MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • State
  • ಜನಸಾಮಾನ್ಯರಿಗೆ ಮತ್ತೊಂದು ಶಾಕ್, ಪೆಟ್ರೋಲ್ ಬೆಲೆ ಏರಿಕೆ ಬೆನ್ನಲ್ಲೇ ದಿನಸಿ ದರ ಹೆಚ್ಚಳ

ಜನಸಾಮಾನ್ಯರಿಗೆ ಮತ್ತೊಂದು ಶಾಕ್, ಪೆಟ್ರೋಲ್ ಬೆಲೆ ಏರಿಕೆ ಬೆನ್ನಲ್ಲೇ ದಿನಸಿ ದರ ಹೆಚ್ಚಳ

ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಬೆನ್ನಲ್ಲೇ ಇದೀಗ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಇದೀಗ ದಿನಸಿ ಬೆಲೆ ಗಗನಕ್ಕೇರಿದೆ. ರಾಜ್ಯಾದ್ಯಂತ ಅಕ್ಕಿ, ತೊಗರಿಬೇಳೆ ಸೇರಿದಂತೆ ಅಗತ್ಯವಸ್ತುಗಳ ಬೆಲೆ ಹೆಚ್ಚಳವಾಗಿದೆ. 

1 Min read
Author : Chethan Kumar
Published : May 17 2026, 11:41 AM IST
Share this Photo Gallery
  • FB
  • TW
  • Linkdin
  • Whatsapp
15
ರಾಜ್ಯದಲ್ಲಿ ದಿನಸಿ ಬೆಲೆ ಏರಿಕೆ
Image Credit : stockPhoto

ರಾಜ್ಯದಲ್ಲಿ ದಿನಸಿ ಬೆಲೆ ಏರಿಕೆ

ಮಧ್ಯಪ್ರಾಚ್ಯ ಯುದ್ಧದ ಪರಿಣಾಮ ಕಚ್ಚಾ ತೈಲ ಬೆಲೆ ಏರಿಕೆ, ವಿದೇಶಿ ವಿನಿಮಮ ಕೊರತೆ ಸೇರಿದಂತೆ ಹಲವು ಆರ್ಥಿಕ ಸಂಕಷ್ಟಗಳು ಎದುರಾಗಿದೆ. ಪರಿಣಾಮ ಭಾರತದಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ 3 ರೂಪಾಯಿ ಏರಿಕೆ ಮಾಡಲಾಗಿದೆ. ಇದರ ಬೆನ್ನಲ್ಲೇ ಅಗತ್ಯ ವಸ್ತಗಳು ಬೆಲೆ ಏರಿಕೆಯಾಗಿದೆ. ಇದೀಗ ರಾಜ್ಯದಲ್ಲಿ ದಿನಸಿ ಬೆಲೆ ಏರಿಕೆಯಾಗಿದೆ.

Add Asianetnews Kannada as a Preferred SourcegooglePreferred
25
ಅಕ್ಕಿ ಬೆಲೆಯಲ್ಲಿ ಭಾರಿ ಏರಿಕೆ
Image Credit : Getty

ಅಕ್ಕಿ ಬೆಲೆಯಲ್ಲಿ ಭಾರಿ ಏರಿಕೆ

ಎಲ್ಲಾ ವಸ್ತುಗಳ ಬೆಲೆ ಏರಿಕೆಯಿಂದ ‌ಜನ ಸಾಮಾನ್ಯರು‌‌ ಕಂಗಾಲಾಗಿದ್ದಾರೆ. ಇದೀಗ ರಾಜ್ಯಾದ್ಯಂತ ಅಕ್ಕಿ ದರದಲ್ಲಿ ಭಾರೀ ಏರಿಕೆಯಾಗಿದೆ. ಕಳೆದೊಂದು ವಾರದಿಂದ ಮಾರುಕಟ್ಟೆಯಲ್ಲಿ ಅಕ್ಕಿ ದರ ಬೆಲೆ ಹೆಚ್ಚಳವಾಗಿದೆ. ಸಾಮಾನ್ಯ ಹಾಗೂ ಪ್ರೀಮಿಯಂ ಅಕ್ಕಿ ಹೋಲ್ ಸೇಲ್ ದರದಲ್ಲಿ ₹3 ರಿಂದ ₹10ರವರೆಗೆ ಏರಿಕೆಯಾಗಿದೆ. ಕಳೆದ 15 ದಿನಗಳಿಂದ ಅಕ್ಕಿ ಬೆಲೆಯಲ್ಲಿ ನಿರಂತರ ಏರಿಕೆಯಾಗುತ್ತಿದೆ. ರೀಟೇಲ್ ಬರುವಷ್ಟರಲ್ಲಿ ಮತ್ತಷ್ಟು ದರ ಹೆಚ್ಚಳವಾಗುವ ಸಾಧ್ಯತೆ ಇದೆ.

Related Articles

Related image1
ರಾಜ್ಯದಲ್ಲಿ ಗಾಡಿ ಎಣ್ಣೆ ರೇಟ್ ಹೆಚ್ಚಾಯ್ತು, ಈ ಎಣ್ಣೆಯ ದರ ಇಳಿಕೆ ಆಯ್ತು! ಬ್ರ್ಯಾಂಡ್‌ವೈಸ್ ಬೆಲೆ ಇಲ್ಲಿದೆ ನೋಡಿ!
Related image2
ದೇಶಾದ್ಯಂತ ಇಂಧನ ದರ ಏರಿಕೆ ಬಿಸಿ: ಬೆಂಗಳೂರಿನಲ್ಲಿ 106 ರೂ. ದಾಟಿದ ಪೆಟ್ರೋಲ್! ಬೆಲೆ ಏರಿಕೆಗೆ ಕಾರಣವೇನು?
35
100 ರಿಂದ 200 ರೂಪಾಯಿ ಏರಿಕೆ
Image Credit : Pinterest

100 ರಿಂದ 200 ರೂಪಾಯಿ ಏರಿಕೆ

26 ಕೆಜಿ ಅಕ್ಕಿ ಬ್ಯಾಗ್ 100 ರಿಂದ200 ರೂಪಾಯಿ ದರ ಏರಿಕೆಯಾಗಿದೆ. ಮಳೆ ಕೊರತೆ, ಉತ್ಪಾದನೆ ಕುಸಿತದ ಜೊತೆಗೆ ಸಾರಿಗೆ ವೆಚ್ಚ ಹಾಗೂ ಗೋದಾಮು ಖರ್ಚು ಹೆಚ್ಚಳವೂ ದರ ಏರಿಕೆಗೆ ಕಾರಣವಾಗಿದೆ. ಪರಿಣಾಮ ಮಧ್ಯಮ ವರ್ಗ ಕೂಲಿ ಕಾರ್ಮಿಕರು ಜೀವನ‌ ನಡೆಸೋದು ಕಷ್ಟವಾಗಿದೆ.

45
ಅಕ್ಕಿ ದರ ಏರಿಕೆ
Image Credit : Getty

ಅಕ್ಕಿ ದರ ಏರಿಕೆ

ಸೋನಾ ಮಸೂರಿ ಸ್ಟೀಮ್

  • ಕಳೆದ ವಾರ ದರ 69ರೂ. - ಈ ವಾರದ ದರ 78 ರೂ.

RNR ಸ್ಟೀಮ್

  • ಕಳೆದ ವಾರ ದರ 69 ಈ ವಾರದ ದರ 79 ರೂ.

RNR ರಾ ರೈಸ್

  • ಕಳೆದ ವಾರ ದರ 66ರೂ.76 ರೂ.

ಸೋನಾ ಮಸೂರಿ ರಾ ರೈಸ್

  • ಕಳೆದ ವಾರ 58ರೂ. 65

ಕೋಲಂ ರಾ ರೈಸ್

  • ಕಳೆದ ವಾರ ರೂ. 69 - ರೂ. 80
55
ತೊಗರಿಬೇಳೆ ದರ ಏರಿಕೆ
Image Credit : Freepik

ತೊಗರಿಬೇಳೆ ದರ ಏರಿಕೆ

ಅಕ್ಕಿ ಬೆನ್ನಲ್ಲೇ ತೊಗರಿಬೇಳೆ ಬೆಲೆ ಏರಿಕೆಯಾಗಿದೆ. ತೊಗರಿ ಬೆಳೆ ಕೆಜಿಗೆ 125 ರಿಂದ 128 ರೂಪಾಯಿ ಏರಿಕೆಯಾಗಿದೆ. ಇದೀಗ ಇತರ ಬೇಳೆ ಕಾಳುಗಳ ಬೆಲೆಯೂ ಏರಿಕಾಯಾಗುತ್ತಿದೆ. ಜನಸಾಮಾನ್ಯರ ದಿನ ನಿತ್ಯದ ಬದುಕು ದುಬಾರಿಯಾಗುತ್ತಿದೆ. ಬೆಲೆ ಏರಿಕೆಯಿಂದ ಜೀವನ ನಿರ್ವಹಣೆ ಮಾಡಲು ಸಾಧ್ಯವಾಗದೇ ಹೈರಾಣಾಗುತ್ತಿದ್ದಾರೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ಬೆಲೆ ಏರಿಕೆ
ಭಾರತ ಸುದ್ದಿ
ಕರ್ನಾಟಕ ಸುದ್ದಿ

Latest Videos
Recommended Stories
Recommended image1
Dclutter App: ಬೆಂಗಳೂರಿಗರಿಗೆ ಗುಡ್‌ನ್ಯೂಸ್! ಹಳೆಯ ಬೆಡ್‌, ಸೋಫಾ, ಟಿವಿ ತೊಲಗಿಸಲು ಈಗ ಆ್ಯಪ್ ಸಾಕು!
Recommended image2
ಜೈಲಿನಲ್ಲಿ ನಟ ದರ್ಶನ್‌ಗೆ ಏನೆಲ್ಲಾ ಸವಲತ್ತು ಸಿಕ್ತಿದೆ? ಕಾರಗೃಹದಿಂದ ಸುಪ್ರೀಂ ಕೋರ್ಟ್‌ಗೆ ಕಂಪ್ಲೀಟ್ ವರದಿ
Recommended image3
ಬಿಡದಿ ಟೌನ್‌ಶಿಪ್ ಹೆಸರಲ್ಲಿ ರೈತರ ಭೂಮಿ ಲೂಟಿ, 20,000 ಸಾವಿರ ಎಕರೆ ಯಾರ ಹೆಸರಲ್ಲಿದೆ? ಡಿಕೆಶಿ ವಿರುದ್ಧ ಹೆಚ್‌ಡಿ ದೇವೇಗೌಡ ವಾಗ್ದಾಳಿ
Related Stories
Recommended image1
ರಾಜ್ಯದಲ್ಲಿ ಗಾಡಿ ಎಣ್ಣೆ ರೇಟ್ ಹೆಚ್ಚಾಯ್ತು, ಈ ಎಣ್ಣೆಯ ದರ ಇಳಿಕೆ ಆಯ್ತು! ಬ್ರ್ಯಾಂಡ್‌ವೈಸ್ ಬೆಲೆ ಇಲ್ಲಿದೆ ನೋಡಿ!
Recommended image2
ದೇಶಾದ್ಯಂತ ಇಂಧನ ದರ ಏರಿಕೆ ಬಿಸಿ: ಬೆಂಗಳೂರಿನಲ್ಲಿ 106 ರೂ. ದಾಟಿದ ಪೆಟ್ರೋಲ್! ಬೆಲೆ ಏರಿಕೆಗೆ ಕಾರಣವೇನು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved