ಸ್ವಿಮ್ಮಿಂಗ್ ಪೂಲ್‌ನಲ್ಲಿ ಲಯನ್ ಲುಕ್ ಕೊಟ್ಟ ಜೆಕೆ, ಮಾತಲ್ಲಿ ಖಡಕ್ ಲೋಡೆಡ್ ಗನ್ ಎಂದ ಅಭಿಮಾನಿ
ಕಿರುತೆರೆ ನಟ ಕಾರ್ತಿಕ್ ಜಯರಾಮ್ ಇನ್‌ಸ್ಟಾಗ್ರಾಂನಲ್ಲಿ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಸ್ವಿಮ್ಮಿಂಗ್ ಫೂಲ್‌ನಲ್ಲಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ
ಅಶ್ವಿನಿ ನಕ್ಷತ್ರ ಧಾರಾವಾಹಿಯ ಮೂಲಕ ಕಾರ್ತಿಕ್ ಜಯರಾಮ್ ಕರುನಾಡಿನ ಮನೆಮಾತಾಗಿದ್ದರು.ಅಶ್ವಿನಿ ನಕ್ಷತ್ರ ಧಾರಾವಾಹಿ ಬಳಿಕ ಹಿಂದಿಯ ಸಿಯಾ ಕೆ ರಾಮ್ (Siya Ke Ram) ಧಾರಾವಾಹಿಯಲ್ಲಿ ರಾವಣನಾಗಿ (Ravana Role) ಅಬ್ಬರಿಸಿದ್ದರು. ಈ ಮೂಲಕ ಹಿಂದಿ ಕಿರುತೆರೆಯಲ್ಲಿಯೂ ಗುರುತಿಸಿಕೊಂಡಿದ್ದಾರೆ.
ತಮ್ಮ ಕಟ್ಟುಮಸ್ತಾದ ಮೈಕಟ್ಟು, ಬೇಸ್ ವಾಯ್ಸ್, ತೀಕ್ಷ್ಣ ಕಣ್ಣೋಟದ ಮೂಲಕ ಅಪಾರ ಮಹಿಳಾ ಅಭಿಮಾನಿಗಳನ್ನು ಕಾರ್ತಿಕ್ ಜಯರಾಮ್ (Kartik Jayaram) ಹೊಂದಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿಯೂ ಜಿಮ್ ಮಾಡುತ್ತಿರುವ ಫೋಟೋಗಳನ್ನು ಅಪ್ಲೋಡ್ ಮಾಡುತ್ತಿರುತ್ತಾರೆ.ಸಾಮಾಜಿಕ ಜಾಲತಾಣದಲ್ಲಿ ಕಾರ್ತಿಕ್ ಜಯರಾಮ್ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ.
ಮೇ 25ರಂದು ಈಜುಕೊಳದಲ್ಲಿ ಕ್ಲಿಕ್ಕಿಸಿಕೊಂಡಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ.ಈ ಫೋಟೋಗೆ 1.5 ಸಾವಿರಕ್ಕೂ ಅಧಿಕ ಲೈಕ್ಸ್ ಬಂದಿದ್ದು, 40ಕ್ಕೂ ಹೆಚ್ಚು ಕಮೆಂಟ್‌ಗಳು ಬಂದಿವೆ.ರಾಧಾ ಅಪರಂಜಿ ಅನ್ನೊ ಅಭಿಮಾನಿಯೊಬ್ಬರು ಲುಕ್‌ನಲ್ಲಿ ಲಯನ್,ಮಾತಲ್ಲಿ ಖಡಕ್ ಲೋಡೆಡ್ ಗನ್ ಎಂದು ಕಮೆಂಟ್ ಮಾಡಿದ್ದಾರೆ. ನಿಮ್ಮ ಫೋಟೋಗಳು ಇನ್‌ಸ್ಟಾಗ್ರಾಂನಲ್ಲಿ ಬೆಂಕಿ ಹಚ್ಚಿದೆ ಎಂದು ಫೈರ್ ಎಮೋಜಿ ಹಾಕಿದ್ದಾರೆ.
Kartik Jayaram
ಇನ್ನು ಬಹುತೇಕ ಅಭಿಮಾನಿಗಳು ವಾವ್, ನೀವು ನಮ್ಮ ಬಾಸ್, ಸೂಪರ್, ಸೆಕ್ಸಿ, ರಾಕಿಂಗ್, ಸ್ವೀಟ್ ಹ್ಯಾಂಡ್‌ಸಮ್, ನಮ್ಮ ಸೂಪರ್ ಹೀರೋ ಎಂದು ತರೇಹವಾರಿ ಕಮೆಂಟ್ ಮಾಡಿದ್ದಾರೆ. ಹಾರ್ಟ್, ಸ್ಮೈಲಿ, ಲವ್ ಸಿಂಬಲ್ ಗಳನ್ನು ಕಮೆಂಟ್‌ನಲ್ಲಿ ಹಾಕಿದ್ದಾರೆ. ಇನ್ನ ಕೆಲವರು ಲಂಕಾಸುರ ಅಂತಾನೂ ಬರೆದುಕೊಂಡಿದ್ದಾರೆ.
2013-15ರ ಅವಧಿಯಲ್ಲಿ ಪ್ರಸಾರಗೊಂಡ ಅಶ್ವಿನಿ ನಕ್ಷತ್ರದಲ್ಲಿ ಜೆ.ಕೃಷ್ಣ ಪಾತ್ರದಲ್ಲಿ ಜಯರಾಮ್ ಕಾರ್ತಿಕ್ ಕಾಣಿಸಿಕೊಂಡಿದ್ದರು. ಈ ಧಾರಾವಾಹಿಯಿಂದಾಗಿ ಕರುನಾಡಿನಲ್ಲಿ ಜೆಕೆ ಎಂಬ ಹೆಸರಿನಿಂದಲೇ ಕಾರ್ತಿಕ್ ಜಯರಾಮ್ ಅವರನ್ನು ಗುರುತಿಸಲಾಗುತ್ತದೆ. ಈ ಧಾರಾವಾಹಿಯ ಸೂಪರ್ ಸ್ಟಾರ್ ಪಾತ್ರಕ್ಕೆ ಅಭಿಮಾನಿಗಳು ಫಿದಾ ಆಗಿದ್ದರು.
Kartik Jayaram
2014ರಲ್ಲಿ ಬಿಡುಗಡೆಗೊಂಡ ಜಸ್ಟ್ ಲವ್ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೂ (Sandalwood Cinema) ಪಾದಾರ್ಪಣೆ ಮಾಡಿದ್ದರು. ಇದಾದ ಬಳಿಕ ಕೆಂಪೇಗೌಡ, ವಿಷ್ಣುವರ್ಧನ, ವರದನಾಯಕ, ಚಂದ್ರಿಕಾ, ಕೇರ್ ಆಫ್‌ಫುಟ್‌ಪಾತ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ಕಾರ್ತಿಕ್ ಜಯರಾಮ್ ನಟಿಸಿದ್ದಾರೆ
ಕನ್ನಡ ಬಿಗ್ ಬಾಸ್ ಸೀಸನ್ 5ರಲ್ಲಿಯೂ (Bigg Boss Kannada) ಕಾರ್ತಿಕ್ ಜಯರಾಮ್ ಸ್ಪರ್ಧಿಯಾಗಿದ್ದರು. ಈ ಶೋನಲ್ಲಿ ಎರಡನೇ ರನ್ನರ್ ಆಪ್ ಆಗಿದ್ದರು. 2020ರಲ್ಲಿ ತೆರೆಕಂಡಿದ್ದ ನಾಗಿಣಿ-2 ಧಾರಾವಾಹಿಯಲ್ಲಿ ಆದಿಶೇಷನ ಪಾತ್ರ ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿತ್ತು.