- Home
- Entertainment
- TV Talk
- ಮದ್ವೆಯಾದ 5 ತಿಂಗಳಿಗೆ ಗರ್ಭಿಣಿ ಎಂದು ತಿಳಿಯುತ್ತಿದ್ದಂತೆ ಸಿಡಿಲು ಬಡಿದಂತಾಯ್ತು: ಹಾಸ್ಯ ನಟ ಲೋಕೇಶ್ ಬಸವಟ್ಟಿ!
ಮದ್ವೆಯಾದ 5 ತಿಂಗಳಿಗೆ ಗರ್ಭಿಣಿ ಎಂದು ತಿಳಿಯುತ್ತಿದ್ದಂತೆ ಸಿಡಿಲು ಬಡಿದಂತಾಯ್ತು: ಹಾಸ್ಯ ನಟ ಲೋಕೇಶ್ ಬಸವಟ್ಟಿ!
ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿ ನಟ ಲೋಕೇಶ್ ಬಸವಟ್ಟಿ ಮತ್ತು ರಚನಾ. ಜನವರಿ,2023ರಲ್ಲಿ ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ.

ಕನ್ನಡ ಕಿರುತೆರೆ ಹಾಸ್ಯ ನಟ ಲೋಕೇಶ ಬಸವಟ್ಟಿ ಮತ್ತು ರಚನಾ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಖಾಸಗಿ ಸಂದರ್ಶನದಲ್ಲಿ ಮಾತನಾಡಿದ ಈ ಜೋಡಿ ತಮ್ಮ ಜರ್ನಿ ಬಗ್ಗೆ ಹಂಚಿಕೊಂಡಿದ್ದಾರೆ.
ನನಗೆ ರಚನಾ ಬಾಳಸಂಗಾತಿಯಾಗಿ ಸಿಕ್ಕಿರುವುದಕ್ಕೆ ಗೌರಿ ಪುರದ ಗಯ್ಯಾಳಿಗಳು ತಂಡಕ್ಕೆ ಧನ್ಯವಾದಗಳನ್ನು ಹೇಳಬೇಕು ಇಲ್ಲದಿದ್ದರೆ ಅವರು ಸಿಗುತ್ತಿರಲಿಲ್ಲ. ನಾವು ಒಬ್ಬರ ಬಗ್ಗೆ ಮತ್ತೊಬ್ಬರು ಅರ್ಥ ಮಾಡಿಕೊಂಡ ಘಟನೆಗಳ ಬಗ್ಗೆ ಹೇಳಲು ಏನೂ ಇಲ್ಲ ಪದಗಳು ಸಿಗುತ್ತಿಲ್ಲ' ಎಂದು ಲೋಕೇಶ ಬಸವಟ್ಟಿ.
ಲೋಕೇಶ್ ಹೇಳಿದ ತಕ್ಷಣ ರಚನಾ ನಾನು ಗರ್ಭಿಣಿಯಾಗಿರುವ ಕಾರಣ ತುಂಬಾ ಮೂಡ್ ಸ್ವಿಂಗ್ ಇರುತ್ತದೆ ಅವರು ಏನೀ ಹೇಳಿದಾಗ ನಾನು ರೆಸ್ಪಾಂಡ್ ಮಾಡಿರುವುದಿಲ್ಲ ಆ ರೀತಿ ಸಣ್ಣ ಮುಟ್ಟ ಸಲ ಮೂಡ್ ಮ್ಯಾಚಿಂಗ್ ಆಗುವುದಿಲ್ಲ.
ಒಂದು ವಿಚಾರ ನಾನು ಅರ್ಥ ಮಾಡಿಕೊಂಡಿರುವೆ ಐಪಿಎಲ್ ಸಮಯದಲ್ಲಿ ಅಥವಾ ಬ್ರೇಕಿಂಗ್ ನ್ಯೂಸ್ ಪ್ರಸಾರವಾಗುತ್ತಿರುವ ಸಮಯದಲ್ಲಿ ಮಾತ್ರ ತೊಂದರೆ ಕೊಡಬಾರದು ಅದು ಬಿಟ್ಟರೆ ಅವರು ನನ್ನ ಗಂಡ ಎನ್ನುತ್ತಾರೆ.
'ನನ್ನ ಪತ್ನಿ ಮಗು ತರ ತುಂಬಾ ಪ್ಲ್ಯಾನ್ ಮಾಡಿ ಜೀವನ ನಡೆಸುತ್ತಾರೆ. ನಾನು ನನ್ನ ಸಂಸಾರ ನನ್ನ ಫ್ಯಾಮಿಲಿ ಎಂದು ಪ್ರಾಮುಖ್ಯತೆ ನೀಡುತ್ತಾರೆ. ವಾರಕ್ಕೆ ಎರಡು ಸಲ ಬೆಡ್‌ಶೀಟ್ ಬದಲಾಯಿಸಬೇಕು ಸಣ್ಣ ಪುಟ್ಟ ವಿಚಾರದಲ್ಲಿ ಡಿಸಿಪ್ಲಿನ್ ಆಗಿರುತ್ತಾರೆ ಎಂದು ಲೋಕೇಶ್ ಹೇಳಿದ್ದಾರೆ.
'ನಾನು ಗರ್ಭಿಣಿ ಎಂದು ಹೇಳಿದ ತಕ್ಷಣದಲ್ಲಿ ತಲೆಯಲ್ಲಿ ಸಿಡಿಲು ಬಡಿದಂತಾಯ್ತು ವೃತ್ತಿಯಿಂದ ಬ್ರೇಕ್ ತೆಗೆದುಕೊಳ್ಳಬೇಕು ಅಂತ ಯೋಚನೆ ಬಂದು ಆದರೆ ಮನೆಯಲ್ಲಿ ವಿಚಾರ ತಿಳಿಯುತ್ತಿದ್ದಂತೆ ತುಂಬಾ ಖುಷಿ ಪಟ್ಟರು ಹೀಗಾಗಿ ತ್ಯಾಗ ಮಾಡಲು ಮುಂದಾದೆ.
ಹೆಣ್ಣು ಮಕ್ಕಳಿಗೆ ತಾಯಿತನವೇ ಒಂದು ಗಿಫ್ಟ್ ಅದನ್ನು ನಾನು ಎಂಜಾಯ್ ಮಾಡುತ್ತಿರುವ ಅಷ್ಟೇ ಅಲ್ಲ ನಾನು 30 ಆಗುವಷ್ಟರಲ್ಲಿ ಮಕ್ಕಳು ಕೈಗೆ ಬಂದಿರುತ್ತಾರೆ ಎಂದಿದ್ದಾರೆ ರಚನಾ.