ನಿಮ್ಮ ಫೋನ್ ನಲ್ಲಿರುವ ಫೋಟೊ ಡಿಲೀಟ್ ಆಗಿದ್ದು, ಅದನ್ನು ಮತ್ತೆ ಪಡೆಯಲು ಬಯಸಿದರೆ ಈ ಆಯ್ಕೆಗಳನ್ನು ನೀವು ಟ್ರೈ ಮಾಡಿ ನೋಡಿ.
mobiles Jul 24 2026
Author: Pavna Das Image Credits:iSTOCK
Kannada
ಹೀಗೆ ಮಾಡಿ ನೋಡಿ
ಹೆಚ್ಚಿನ ಫೋನ್ ಗ್ಯಾಲರಿ ಆಪ್ಸ್ ಗಳಲ್ಲಿ ಒಂದು Recently Deleted ಅಥವಾ Trash ಫೋಲ್ಡರ್ ಇರುತ್ತದೆ ನೀವು ಈಗಷ್ಟೇ ಡಿಲೀಟ್ ಮಾಡಿದ ಫೋಟೋ ಅಥವಾ ವಿಡಿಯೋ ಅಲ್ಲಿ 30 ದಿನಗಳ ತನಕ ಸ್ಟೋರ್ ಆಗಿರುತ್ತದೆ
Image credits: Getty
Kannada
ಇಲ್ಲಿ 60 ದಿನಗಳವರೆಗೆ ಫೋಟೋಸ್ ಇರುತ್ತವೆ
ಗೂಗಲ್ ಫೋಟೋಸ್ ನಲ್ಲಿ Trash ಫೋಲ್ಡರ್ ಗೆ ಹೋದರೆ ಅಲ್ಲಿ 60 ದಿನಗಳ ತನಕ ನೀವು ಡಿಲೀಟ್ ಮಾಡಿದ ಫೋಟೋಸ್ ಹಾಗೆ ಇರುತ್ತದೆ. ಅದನ್ನ ನೀವು ರಿಕವರ್ ಮಾಡಬಹುದು
Image credits: Freepik
Kannada
ಈ ರೀತಿಯಾಗಿಯೂ ಫೋಟೊ ಮತ್ತೆ ಪಡೆಯಬಹುದು
ನೀವು google photos ನಲ್ಲಿ Library >Trash ಗೆ ಹೋಗಿ ಅಲ್ಲಿ ಯಾವ ಫೋಟೋ ಬೇಕೋ ಅದನ್ನು ಆಯ್ಕೆ ಮಾಡಿ ರಿಸ್ಟೋರ್ ಮಾಡಬಹುದು.
Image credits: Freepik
Kannada
ಈ ಆಪ್ ಡೌನ್ ಲೋಡ್ ಮಾಡಿ
ಒಂದು ವೇಳೆ ಫೋಟೋ ‘Recently Deleted ‘ ಅಥವಾ ‘Trash ‘ ಫೋಲ್ಡರ್ ನಲ್ಲಿ ಸಿಗದೇ ಇದ್ದರೆ, ನೀವು Google Play store ಗೆ ಹೋಗಿ ‘DiskDigger’ ನಂತಹ ರಿಕವರಿ ಅಪ್ಸ್ ಡೌನ್ಲೋಡ್ ಮಾಡಬಹುದು.
Image credits: Getty
Kannada
ನಿಮಿಷದಲ್ಲಿ ಡಿಲೀಟ್ ಆದ ಫೈಲ್ ಸಿಗುತ್ತೆ
ಈ ಆಪ್ ಇನ್ಸ್ಟಾಲ್ ಮಾಡಿ, ನೀವು ಫೋನಿನ ಸ್ಟೋರೇಜ್ ಸ್ಕ್ಯಾನ್ ಮಾಡಬಹುದು ಹಾಗೂ ಡಿಲೀಟ್ ಆಗಿರುವ ಫೋಟೋಗಳನ್ನು ಹುಡುಕಿ ರಿಕವರಿ ಮಾಡಬಹುದು.
Image credits: Getty
Kannada
ಇದು ಫ್ರೀ ಆಪ್
ಕೆಲವು ಅಪ್ಸ್ ಪೈಡ್ (ಹಣ ಪಾವತಿ ಮಾಡಬೇಕಾಗುತ್ತದೆ) ಆಗಿರುತ್ತದೆ. ಆದರೆ diskdigger ಫ್ರೀ ಆಗಿ ಚೆನ್ನಾಗಿ ರಿಕವರಿ ಮಾಡುತ್ತದೆ. ಯಾವುದೇ ಸಮಸ್ಯೆ ಇಲ್ಲದೇ ಡಿಲೀಟೆಡ್ ಫೋಟೊ ಮತ್ತೆ ಪಡೆಯಬಹುದು.
Image credits: iSTOCK
Kannada
ಎಲ್ಲಾ ಫೋಟೊ ಮತ್ತೆ ಸಿಗುತ್ತಾ?
ಆದರೆ ನೀವು ಫೋಟೋ ಡಿಲೀಟ್ ಮಾಡಿದ ಮೇಲೆ ಎಷ್ಟು ಬೇಗ ರಿಕವರಿ ಮಾಡುತ್ತೀರಿ ಹಾಗೂ ಎಷ್ಟು ಹೊಸ ಫೈಲ್ ಸೇವ್ ಮಾಡಿದ್ದೀರಿ ಎನ್ನುವುದರ ಮೇಲೆ ಫೋಟೋ ರಿಕವರಿ ಆಯ್ಕೆ ಯಶಸ್ಸು ಕಾಣುತ್ತದೆ.
Image credits: Getty
Kannada
ಆಟೋ ಬ್ಯಾಕ್ ಅಪ್
ಫೋಟೋ ಡಿಲೀಟ್ ಮಾಡಿ ತುಂಬಾ ಸಮಯ ಆಗಿದ್ದರೆ ರಿಕವರಿ ಮಾಡುವುದು ಕಷ್ಟ. ಆದಷ್ಟು ನಿಮ್ಮ ಫೋನಲ್ಲಿ ಆಟೋ ಬ್ಯಾಕ್ ಅಪ್ ಆಯ್ಕೆ ಆನ್ ಮಾಡಿಡಿ. ಇದರಿಂದ ಫೋಟೋ ಡಿಲೀಟ್ ಆದರೂ ಸಹ ಮತ್ತೆ ಸಿಗುತ್ತದೆ.