ಬೆಂಗಳೂರು: ವೀರ್‌ ಸಾವರ್ಕರ್‌ ಕಂಚಿನ ಪುತ್ಥಳಿ ಅನಾವರಣ

First Published 16, Aug 2020, 8:06 AM

ಬೆಂಗಳೂರು(ಆ.16):ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಸಂದರ್ಭದಲ್ಲಿ 14 ವರ್ಷಗಳ ಕಠಿಣ ಜೈಲು ಶಿಕ್ಷೆ ಅನುಭವಿಸಿದ ಏಕೈಕ ಸ್ವಾತಂತ್ರ್ಯ ಹೋರಾಟಗಾರ ವಿ.ಡಿ. ಸಾವರ್ಕರ್‌. ಇವರ ದೇಶಪ್ರೇಮ ಹಾಗೂ ದೇಶಭಕ್ತಿ ಯುವಜನತೆಗೆ ಮಾದರಿಯಾಗಿದೆ ಎಂದು ಮೇಯರ್‌ ಎಂ. ಗೌತಮ್‌ ಕುಮಾರ್‌ ಅಭಿಪ್ರಾಯಪಟ್ಟಿದ್ದಾರೆ. 
 

<p>ಬಿಬಿಎಂಪಿ ವತಿಯಿಂದ ಯಡಿಯೂರು ವಾರ್ಡ್‌ನ ವಾಣಿಜ್ಯ ಸಂಕೀರ್ಣದ ಎದುರು ನಿರ್ಮಿಸಲಾದ ಸಾವರ್ಕರ್‌ ಅವರ 5.5 ಅಡಿ ಎತ್ತರದ ಕಂಚಿನ ಪುತ್ಥಳಿಯನ್ನು ಶನಿವಾರ ಅನಾವರಣಗೊಳಿಸಿ ಮಾತನಾಡಿದ ಅವರು, ದೇಶದ ಸ್ವಾತಂತ್ರ್ಯಕ್ಕಾಗಿ ಮಂಗಲ್‌ಪಾಂಡೆ ಸೇರಿದಂತೆ ಹಲವು ಹೋರಾಟಗಾರರು ಬಲಿದಾನ ಮಾಡಿದ್ದಾರೆ. ಈ ಮಹಾನ್‌ ವ್ಯಕ್ತಿಯ ಇತಿಹಾಸ ತಿಳಿದರೆ ಎಂಥಹ ಅಪ್ರತಿಮ ಹೋರಾಟಗಾರ ಎಂಬುದು ಅರಿವಿಗೆ ಬರುತ್ತದೆ. ಪಾಲಿಕೆ 198 ವಾರ್ಡ್‌ ಗಳ ಪೈಕಿ ಪ್ರಥಮವಾಗಿ ಯಡಿಯೂರು ವಾರ್ಡ್‌ ನಲ್ಲಿ ವೀರ ಸಾವರ್ಕರ ಪುತ್ಥಳಿ ಅನಾವರಣವಾಗುತ್ತಿರುವುದು ಸಂತಸ ತಂದಿದೆ ಎಂದರು.</p>

ಬಿಬಿಎಂಪಿ ವತಿಯಿಂದ ಯಡಿಯೂರು ವಾರ್ಡ್‌ನ ವಾಣಿಜ್ಯ ಸಂಕೀರ್ಣದ ಎದುರು ನಿರ್ಮಿಸಲಾದ ಸಾವರ್ಕರ್‌ ಅವರ 5.5 ಅಡಿ ಎತ್ತರದ ಕಂಚಿನ ಪುತ್ಥಳಿಯನ್ನು ಶನಿವಾರ ಅನಾವರಣಗೊಳಿಸಿ ಮಾತನಾಡಿದ ಅವರು, ದೇಶದ ಸ್ವಾತಂತ್ರ್ಯಕ್ಕಾಗಿ ಮಂಗಲ್‌ಪಾಂಡೆ ಸೇರಿದಂತೆ ಹಲವು ಹೋರಾಟಗಾರರು ಬಲಿದಾನ ಮಾಡಿದ್ದಾರೆ. ಈ ಮಹಾನ್‌ ವ್ಯಕ್ತಿಯ ಇತಿಹಾಸ ತಿಳಿದರೆ ಎಂಥಹ ಅಪ್ರತಿಮ ಹೋರಾಟಗಾರ ಎಂಬುದು ಅರಿವಿಗೆ ಬರುತ್ತದೆ. ಪಾಲಿಕೆ 198 ವಾರ್ಡ್‌ ಗಳ ಪೈಕಿ ಪ್ರಥಮವಾಗಿ ಯಡಿಯೂರು ವಾರ್ಡ್‌ ನಲ್ಲಿ ವೀರ ಸಾವರ್ಕರ ಪುತ್ಥಳಿ ಅನಾವರಣವಾಗುತ್ತಿರುವುದು ಸಂತಸ ತಂದಿದೆ ಎಂದರು.

<p>ಸಾವರ್ಕರ್‌ ಕಂಚಿನ ಪುತ್ಥಳಿ 5.5 ಅಡಿ ಎತ್ತರವಿದ್ದು, 500 ಕೆ.ಜಿ. ತೂಕವಿದ್ದು 5 ಲಕ್ಷ ರು. ವೆಚ್ಚವಾಗಿದೆ. ಸಾವರ್ಕರರ ಜನನದಿಂದ, ಮರಣದವರೆಗಿನ ಇತಿಹಾಸ, ಹೋರಾಟ ಹಾಗೂ ಅವರ 9 ಕೃತಿಗಳ ಮಾಹಿತಿ ನೀಡಲಾಗಿದೆ.</p>

ಸಾವರ್ಕರ್‌ ಕಂಚಿನ ಪುತ್ಥಳಿ 5.5 ಅಡಿ ಎತ್ತರವಿದ್ದು, 500 ಕೆ.ಜಿ. ತೂಕವಿದ್ದು 5 ಲಕ್ಷ ರು. ವೆಚ್ಚವಾಗಿದೆ. ಸಾವರ್ಕರರ ಜನನದಿಂದ, ಮರಣದವರೆಗಿನ ಇತಿಹಾಸ, ಹೋರಾಟ ಹಾಗೂ ಅವರ 9 ಕೃತಿಗಳ ಮಾಹಿತಿ ನೀಡಲಾಗಿದೆ.

<p>ಬಿಬಿಎಂಪಿ ಆಯುಕ್ತ ಎನ್‌. ಮಂಜುನಾಥ್‌ ಪ್ರಸಾದ್‌, ಉಪ ಮೇಯರ್‌ ರಾಮಮೋಹನ ರಾಜು, ಕಾರ್ಪೊರೇಟರ್‌ ಪೂರ್ಣಿಮಾ ರಮೇಶ್‌, ದಕ್ಷಿಣ ವಲಯದ ಜಂಟಿ ಆಯುಕ್ತ ವಿ.ಎನ್‌. ವೀರಭದ್ರಸ್ವಾಮಿ, ಮಾಜಿ ಕಾರ್ಪೊರೇಟರ್‌ ಎನ್‌.ಆರ್‌ ರಮೇಶ್‌ ಇದ್ದರು.</p>

ಬಿಬಿಎಂಪಿ ಆಯುಕ್ತ ಎನ್‌. ಮಂಜುನಾಥ್‌ ಪ್ರಸಾದ್‌, ಉಪ ಮೇಯರ್‌ ರಾಮಮೋಹನ ರಾಜು, ಕಾರ್ಪೊರೇಟರ್‌ ಪೂರ್ಣಿಮಾ ರಮೇಶ್‌, ದಕ್ಷಿಣ ವಲಯದ ಜಂಟಿ ಆಯುಕ್ತ ವಿ.ಎನ್‌. ವೀರಭದ್ರಸ್ವಾಮಿ, ಮಾಜಿ ಕಾರ್ಪೊರೇಟರ್‌ ಎನ್‌.ಆರ್‌ ರಮೇಶ್‌ ಇದ್ದರು.

<p>ಬಿಬಿಎಂಪಿ ವತಿಯಿಂದ ಯಡಿಯೂರು ವಾರ್ಡ್‌ನ ವಾಣಿಜ್ಯ ಸಂಕೀರ್ಣದ ಎದುರು ನಿರ್ಮಿಸಲಾದ ಸ್ವಾತಂತ್ರ್ಯ ಹೋರಾಟಗಾರ ವಿ.ಡಿ. ಸಾವರ್ಕರ್‌ ಅವರ ಕಂಚಿನ ಪುತ್ಥಳಿಯನ್ನು ಮೇಯರ್‌ ಗೌತಮ್‌ ಕುಮಾರ್‌ ಶನಿವಾರ ಅನಾವರಣಗೊಳಿಸಿದರು.</p>

ಬಿಬಿಎಂಪಿ ವತಿಯಿಂದ ಯಡಿಯೂರು ವಾರ್ಡ್‌ನ ವಾಣಿಜ್ಯ ಸಂಕೀರ್ಣದ ಎದುರು ನಿರ್ಮಿಸಲಾದ ಸ್ವಾತಂತ್ರ್ಯ ಹೋರಾಟಗಾರ ವಿ.ಡಿ. ಸಾವರ್ಕರ್‌ ಅವರ ಕಂಚಿನ ಪುತ್ಥಳಿಯನ್ನು ಮೇಯರ್‌ ಗೌತಮ್‌ ಕುಮಾರ್‌ ಶನಿವಾರ ಅನಾವರಣಗೊಳಿಸಿದರು.

loader