MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • State
  • ಆ ಹೂವಿನ ಹಾರ ಮಾತ್ರ ಬೇಡ; ಕಾರ್ಯಕರ್ತರಲ್ಲಿ ಡಿಕೆ ಶಿವಕುಮಾರ್ ವಿಶೇಷ ಮನವಿ

ಆ ಹೂವಿನ ಹಾರ ಮಾತ್ರ ಬೇಡ; ಕಾರ್ಯಕರ್ತರಲ್ಲಿ ಡಿಕೆ ಶಿವಕುಮಾರ್ ವಿಶೇಷ ಮನವಿ

ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಡಿ.ಕೆ.ಶಿವಕುಮಾರ್, ತಾವಲ್ಲ, ಪಕ್ಷದ ನಿಷ್ಠಾವಂತ ಕಾರ್ಯಕರ್ತ ಮುಖ್ಯಮಂತ್ರಿಯಾಗುತ್ತಿರುವುದಾಗಿ ಹೇಳಿದ್ದಾರೆ. ತಮಗೆ  ಆ ಹೂವಿನಿಂದ ಅಲರ್ಜಿ ಇರುವುದರಿಂದ ಹಾರ ಹಾಕದಂತೆ ಮನವಿ ಮಾಡಿದ್ದು, ಅವರ ನಿವಾಸಕ್ಕೆ ಹೆಚ್ಚುವರಿ ಭದ್ರತೆ ಒದಗಿಸಲಾಗಿದೆ.

1 Min read
Author : Kannadaprabha News
Published : Jun 01 2026, 09:32 AM IST
Share this Photo Gallery
  • FB
  • TW
  • Linkdin
  • Whatsapp
14
ಪಕ್ಷದ ನಿಷ್ಠಾವಂತ ಕಾರ್ಯಕರ್ತ
Image Credit : DK Shivakumar FB

ಪಕ್ಷದ ನಿಷ್ಠಾವಂತ ಕಾರ್ಯಕರ್ತ

‘ರಾಜ್ಯದಲ್ಲಿ ನಾನು ಮುಖ್ಯಮಂತ್ರಿಯಾಗುತ್ತಿಲ್ಲ, ಪಕ್ಷದ ನಿಷ್ಠಾವಂತ ಕಾರ್ಯಕರ್ತ ಮುಖ್ಯಮಂತ್ರಿ ಸ್ಥಾನಕ್ಕೇರುತ್ತಿರುವುದು’ ಎಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ. ಇದೇ ವೇಳೆ ಸುಗಂಧರಾಜ ಹೂವಿನ ಹಾರ ಹಾಕದಂತೆ ಡಿಕೆ ಶಿವಕುಮಾರ್ ಮನವಿ ಮಾಡಿಕೊಂಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
24
ನಾನು ಪಕ್ಷದ ಒಬ್ಬ ನಿಷ್ಠಾವಂತ ಕಾರ್ಯಕರ್ತ
Image Credit : DK Shivakumar fB

ನಾನು ಪಕ್ಷದ ಒಬ್ಬ ನಿಷ್ಠಾವಂತ ಕಾರ್ಯಕರ್ತ

ಭಾನುವಾರ ಕುಮಾರಕೃಪಾ ಅತಿಥಿ ಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್‌, ರಾಜ್ಯಾದ್ಯಂತ ಕಾರ್ಯಕರ್ತರು ಸಂಭ್ರಮಿಸುತ್ತಿದ್ದಾರೆ. ಇಲ್ಲಿ ನಾನು ಮುಖ್ಯಮಂತ್ರಿಯಾಗುತ್ತಿಲ್ಲ, ಪಕ್ಷದ ಕಾರ್ಯಕರ್ತ ಮುಖ್ಯಮಂತ್ರಿ ಆಗುತ್ತಿರುವುದು. ನಾನು ಪಕ್ಷದ ಒಬ್ಬ ನಿಷ್ಠಾವಂತ ಕಾರ್ಯಕರ್ತ. ಪಕ್ಷದಲ್ಲಿದ್ದು ವಿದ್ಯಾರ್ಥಿ ನಾಯಕನಾಗಿ ಗೆದ್ದು ಬಂದಿದ್ದೇನೆ. ಅದರಿಂದ ಎಲ್ಲರಿಗೂ ಖುಷಿಯಾಗಿರಬಹುದು. ಕಾರ್ಯಕರ್ತ ಮುಖ್ಯಮಂತ್ರಿಯಾಗುತ್ತಿದ್ದಾನೆಂದು ಸಂಭ್ರಮಿಸುತ್ತಿರಬಹುದು ಎಂದರು.

Related Articles

Related image1
ಡಿಕೆ ಸಂಪುಟ ರಚನೆ ಹೇಗೆ ಅಗುತ್ತೆ? ಯಾರಿಗೆಲ್ಲಾ ಸಿಗುತ್ತೆ ಸ್ಥಾನ? ಖರ್ಗೆ ಹೇಳಿದ ರಹಸ್ಯಗಳು
Related image2
DK Shivakumar: ದೆಹಲಿ ಹೈವೋಲ್ಟೇಜ್ ಸಭೆ ಬಳಿಕ ಎಲ್ಲವೂ ಸಸ್ಪೆನ್ಸ್! ಸಿದ್ದು ರಾತ್ರಿಯೇ ವಾಪಸಾದ್ರೂ ಡಿಕೆಶಿ ದೆಹಲಿಯಲ್ಲೇ ಉಳಿದಿರುವುದೇಕೆ?
34
ಹೂವಿನ ಹಾರ ತರಬೇಡಿ
Image Credit : DK Shivakumar Social Media

ಹೂವಿನ ಹಾರ ತರಬೇಡಿ

ಪ್ರಮಾಣ ವಚನದ ನಂತರ ಕಾರ್ಯಕರ್ತರು, ನಾಯಕರು ಅಭಿನಂದಿಸಲು ಹೂವಿನ ಹಾರ ತರದಂತೆ ಡಿ.ಕೆ.ಶಿವಕುಮಾರ್‌ ಮನವಿ ಮಾಡಿದ್ದಾರೆ. ನನಗೆ ಸುಗಂಧರಾಜ ಹೂವಿನಿಂದ ಅಲರ್ಜಿಯಿದೆ. ಸುಗಂಧರಾಜ ಹೂವು ಮುಟ್ಟಿದರೆ ನನಗೆ ಅಲರ್ಜಿಯಾಗಿ ತುರಿಕೆಯಾಗುತ್ತದೆ. ಹೀಗಾಗಿ ದಯವಿಟ್ಟು ಯಾರೂ ಹೂವಿನ ಹಾರ ಮಾತ್ರ ಹಾಕಬೇಡಿ ಎಂದು ಕೋರಿದರು.

44
ನಿಯೋಜಿತ ಸಿಎಂ ನಿವಾಸಕ್ಕೆ ಹೆಚ್ಚುವರಿ ಪೊಲೀಸ್‌ ಭದ್ರತೆ
Image Credit : DK Shivakumar FB

ನಿಯೋಜಿತ ಸಿಎಂ ನಿವಾಸಕ್ಕೆ ಹೆಚ್ಚುವರಿ ಪೊಲೀಸ್‌ ಭದ್ರತೆ

ನಿಯೋಜಿತ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಸದಾಶಿವನಗರ ನಿವಾಸದ ಮುಂದೆ ಕೆಎಸ್‌ಆರ್‌ಪಿ ತುಕಡಿಗಳನ್ನು ನಿಯೋಜಿಸಿ ಹೆಚ್ಚುವರಿ ಪೊಲೀಸ್‌ ಭದ್ರತೆ ಕಲ್ಪಿಸಲಾಗಿದೆ. ಶಿವಕುಮಾರ್ ಅವರ ನಿವಾಸದ ಮುಂಭಾಗದ ರಸ್ತೆ ಉದ್ದಕ್ಕೂ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ. ರಸ್ತೆಯ ಎರಡೂ ಪ್ರವೇಶದಲ್ಲಿ ಬ್ಯಾರಿಕೇಡ್ ಹಾಕಿ ಪ್ರವೇಶ ನಿರ್ಬಂಧಿಸಲಾಗಿದೆ. ಸ್ಥಳೀಯ ವಾಹನಗಳು, ಆಪ್ತರ ವಾಹನಗಳನ್ನು ಬಿಟ್ಟು ಬೇರೆ ವಾಹನಗಳ ಪ್ರವೇಶ ನಿಷೇಧಿಸಲಾಗಿದೆ. ಕಾರ್ಯಕರ್ತರು, ಅಭಿಮಾನಿಗಳ ನಿಯಂತ್ರಣಕ್ಕೆ ಹೆಚ್ಚುವರಿ ಪೊಲೀಸ್‌ ಸಿಬ್ಬಂದಿ ನಿಯೋಜಿಸಲಾಗಿದೆ. ಹಿರಿಯ ಪೊಲೀಸ್‌ ಅಧಿಕಾರಿಗಳು ಶಿವಕುಮಾರ್‌ ನಿವಾಸಕ್ಕೆ ಭೇಟಿ ನೀಡಿ ಚರ್ಚೆ ನಡೆಸಿದ್ದಾರೆ

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

KN
Kannadaprabha News
1967ರ ನವೆಂಬರ್ 4ರಂದು ಆರಂಭವಾದ ಕನ್ನಡಪ್ರಭ ಕನ್ನಡ ಪತ್ರಿಕೋದ್ಯಮದಲ್ಲಿಯೇ ವಿಶೇಷ ಛಾಪು ಮೂಡಿಸಿದ ಕನ್ನಡ ದಿನ ಪತ್ರಿಕೆ. ದೇಶ, ವಿದೇಶ, ವಾಣಿಜ್ಯ, ಕ್ರೀಡೆ, ಮನೋರಂಜನೆ ಸೇರಿ ವೈವಿಧ್ಯಮಯ ಸುದ್ದಿಗಳ ಹೂರಣ ಹೊತ್ತು ತರುವ ಕನ್ನಡಪ್ರಭ, ಕನ್ನಡಿಗರ ಅಸ್ಮಿತೆಯ ಸಂಕೇತ. ಸದಾ ಕರುನಾಡು, ನುಡಿ, ಸಂಸ್ಕೃತಿ ಪರ ಧ್ವನಿ ಎತ್ತುವ ಕನ್ನಡಪ್ರಭ ದಿನ ಪತ್ರಿಕೆಯಲ್ಲಿ ಪ್ರಕಟಗೊಳ್ಳುವ ಸುದ್ದಿಗಳು ಸುವರ್ಣ ನ್ಯೂಸ್ ವೆಬ್‌ಸೈಟಲ್ಲೂ ಲಭ್ಯ.
ಡಿ.ಕೆ. ಶಿವಕುಮಾರ್

Latest Videos
Recommended Stories
Recommended image1
ಖಾಕಿ ಹೈ ಅಲರ್ಟ್‌ನಲ್ಲೂ ಆರ್‌ಸಿಬಿ ಸಂಭ್ರಮಾಚರಣೆ; ಪಟಾಕಿ ಸಿಡಿಸಿ ಕುಣಿದ ಅಭಿಮಾನಿಗಳು
Recommended image2
Karnataka News Live: ಸ್ಕೂಟರ್ ಓಡಿಸಲು ಹೋದ ಒಂಬತ್ತನೇ ಕ್ಲಾಸ್ ವಿದ್ಯಾರ್ಥಿ ಟ್ರ್ಯಾಕ್ಟರ್‌ಗೆ ಸಿಲುಕಿ ಬಲಿ!
Recommended image3
ಸತೀಶ್ ಜಾರಕಿಹೊಳಿ ಭೇಟಿ ಮಾಡಿದ 21 ಮಠಾಧೀಶರು: ಕೆಪಿಸಿಸಿ ಅಧ್ಯಕ್ಷ ಪಟ್ಟಕ್ಕಾಗಿ ಸ್ವಾಮೀಜಿಗಳ ಪಟ್ಟು!
Related Stories
Recommended image1
ಡಿಕೆ ಸಂಪುಟ ರಚನೆ ಹೇಗೆ ಅಗುತ್ತೆ? ಯಾರಿಗೆಲ್ಲಾ ಸಿಗುತ್ತೆ ಸ್ಥಾನ? ಖರ್ಗೆ ಹೇಳಿದ ರಹಸ್ಯಗಳು
Recommended image2
DK Shivakumar: ದೆಹಲಿ ಹೈವೋಲ್ಟೇಜ್ ಸಭೆ ಬಳಿಕ ಎಲ್ಲವೂ ಸಸ್ಪೆನ್ಸ್! ಸಿದ್ದು ರಾತ್ರಿಯೇ ವಾಪಸಾದ್ರೂ ಡಿಕೆಶಿ ದೆಹಲಿಯಲ್ಲೇ ಉಳಿದಿರುವುದೇಕೆ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved