ ಗರ್ಲ್​ನಿಂದ ಕೂರ್ಗಿ ಲೇಡಿಯಾದ Namruta Gowda! ಸೋ ಕ್ಯೂಟ್ ಎಂದ ಫ್ಯಾನ್ಸ್​
36
ನಟನ ಕಾಲೆಳೆದ ಫ್ಯಾನ್ಸ್​
Image Credit : Instagram

ನಟನ ಕಾಲೆಳೆದ ಫ್ಯಾನ್ಸ್​

ಇದೇ ವೇಳೆ, ಕೆಲವರು ಹೀಗೆ ಇಷ್ಟೊಂದು ಚೆನ್ನಾಗಿ ಡ್ರೆಸ್​ ಮಾಡಿಕೊಂಡರೆ ಅಜ್ಜ ಉಜ್ಜದೇ ಇರ್ತಾನಾ ಎಂದು ನಟನ ಕಾಲೆಳೆದಿದ್ದಾರೆ. ಇದಕ್ಕೆ ಕಾರಣವೂ ಇದೆ. ಅದೇನೆಂದರೆ, ರಾಘವೇಂದ್ರ ಅವರು ಹೆಣ್ಣು ವೇಷ ಧರಿಸಿದಾಗ ತಮಗೆ ಆಗಿದ್ದ ಕೆಲವು ಕೆಟ್ಟ ಅನುಭವಗಳ ಬಗ್ಗೆ ಈ ಹಿಂದೆ ಸಂದರ್ಶನವೊಂದರಲ್ಲಿ ಮಾತನಾಡಿದ್ದರು. ನೋಡಲು ಸುಂದರಿಯಂತೆ ಕಾಣುವ ರಾಘವೇಂದ್ರನನ್ನು ಹುಡುಗಿ ಎಂದೇ ತಿಳಿದು ಹಲವು ಕಡೆಗಳಲ್ಲಿ ಪುರುಷರು ಕಿರುಕುಳ ನೀಡಿದ್ದರ ಬಗ್ಗೆ ಹೇಳಿದ್ದರು.

46
ಉಜ್ಜಲು ಬಂದಿದ್ದ ಅಜ್ಜ
Image Credit : Instagram

ಉಜ್ಜಲು ಬಂದಿದ್ದ ಅಜ್ಜ

ಯಾವುದೋ ಷೋಗೆ ಹೋಗಿದ್ದಾಗ ಹೆಣ್ಣಿನ ವೇಷ ಹಾಕಿದ್ದರು. ಅದಾದ ಬಳಿಕ ಮುಂದಿನ ಷೋಗಾಗಿ ಅವರು ಅದೇ ವೇಷದಲ್ಲಿ ಕೋಣೆಯಲ್ಲಿ ಕುಳಿತು ಮುಂದಿನ ಷೋಗೆ ರೆಡಿಯಾಗುತ್ತಿದ್ದ ವೇಳೆ ಅಜ್ಜನೊಬ್ಬ ಬಂದು ನಿಧಾನವಾಗಿ ಅವರ ಕಾಲ ಮೇಲೆ ಕೈ ಹಾಕಿದನಂತೆ. ಆರಂಭದಲ್ಲಿ ಏನೋ ಸುಮ್ಮನೇ ಕೈ ತಾಕಿರಬೇಕು ಎಂದುಕೊಂಡರೆ, ಆ ಅಜ್ಜ ನಿಧಾನವವಾಗಿ ತೊಡೆಯ ಮೇಲೆ ಕೈಹಾಕಿ ಉಜ್ಜಲು ಬಂದನಂತೆ! ರಾಘವೇಂದ್ರ ಅವರಿಗೆ ಏನಾಗ್ತಿದೆ ಎಂದು ಗೊತ್ತಾಗಿ ಜೋರಾಗಿ, ಲೋ ನಿನಗೆ ಇರೋದೇ ನನಗೆ ಇರೋದು ಕಣೋ ಎಂದು ಕೆಟ್ಟ ಶಬ್ದದಲ್ಲಿ ಬೈದರಂತೆ!

56
ಕಾಲ್ಕಿತ್ತ ಅಜ್ಜ
Image Credit : Instagram

ಕಾಲ್ಕಿತ್ತ ಅಜ್ಜ

ಇವರ ದನಿ ಕೇಳಿ ಈತ ಪುರುಷ ಎಂದು ತಿಳಿಯುತ್ತಲೇ ಅಜ್ಜ ಅಲ್ಲಿಂದ ಕಾಲ್ಕಿತ್ತನಂತೆ. ಇಂಥ ಘಟನೆಗಳು ಆಗಾಗ್ಗೆ ಆಗುತ್ತಿರುತ್ತವೆ ಎಂದಿದ್ದಾರೆ ನಟ. ಅಂದಹಾಗೆ ರಾಘವೇಂದ್ರ ಅವರು ಮೊದಲಿಗೆ 'ಮಜಾ ಭಾರತ' ರಿಯಾಲಿಟಿ ಶೋನಲ್ಲಿ ಹುಡುಗಿ ಪಾತ್ರ ಮಾಡಿದರು. ಕೊನೆಗೆ ಇದಕ್ಕೇ ಡಿಮಾಂಡ್​ ಜಾಸ್ತಿಯಾಗಿ ಇವರನ್ನು ಅದೇ ವೇಷದಲ್ಲಿ ನೋಡಲು ವೀಕ್ಷಕರೂ ಬಯಸತೊಡಗಿದರು.

66
ತುಂಬಾ ಬೇಸರ
Image Credit : Instagram

ತುಂಬಾ ಬೇಸರ

ಇದರಿಂದ ಒಂದು ಹಂತದಲ್ಲಿ ರಾಘವೇಂದ್ರ ಅವರಿಗೆ ಬೇಸರವೂ ಆಗಿತ್ತಂತೆ. ಕೊನೆಗೆ 'ಗಿಚ್ಚಿ ಗಿಲಿಗಿಲಿ' ಷೋನಲ್ಲಿ ಪುರುಷನಾಗಿಯೇ ಕಾಣಿಸಿಕೊಳ್ಳುವ ಅವಕಾಶ ಸಿಕ್ಕಾಗ ಖುಷಿಯಾಯಿತು ಎಂದಿದ್ದಾರೆ. ಈ ಬಗ್ಗೆ ಅವರು ಹಿಂದೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಟಿವಿ ಶೋ
ಮನರಂಜನಾ ಸುದ್ದಿ
ರಿಯಾಲಿಟಿ ಶೋ
ನೃತ್ಯ

Latest Videos
Recommended Stories
Recommended image1
ನನ್ನನ್ನು Dim ಮಾಡೋಕೆ ಪ್ರಯತ್ನಿಸಿದ್ರು, ನಾನೇ Highlight ಆದೆ... Kavya Gowda ತಿರುಗೇಟು ಕೊಟ್ಟಿದ್ಯಾರಿಗೆ?
Recommended image2
Karna Serial: ಛೇ ಇದೇನಾಗ್ತಿದೆ ಇಲ್ಲಿ? ಕರ್ಣನ ಹೊಗಳಿ ಹೊಗಳಿ, ತನ್ನ ಹಳ್ಳ ತಾನೇ ತೋಡಿಕೊಳ್ತಾಳಾ ನಿಧಿ?
Recommended image3
ಗಿಲ್ಲಿ ನಟನಿಗೆ ರಾಜಯೋಗ; Bigg Boss Kannada 12 ಮುಗಿಯುತ್ತಿದ್ದಂತೆ ಕಂಡ ಕನಸು ಈಡೇರಿತು!
Related Stories
Recommended image1
CCL ಪಂದ್ಯದಲ್ಲಿ Sudeep Team ಚಾಂಪಿಯನ್: ಕಪ್​ ಪಡೆಯಲು ಬಂದ ಕಿಚ್ಚನ ಭರ್ಜರಿ ಡಾನ್ಸ್​ ವಿಡಿಯೋ ವೈರಲ್
Recommended image2
ಕ್ಯಾಮೆರಾ ಎದುರೇ ಮಾಡರ್ನ್​ ಗರ್ಲ್​ನಿಂದ ಕೂರ್ಗಿ ಲೇಡಿಯಾದ Namruta Gowda! ಸೋ ಕ್ಯೂಟ್ ಎಂದ ಫ್ಯಾನ್ಸ್​
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved