ಈ ಅಪ್ಲಿಕೇಶನ್ ನಿಮ್ಮನ್ನು ಹಾವುಗಳಿಂದ ರಕ್ಷಿಸುತ್ತೆ! ಮನೆಯೊಳಗೆ ಬರೋದನ್ನ ಎಚ್ಚರಿಸುತ್ತೆ
Monsoon: ಮಳೆಗಾಲದಲ್ಲಿ ಹಾವುಗಳ ಹರಿದಾಟ ಹೆಚ್ಚು. ಜನವಸತಿ ಪ್ರದೇಶಗಳತ್ತ ಬರುತ್ತವೆ. ಇಂಥ ಪರಿಸ್ಥಿತಿಯಲ್ಲಿ ಹಾವುಗಳಿಂದ ರಕ್ಷಿಸಿಕೊಳ್ಳುವುದು ಹೇಗೆ ಎಂಬ ಪ್ರಶ್ನೆ ಕಾಡುತ್ತದೆಯಲ್ಲವೇ? ಅದಕ್ಕೆ ಉತ್ತರ ಇಲ್ಲಿದೆ. ಈ ಅಪ್ಲಿಕೇಶನ್ ನಿಮ್ಮನ್ನು ಹಾವುಗಳಿಂದ ರಕ್ಷಿಸುತ್ತೆ!

ಮಳೆಗಾಲದಲ್ಲಿ ಹಾವುಗಳ ಉಪಟಳ ಯಾಕೆ?
ಮಳೆಗಾಲದಲ್ಲಿ ನಿರಂತರ ಮಳೆಯಿಂದಾಗಿ ಹಾವುಗಳು ವಾಸಿಸುವ ಹುತ್ತ ಅಥವಾ ಬಿಲಗಳು ಜಲಾವೃತಗೊಳ್ಳುವುದರಿಂದ ಸುರಕ್ಷಿತವಾಗಿ ಬೆಚ್ಚನೆಯ ವಾತಾವರಣ ಹುಡುಕಿಕೊಂಡು ಹೊರಬರುತ್ತವೆ. ಮಳೆಗಾಲದಲ್ಲಿ ಹಾವುಗಳ ಜನವಸತಿಗಳಲ್ಲಿ ಕಾಣಿಸಿಕೊಳ್ಳಲು ಕಾರಣ. ಮಳೆಗಾಲದಲ್ಲಿ ತುಂಬಾ ಎಚ್ಚರಿಕೆಯಿಂದ ಇರಬೇಕು. ಯಾವಾಗಲೂ ಬಾಗಿಲು ಭದ್ರವಾಗಿ ಮುಚ್ಚಿರಬೇಕು.
ಮಳೆಗಾಲದಲ್ಲಿ ಹಾವುಗಳ ಬಗ್ಗೆ ಎಚ್ಚರವಿರಲಿ
ನಗರಗಳಿಗಿಂತ ಹಳ್ಳಿಗಳಲ್ಲಿ ಹಾವುಗಳ ಹಾವಳಿ ಮಳೆಗಾಲದಲ್ಲಿ ವಿಪರೀತ. ಮನೆಮುಂದೆ ಮಕ್ಕಳು ಆಟ ಆಡುತ್ತಿರುತ್ತಾರೆ. ಮನೆಯ ಹೊರಗಡೆ ಶೂಗಳಿರುತ್ತವೆ. ಅಲ್ಲೆಲ್ಲ ಹಾವುಗಳು ಬೆಚ್ಚಗೆ ಮಲಗಿರುತ್ತವೆ. ಶೂ ಒಳಗಿದ್ದ ಹಾವು ಕಚ್ಚಿ ಸಾಯುವ ಘಟನೆಗಳು ಈಗಾಗಲೇ ಸಾಕಷ್ಟು ನೋಡಿದ್ದೇವೆ ಓದಿದ್ದೇವೆ. ಹೀಗಾಗಿ ಮಳೆಗಾಲದಲ್ಲಿ ಹಾವುಗಳ ಬಗ್ಗೆ ತುಂಬಾ ಎಚ್ಚರಿಕೆಯಿಂದ ಇರಬೇಕು. ಹೀಗಾಗಿ ಹಾವುಗಳಿಂದ ರಕ್ಷಣೆ ಪಡೆಯಲು ಕೆಲವೊಂದು ಸಂಗತಿಗಳನ್ನ ತಿಳಿದುಕೊಳ್ಳಬೇಕು.
ಮಳೆಗಾಲದಲ್ಲಿ ಹಾವುಗಳಿಂದ ರಕ್ಷಿಸಿಕೊಳ್ಳೋದು ಹೇಗೆ?
ಅಚ್ಚರಿ ಆಗ್ತಿದೆಯೇ? ಹೌದು. ಈ ಅಪ್ಲಿಕೇಶನ್ ನಿಮ್ಮನ್ನು ಹಾವುಗಳಿಂದ ರಕ್ಷಿಸುತ್ತದೆ. ನಿಮ್ಮ ಮನೆಗೆ ಹಾವುಗಳ ಪ್ರವೇಶಿಸವುದನ್ನ ಎಚ್ಚರಿಸುತ್ತದೆ. ಇದು ಹಾವುಗಳಿಂದ ಎಚ್ಚರಿಕೆ ನೀಡಲೆಂದೇ ಇರುವ ಅಪ್ಲಿಕೇಶನ್. ಹಾವುಗಳ ಹಾವಳಿ ಹೆಚ್ಚಿರುವ ಪ್ರದೇಶಗಳಲ್ಲಿ ವಾಸಿಸುವವರಿಗೆ ಈ ತಂತ್ರಜ್ಞಾನ ವರದಾನ.
ಭಾರತದಲ್ಲಿ ಪ್ರತಿ ವರ್ಷ ಹಾವುಗಳ ಕಡಿತದಿಂದ ಸಾವನ್ನಪ್ಪುವವರ ಸಂಖ್ಯೆ ಹೆಚ್ಚುತ್ತಿದೆ. ಅದರಲ್ಲೂ ಮಳೆಗಾಲದಲ್ಲಿ ಹಾವುಗಳ ಕಡಿತ ಮತ್ತು ಹೀಗೆ ಬಲಿಯಾಗುವವರಲ್ಲಿ ಗ್ರಾಮೀಣ ಭಾಗದ ಕೃಷಿಕರೇ ಹೆಚ್ಚಿರುವುದು ಆತಂಕಪಡುವ ವಿಷಯ. ಇದಕ್ಕೆ ಕಾರಣ. ಹಾವುಗಳ ಬಗ್ಗೆ ಹೆಚ್ಚಾಗಿ ತಿಳಿಯದಿರುವುದು, ಮಳೆಗಾಲದಲ್ಲಿ ಹಾವುಗಳ ಬಗ್ಗೆ ಎಚ್ಚರಿಕೆವಹಿಸದಿರವುದೂ ಒಂದು ಕಾರಣ.
ಬಿಗ್ 4 ಮ್ಯಾಪರ್ : ಈ ಅಪ್ಲಿಕೇಶನ್ ನಿಮ್ಮನ್ನು ಹಾವುಗಳಿಂದ ರಕ್ಷಿಸುತ್ತೆ!
ಇಂಥ ಪರಿಸ್ಥಿತಿಯಲ್ಲಿ ಕೆಲವು ವಿಶೇಷ ಮೊಬೈಲ್ ಅಪ್ಲಿಕೇಷನ್‌ಗಳು ಬಂದಿವೆ. ಜನರು ಹಾವುಗಳ ಬಗ್ಗೆ ಮಾಹಿತಿ ಪಡೆಯಲು, ಅಪಾಯಕಾರಿ ಪ್ರದೇಶ ಗುರುತಿಸಲು, ತುರ್ತು ಪರಿಸ್ಥಿತಿಯಲ್ಲಿ ಸೂಕ್ತ ಸಹಾಯ ಮಾಡಲು ಈ ಅಪ್ಲಿಕೇಶನ್ ಸಹಾಯಕವಾಗಿವೆ. ಹಾಗಾದರೆ ಯಾವ ಆಪ್ ನಿಮ್ಮನ್ನು ಹಾವುಗಳಿಂದ ರಕ್ಷಿಸುತ್ತದೆ ಎಂಬುದು ಇಲ್ಲಿ ತಿಳಿದುಕೊಳ್ಳೋಣ.
ಏನಿದು ಬಿಗ್ 4 ಮ್ಯಾಪರ್?
ಈ ಅಪ್ಲಿಕೇಶನ್ ಹಾವುಗಳ ಬಗ್ಗೆ ಮಾಹಿತಿ ಅಪ್ಲಿಕೇಶನ್‌ಗಳಲ್ಲಿ ಅತ್ಯಂತ ಜನಪ್ರಿಯ. ಇದರ ಪ್ರಮುಖ ವೈಶಿಷ್ಟ್ಯವೆಂದರೆ ಅದರ ನಕ್ಷೆ ಆಧಾರಿತ ವ್ಯವಸ್ಥೆ(Map based system), ಬಳಕೆದಾರರು ತಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಎಲ್ಲಿ ಹಾವುಗಳು ಕಂಡುಬಂದಿವೆ ಮತ್ತು ಯಾವ ಪ್ರದೇಶಗಳನ್ನು ಹೆಚ್ಚು ಅಪಾಯಕಾರಿ ಎಂದು ಪರಿಗಣಿಸಲಾಗಿದೆ ಎಂಬುದನ್ನು ನೋಡಲು ಅನುವು ಮಾಡಿಕೊಡುತ್ತದೆ. ಇದು ಜನರು ಜಾಗರೂಕರಾಗಿರಲು ಮತ್ತು ಅಂತಹ ಪ್ರದೇಶಗಳನ್ನು ತಪ್ಪಿಸಲು ಸಹಾಯ ಮಾಡುತ್ತೆ. ಹೊಲಗಳಲ್ಲಿ ಕೆಲಸ ಮಾಡುವ ರೈತರು, ಕಾಡುಗಳ ಬಳಿ ವಾಸಿಸುವ ಜನರು ಮತ್ತು ರಾತ್ರಿಯಲ್ಲಿ ಹೊರಗೆ ಹೋಗುವವರಿಗೆ ಈ ಫಿಚರ್ ವಿಶೇಷವಾಗಿ ಉಪಯುಕ್ತವಾಗಿದೆ. ಅಪ್ಲಿಕೇಶನ್ ಜಿಪಿಎಸ್ ಆಧಾರಿತ ಸ್ಥಳ ವ್ಯವಸ್ಥೆಯನ್ನು ಬಳಸುತ್ತದೆ, ಇದು ಅಪಾಯಕಾರಿ ಪ್ರದೇಶಗಳನ್ನು ಗುರುತಿಸಲು ಸುಲಭಗೊಳಿಸುತ್ತದೆ.
ಅಪ್ಲಿಕೇಶ್‌ನಲ್ಲಿ ಹಾವುಗಳ ಬಗ್ಗೆ ಫೋಟೋ ದೊಂದಿಗೆ ವಿವರಣೆ
ಬಹಳಷ್ಟು ಜನರು ಹಾವುಗಳೆಲ್ಲ ವಿಷ ಜೀವಿಗಳೆಂದೇ ನಂಬುತ್ತಾರೆ. ಹಾವುಗಳಲ್ಲಿ ವಿಷ ಸರ್ಪಗಳಿವೆ. ಯಾವುದೇ ವಿಷವಿಲ್ಲದ ಹಾವುಗಳೂ ಇವೆ. ಆದರೆ ಅಂತ ಹಾವುಗಳನ್ನು ಜನರು ಗುರುತಿಸುವಲ್ಲಿ ಸೋಲುತ್ತಾರೆ. ಬಹುತೇಕರಿಗೆ ಹಾವುಗಳ ಬಗ್ಗೆ ಸರಿಯಾದ ಮಾಹಿತಿ ಇಲ್ಲದಿರುವುದು. ಹೀಗಾಗಿ ಈ ಅಪ್ಲಿಕೇಶನ್ ಹಾವುಗಳ ಬಗ್ಗೆ ಸರಿಯಾದ ಮಾಹಿತಿ ನೀಡುವುದಲ್ಲದೇ, ಯಾವುದು ವಿಷಕಾರಿ, ಯಾವುದು ಅಲ್ಲ ಎಂಬುದುನ್ನ ವಿವರಿಸುತ್ತದೆ. ಈ ಅಪ್ಲಿಕೇಶನಲ್ಲಿ ವಿವಿಧ ಪ್ರಬೇಧ, ಜಾತಿಯ ಹಾವುಗಳ ಫೋಟೋ, ವಿವರಣೆಗಳಿವೆ. ಇದು ಹಾವುಗಳನ್ನ ಸುಲಭವಾಗಿ ಗುರುತಿಸಲು ಸಹಾಯ ಮಾಡುತ್ತದೆ.
ಈ ಅಪ್ಲಿಕೇಶ್ ಹೆಚ್ಚಾಗಿ ಭಾರತದ ಅತ್ಯಂತ ಅಪಾಯಕಾರಿ ವಿಷಪೂರಿತ ಹಾವುಗಳ ಮೇಲೆ ಕೇಂದ್ರೀಕರಿಸುತ್ತದೆ. ಇವುಗಳಲ್ಲಿ ನಾಗರಹಾವು, ಸಾಮಾನ್ಯ ಕ್ರೈಟ್, ರಸೆಲ್ಸ್ ವೈಪರ್ ಮತ್ತು ಗರಗಸ-ಸ್ಕೇಲ್ಡ್ ವೈಪರ್ ಸೇರಿವೆ. ಈ ಜಾತಿಗಳು ದೇಶದಲ್ಲಿ ಅತಿ ಹೆಚ್ಚು ಹಾವು ಕಡಿತದಿಂದ ಸಾವನ್ನಪ್ಪುತ್ತವೆ.
ಒಬ್ಬ ವ್ಯಕ್ತಿಗೆ ಹಾವು ಕಚ್ಚಿದರೆ, ಅಂತಹ ಪರಿಸ್ಥಿತಿಯಲ್ಲಿ ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದರ ಕುರಿತು ಈ ಅಪ್ಲಿಕೇಶನ್ ತಕ್ಷಣದ ಸಲಹೆಯನ್ನು ನೀಡುತ್ತದೆ. ಅನೇಕ ಜನರು, ಭಯಭೀತರಾಗಿ, ಮನೆಮದ್ದುಗಳು ಅಥವಾ ಸಾಂಪ್ರದಾಯಿಕ ವಿಧಾನಗಳನ್ನು ಆಶ್ರಯಿಸುತ್ತಾರೆ, ಇದು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಬಹುದು. ಅಂತಹ ಸಂದರ್ಭಗಳಲ್ಲಿ, ಜನರು ತಕ್ಷಣ ವೈದ್ಯಕೀಯ ಸಹಾಯವನ್ನು ಪಡೆಯಲು ಮತ್ತು ಸರಿಯಾದ ಪ್ರಥಮ ಚಿಕಿತ್ಸೆ ನೀಡಲು ಅಪ್ಲಿಕೇಶನ್ ಸಹಾಯ ಮಾಡುತ್ತದೆ.
ಈ ಅಪ್ಲಿಕೇಶನ್‌ಗಳ ಜೊತೆಗೆ, ಹಲವಾರು ರಾಜ್ಯಗಳು ಹಾವುಗಳ ದೃಶ್ಯಗಳ ಬಗ್ಗೆ ಮಾಹಿತಿಯನ್ನು ಅಧಿಕೃತ ಹಾವು ರಕ್ಷಣಾ ತಂಡಗಳು ಮತ್ತು ಅರಣ್ಯ ಇಲಾಖೆ ಸಿಬ್ಬಂದಿಗೆ ನೇರವಾಗಿ ರವಾನಿಸುವ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಿವೆ. ಇದು ಹಾವನ್ನು ಸುರಕ್ಷಿತವಾಗಿ ಸೆರೆಹಿಡಿಯಲು ಮತ್ತು ರಕ್ಷಿಸಲು ಅನುವು ಮಾಡಿಕೊಡುತ್ತದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.
