'ಆಹಾರ ರುಚಿಸುತ್ತಿರಲಿಲ್ಲ, ಆದ್ರೂ ತಿನ್ಬೇಕಿತ್ತು' : ಕೊರೋನಾ ಗೆದ್ದ ಸುಮಲತಾ ಮಾತುಗಳಿವು
ನಟಿ, ಸಂಸದೆ ಸುಮಲತಾ ಅಂಬರೀಶ್ ತಮಗೆ ಕೊರೋನಾ ಪಾಸಿಟಿವ್ ಬಂದಿದೆ ಎಂದು ಬಹಿರಂಗವಾಗಿ ಹೇಳಿದ ಕರ್ನಾಟಕದ ಮೊದಲ ಸೆಲೆಬ್ರಿಟಿ. ಕೊರೋನಾ ಗೆದ್ದ ಅವರೇನು ಹೇಳ್ತಾರೆ..? ಇಲ್ಲಿ ಓದಿ
ನಟಿ, ಸಂಸದೆ ಸುಮಲತಾ ಅಂಬರೀಶ್ ತಮಗೆ ಕೊರೋನಾ ಪಾಸಿಟಿವ್ ಬಂದಿದೆ ಎಂದು ಬಹಿರಂಗವಾಗಿ ಹೇಳಿದ ಕರ್ನಾಟಕದ ಮೊದಲ ಸೆಲೆಬ್ರಿಟಿ.
ಕೊರೋನಾ ಸೋಂಕಿತಾರದ ನಂತರ ಚಿಕಿತ್ಸೆ ಪಡೆದು 18 ದಿನ ಹೋಂ ಕ್ವಾರೆಂಟೈನ್‌ನಲ್ಲಿದ್ದ ಸುಮಲತಾ ಮತ್ತೆ ಹುಷಾರಾಗಿ ಬಂದಿದ್ದಾರೆ.
ಮೊದಲಿನ ಸ್ವಲ್ಪ ಜ್ವರ ಮತ್ತು ಮೈ ಕೈ ನೋವಿತ್ತು. ನನಗೆ ಆಗಲೇ ಕೊರೋನಾ ವೈರಸ್ ಸೋಂಕು ಇರಬಹುದೆಂಬ ಸಂಶಯವೂ ಉಂಟಾಯಿತು ಎಂದಿದ್ದಾರೆ ಸುಮಲತಾ.
ನನ್ನ ಕ್ಷೇತ್ರದಲ್ಲಿ ನಾನು ಆಗಾಗ ಓಡಾಡುತ್ತಿದೆ. ಅಲ್ಲಿಯ= ಹಳ್ಳಿಯ ಜನರಿಗೆ ಸಾಮಾಜಿಕ ಅಂತರದ ಬಗ್ಗೆ ಅಷ್ಟೊಂದು ತಿಳಿದಿಲ್ಲ. ಹಾಗಾಗಿ ಹೀಗೇನಾದರೂ ಆಗಬಹುದೆಂಬ ನಿರೀಕ್ಷೆ ಮೊದಲೇ ಇತ್ತು ಎಂದಿದ್ದಾರೆ.
ಕೊರೋನಾ ಟೆಸ್ಟ್ ವರದಿ ಬಂದಾಗ ನಾನದಕ್ಕೆ ಮಾನಸಿಕವಾಗಿ ಸಿದ್ಧಳಾಗಿದ್ದೆ. ಕೊರೋನಾ ಬಂದಾಯ್ತು, ಇದರ ವಿರುದ್ಧ ಹೋರಾಡಲೇ ಬೇಕೆಂಬುದು ನನ್ನ ಅರಿವಿನಲ್ಲಿತ್ತು ಎಂದಿದ್ದಾರೆ.
ಕ್ವಾರೆಂಟೈನ್ ಸಮಯದಲ್ಲಿ ನಾನು ಮಿಸ್ ಮಾಡಿಕೊಂಡಿದ್ದ ಸಿರೀಸ್, ಸಿನಿಮಾಗಳನ್ನು ನೋಡಿದೆ. ಪುಸ್ತಕಗಳನ್ನೂ ಓದಿದೆ ಎಂದಿದ್ದಾರೆ.
ಅಭಿಷೇಕ್ ಕೂಡಾ ಕ್ವಾರೆಂಟೈನ್ ಆಗಿದ್ದರಿಂದ ನಾನು ಅವನೂ ಬಾಲ್ಕನಿಯಲ್ಲೇ ಮಾಸ್ಕ್ ಹಾಕಿ ನಿಂತು ಮಾತನಾಡುತ್ತಿದ್ದೆವು ಎಂದು ಹೇಳಿದ್ದಾರೆ.
ಕೊಠಡಿಯ ಮುಂದೆ ಆಹಾರ ಇರಿಸುತ್ತಿದ್ದರು. ಆರಂಭದಲ್ಲಿ ನಾಲಗೆಯ ರುಚಿಯೇ ಹೋಗಿತ್ತು. ಆದರೂ ತಿನ್ನಲೇಬೇಕಿತ್ತು. ನಾನು ಕೋಣೆಯಲ್ಲಿಯೇ ಉಸಿರಾಟದ ಕೆಲವು ವ್ಯಾಯಾಮ, ಸ್ವಲ್ಪ ವಾಕಿಂಗ್, ನನ್ನ ದೇಹದ ಉಷ್ಣತೆಯನ್ನೂ ಪರೀಕ್ಷಿಸುತ್ತಿದ್ದೆ ಎಂದಿದ್ದಾರೆ.
ಹಲವರಿಗೆ ಹೋಲಿಸಿದಲ್ಲಿ ನನ್ನಲ್ಲಿ ಕೊರೋನಾದ ಲಕ್ಷಣ ಬಹಳ ಚಿಕ್ಕದಾಗಿ ಕಾಣಿಸಿಕೊಂಡಿತ್ತು. ಒಮ್ಮೆ ಜ್ವರ 101 ಡಿಗ್ರಿ ಹೋಗಿತ್ತು. ಆಗ ವೈದ್ಯರು ಹೆದರಿಕೊಂಡಿದ್ದರು ಎಂದಿದ್ದಾರೆ.
ಕೊರೋನಾ ಬಲಿಷ್ಠ ಎದುರಾಳಿ. ನಾವು ಅದರ ವಿರುದ್ಧ ಹೋರಾಡಲೇಬೇಕು ಎಂದಿದ್ದಾರೆ.
ಮುಖ್ಯವಾಗಿ ನಾವು ಪಾಸಿಟಿವ್ ಆಗಿರಬೇಕು. ನಾವು ವಿಶ್ವಾಸ ಕಳೆದುಕೊಳ್ಳಬಾರದು ಎಂದಿದ್ದಾರೆ.
ನಾನೇನು ಮಾಡಬೇಕೆಂದು ಬಹಳಷ್ಟು ಮೆಸೇಜುಗಳು ಬರುತ್ತಿದ್ದವು. ನಾವು ನಮ್ಮ ವೈದ್ಯರನ್ನು ನಂಬಿಕೊಂಡು, ನಮ್ಮ ದೇಹ ಹೇಳುವುದನ್ನು ಕೇಳಬೇಕು ಎಂದಿದ್ದಾರೆ.
ಕೊರೋನಾ ಬಂದಾಗ ನಾಚಿಗೆ ಪಡಬೇಕಿಲ್ಲ. ಕೊರೋನಾ ಮಾನವೀಯತೆಯ ಕೆಟ್ಟ ಮುಖವನ್ನು ತೋರಿಸಿದೆ. ಎಲ್ಲರೂ ವೈರಸ್ ಸೋಂಕು ತಗುಲದಂತೆ ನೋಡಬೇಕು. ಹಾಗೊಂದು ವೇಳೆ ಸೋಂಕು ತಗುಲಿದರೆ ಅದು ಪ್ರಪಂಚದ ಅಂತ್ಯವೇನಲ್ಲ ಎಂದಿದ್ದಾರೆ ಸುಮಲತಾ.